Terms and condition

  •  ಡಿಜಿಟಲ್ ಕನ್ನಡದ ಅಂತರ್ಜಾಲ ಸೇವೆ ಪಡೆಯುವುದಕ್ಕೆ ಲಾಗ್ ಆನ್ ಆದ ಕ್ಷಣದಲ್ಲಿ ಬಳಕೆದಾರನು ಇದರ ವಿಧಿ ನಿಯಮಗಳಿಗೆ ಒಳಪಟ್ಟಿರುತ್ತಾನೆ. ಕಾಲಕ್ಕೆ ತಕ್ಕಂತೆ ಈ ಸೇವೆಯಲ್ಲಿ ಬೆಳವಣಿಗೆ, ಬದಲಾವಣೆಗಳನ್ನು ಮಾಡುವ ಹಕ್ಕು ಕಂಪನಿಗಿರುತ್ತದೆ.
  • ನಿರ್ದಿಷ್ಟ ಸೇವೆಗಳನ್ನು ಪಡೆದುಕೊಳ್ಳುವುದಕ್ಕೆ ಈ ಜಾಲತಾಣವು ಬಳಕೆದಾರರ ಇ ಮೇಲ್ ಇತ್ಯಾದಿ ವಿವರಗಳನ್ನು ಪಡೆಯುತ್ತದೆ. ಅದನ್ನು ಯಾವುದೇ ಮೂರನೇ ವ್ಯಕ್ತಿ/ಸಂಸ್ಥೆ ಜತೆ ಹಂಚಿಕೊಳ್ಳುವುದಿಲ್ಲ. ಆದರೆ ಕಾನೂನಾತ್ಮಕ ನಿರ್ದೇಶನಗಳಿಂದ ಅಂಥ ಮಾಹಿತಿಯನ್ನು ಸರ್ಕಾರಕ್ಕೆ ಕೊಡಬೇಕಾದ ಸಂದರ್ಭದಲ್ಲಿ ಮಾತ್ರ ಅಂಥ ಕಾಯ್ದೆಗಳಿಗೆ ಅನುಸಾರವಾಗಿ ನಡೆದುಕೊಳ್ಳಲಾಗುತ್ತದೆ. ಮಾಹಿತಿ ಕಳುವನ್ನು ತಡೆಯುವ ಎಲ್ಲ ಉಪಕ್ರಮಗಳನ್ನೂ ಈ ಜಾಲತಾಣ ಕೈಗೊಂಡಿದೆ. ಇವನ್ನೆಲ್ಲ ಮೀರಿದ ಪರಿಸ್ಥಿತಿಗಳಿರದಿದ್ದ ಸಂದರ್ಭದಲ್ಲಿ, ಕಂಪನಿಯು ತಾನಾಗಿಯೇ ಬಳಕೆದಾರರ ಮಾಹಿತಿಯನ್ನು ಮೂರನೇ ವ್ಯಕ್ತಿ/ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವುದಿಲ್ಲ.
  • ಪ್ರತಿಕ್ರಿಯೆ, ಬರಹ ಹಾಗೂ ಇನ್ಯಾವುದೇ ಅಭಿವ್ಯಕ್ತಿ ಮಾಧ್ಯಮದಲ್ಲಿ ಡಿಜಿಟಲ್ ಕನ್ನಡ ವೇದಿಕೆಯನ್ನು ಉಪಯೋಗಿಸಿಕೊಳ್ಳುವಾಗ ನಿಂದನಾತ್ಮಕ ಮತ್ತು ಕಾನೂನಿಗೆ ವಿರುದ್ಧವಾದ ನಡೆಗಳಿಂದ ಬಳಕೆದಾರ ದೂರವಿರಬೇಕು.ಹಕ್ಕುಸ್ವಾಮ್ಯದ ಕಾಯ್ದೆಗಳನ್ನು ಉಲ್ಲಂಘಿಸದಂತೆ ಅಭಿವ್ಯಕ್ತಿಸಬೇಕಾದದ್ದು ಬಳಕೆದಾರರ ಹೊಣೆ.
  • ಡಿಜಿಟಲ್ ಕನ್ನಡದಲ್ಲಿ ಜಾಹೀರಾತುಗಳನ್ನು ಎಚ್ಚರಿಕೆಯಿಂದಲೇ ಪ್ರಕಟಿಸಲಾಗುತ್ತದೆ. ಆದಾಗ್ಯೂ ಜಾಹೀರಾತಿನಲ್ಲಿರುವ ಉತ್ಪನ್ನ/ಸೇವೆಗಳನ್ನು ಪರೀಕ್ಷಿಸಿಯೇ ಉಪಭೋಗಿಸಬೇಕಾದ ಜವಾಬ್ದಾರಿ ಬಳಕೆದಾರನದ್ದು. ಈ ವಿಷಯದಲ್ಲಿ ಡಿಜಿಟಲ್ ಕನ್ನಡ ಉತ್ತರದಾಯಿಯಾಗಿರುವುದಿಲ್ಲ.
  • ಬಳಕೆದಾರರು ತಮ್ಮ ದೂರನ್ನು ತಲುಪಿಸಬೇಕಾದ ಮಿಂಚಂಚೆ editor@digitalkannada.com

ವಿಳಾಸ

ಡಿಜಿಕನ್ ಮಲ್ಟಿಮೀಡಿಯ ಪ್ರೈವೇಟ್ ಲಿಮಿಟೆಡ್

ನಂ1, 1ನೇ ತಿರುವು, ವಿಸ್ಮಯ ಕಾಂಪ್ಲೆಕ್ಸ್, ಮುನೇಶ್ವರ ನಗರ

ಚಿಕ್ಕಲಸಂದ್ರ, ಬೆಂಗಳೂರು- 560061

ಫೋನ್- 42052448

X

Enjoying what you are reading?

Do you Want to Subscribe Us?