ದಿನನಿತ್ಯದ ಸುದ್ದಿ- ಅಭಿಪ್ರಾಯಗಳ ಲೋಕವನ್ನು ಅಕ್ಷರ, ಆಡಿಯೋ, ವಿಡಿಯೋಗಳ ಬಹುಮಾಧ್ಯಮವನ್ನು ಉಪಯೋಗಿಸಿಕೊಂಡು ಪ್ರಚುರಪಡಿಸಲಿರುವ ಅಂತರ್ಜಾಲ ಪತ್ರಿಕೆಯೇ ಡಿಜಿಟಲ್ ಕನ್ನಡ. ಸುದ್ದಿ- ಅಭಿಪ್ರಾಯಗಳನ್ನು ಸ್ಮಾರ್ಟ್ ಫೋನ್ ಮತ್ತು ಕಂಪ್ಯೂಟರ್ ಕಿಟಕಿಯಲ್ಲಿ ಅಂತರ್ಜಾಲ ಮಾಧ್ಯಮದಲ್ಲೇ ಗ್ರಹಿಸುವ ದೊಡ್ಡದೊಂದು ಡಿಜಿಟಲ್ ಜನಸಂಖ್ಯೆ ರೂಪುಗೊಂಡಿದೆ. ಇವರಿಗೆ ಹೊಸಕಾಲಕ್ಕೆ ಪ್ರಸ್ತುತವಾಗಿರುವ ಮಾಹಿತಿ- ಮನರಂಜನೆ ಒದಗಿಸುವುದು ಡಿಜಿಟಲ್ ಕನ್ನಡ ದ ಗುರಿ. ಡಿಜಿಕನ್ ಮಲ್ಟಿಮೀಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ನೋಂದಾಯಿತ ಕಂಪನಿ ಅಡಿಯಲ್ಲಿ ಡಿಜಿಟಲ್ ಕನ್ನಡ ಕಾರ್ಯನಿರ್ವಹಿಸಲಿದೆ.
ಡಿಜಿಟಲ್ ಕನ್ನಡ ದ ಮುಖ್ಯ ಸಂಪಾದಕ ಪಿ. ತ್ಯಾಗರಾಜ್ ಅವರದ್ದು ಪತ್ರಿಕೋದ್ಯಮದಲ್ಲಿ ಭರ್ತಿ ಮೂರು ದಶಕಗಳ ಅನುಭವ. ಟೈಮ್ಸ್ ಆಫ್ ಇಂಡಿಯಾ ದಿಂದ ವೃತ್ತಿ ಪ್ರಾರಂಭಿಸಿ ನಂತರ ಈ ಸಂಜೆ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಕನ್ನಡಪ್ರಭ ಇಂಥ ಪ್ರಸಿದ್ಧ ಸಂಸ್ಥೆಗಳಲ್ಲಿ ಅತಿಮುಖ್ಯ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಪ್ರಸ್ತುತ ವಿಶ್ವವಾಣಿಯಲ್ಲಿ ಕಾರ್ಯನಿರ್ವಾಹಕ ಸಂಪಾದಕರಾಗಿದ್ದಾರೆ.