2015- ಸೇಮ್ ಟು ಸೇಮ್ ಕ್ರಿ.ಪೂ. 1177!

ಡಿಜಿಟಲ್ ಕನ್ನಡ ಟೀಮ್

ಗ್ರೀಸ್ ನಲ್ಲಿನ ಆರ್ಥಿಕತೆ ಸಂಪೂರ್ಣ ಶಿಥಿಲವಾಗಿದೆ.  ಲಿಬಿಯಾ, ಸಿರಿಯಾ ಮತ್ತು ಈಜಿಪ್ಟ್ ಗಳಲ್ಲಿ ಆಂತರಿಕ ದಂಗೆಗಳು ಭುಗಿಲೆದ್ದಿವೆ. ಒಳಗಡೆಯೇ ಕಾದಾಡುತ್ತಿರುವವರು ಮತ್ತು ಇವನ್ನು ತಹಬಂದಿಗೆ ತರಲು ವಿದೇಶಿ ಶಕ್ತಿಗಳು ಸಹ ಮಿಲಿಟರಿ ಬಲ ಉಪಯೋಗಿಸುತ್ತಿವೆ. ಜೊತೆಗೆ ಹೊರಗಿನವರು ಮತ್ತು ವಿದೇಶಿ ಯೋಧರು ಇವರ ಮೇಲೆ ಜ್ವಾಲೆಗಳನ್ನು ಎಸೆಯುತ್ತಿರುವುದರಿಂದ ಆರ್ಥಿತಕವಾಗಿ ತೀರ ಕೆಳಮಟ್ಟಕ್ಕೆ ಕುಸಿದಿದೆ.

ಈ ಜ್ವಾಲೆಯಲ್ಲಿ ತಾವೂ ಬೆಂದುಬಿಡುತ್ತೇವೆಂಬ ಭಯ ಟರ್ಕಿಯವರಿಗೆ. ಅದೇ ಭಯ ಇಸ್ರೇಲನ್ನೂ ಕಾಡುತ್ತಿದೆ. ಜೋರ್ಡಾನ್ ನಲ್ಲಿ ನಿರಾಶ್ರಿತರು ಕಿಕ್ಕಿರಿದು ತುಂಬಿದ್ದಾರೆ. ಇರಾಕ್ ಸಹ ಪದೇ ಪದೇ ಜಗಳಮಾಡುತ್ತಿದ್ದು ಬೆದರಿಕೆಯನ್ನು ಒಡ್ಡುತ್ತಿದೆ.

ಇವೆಲ್ಲವನ್ನೂ ಓದಿಕೊಂಡರೆ ನಿಮಗೇನನಿಸುತ್ತದೆ? ಈಗಿನ ವಿಶ್ವ ವಿದ್ಯಮಾನವನ್ನೆಲ್ಲ ಸಂಗ್ರಹಿಸಿ ಬರೆಯಲಾಗಿದೆ ಅಂತಲೇ? ನಿಮಗೆ ಅಚ್ಚರಿ ಎನಿಸಬಹುದು, ಇದು 2015ರ ಕಾಮೆಂಟರಿ ಅಲ್ಲವೇ ಅಲ್ಲ! ಕ್ರಿ. ಪೂ. 1177ರಲ್ಲಿ ಜಗತ್ತು ಹೇಗಿತ್ತು ಎಂಬುದರ ವಿವರಣೆ. ಅರ್ಥಾತ್, 2015ರಲ್ಲೂ ನಾವು ಅಂಥದೇ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಎರಿಕ್ ಎಚ್. ಕ್ಲೈನ್ ಬರೆದ- ‘1177 ಬಿಸಿ, ದ ಇಯರ್ ಸಿವಿಲೈಸೇಷನ್ ಕೊಲಾಪ್ಸ್ಡ್’ ಎಂಬ ಕೃತಿಯಲ್ಲಿ ಈ ಮೇಲೆ ವಿವರಿಸಿದ ಚಿತ್ರಣ ಕಾಣುತ್ತದೆ.

ಮೂರು ಸಾವಿರ ವರ್ಷಗಳ ಹಿಂದೆ, ಮೆಡಿಟರೇನಿಯನ್ ನಾಗರಿಕತೆಯ ಕಂಚಿನ ಯುಗ ಸಮಾಪ್ತಿಗೊಳ್ಳುವ ಕ್ಷಣದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳ ಇತಿಹಾಸದ ನಡೆಯೇ ಬದಲಾಯಿತು.

ಈಗಿನ ಸ್ಥಿತಿ ವಿವರಿಸುವುದಿದ್ದರೂ ಅಂಥ ವ್ಯತ್ಯಾಸಗಳೇನೂ ಆಗುವುದಿಲ್ಲ. ಹಾಗಾದರೆ 2015ರ ಜಗತ್ತು ಸಹ ಐತಿಹಾಸಿಕ ತಿರುವಿನಲ್ಲಿ ನಿಂತಿದೆಯೇ?

ಹೇಳಿ, ಕಾಲ ಮುಂದೋಡುತ್ತಿದೆಯೋ, ಹಿಂದಕ್ಕೋ?

Leave a Reply