ಕೆರೆ ಒತ್ತುವರಿ ತೆರವಿಗೆ ರಾಜ್ಯ ಸರಕಾರದ ಆದೇಶ

ಡಿಜಿಟಲ್ ಕನ್ನಡ ಟೀಮ್

ಗ್ರಾಮೀಣ ಭಾಗದಲ್ಲಿ ಕೆರೆ ಒತ್ತುವರಿ ತಕ್ಷಣ ತೆರವಿಗೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ 2500 ಕ್ಕೂ ಹೆಚ್ಚು ಕೆರೆಗಳು ಒತ್ತುವರಿಯಾಗಿವೆ. ಇವುಗಳನ್ನು ತೆರವುಗೊಳಿಸಿ, ಕೆರೆಯ ನಕ್ಷೆಗೆ ಅನುಗುಣವಾಗಿ ತಂತಿ ಬೇಲಿ ಅಳವಡಿಸುವಂತೆ ಸಣ್ಣ ನೀರಾವರಿ ಹಾಗೂ ಕಂದಾಯ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ನಿಗದಿತ ಕಾರ್ಯಕ್ಕೆ ಸರಕಾರ ಈಗಾಗಲೇ  90 ಕೋಟಿ ರೂ. ಬಿಡುಗಡೆ ಮಾಡಿದೆ. ಕೆರೆ ಅಭಿವೃದ್ಧಿ ಪ್ರಾಧಿಕಾರ ಕೆರೆ ಸಂರಕ್ಷಣೆ ಕಾರ್ಯ ಕೈಗೆತ್ತಿಕೊಳ್ಳಲಿದೆ. ಅಭಿವೃದ್ದಿಪಡಿಸುವ ಕೆರೆಗಳನ್ನು ಗುರುತಿಸಲಾಗಿದ್ದು, ಕೆರೆಗಳ ಸುತ್ತ ಗುಂಡಿ ತೋಡಲು ನಿರ್ಧರಿಸಲಾಗಿದೆ.

ಕೆರೆ ಒತ್ತುವರಿ ಮಾಡಿರುವವರು ಎಷ್ಟೇ ಪ್ರಭಾವಿಗಳಿದ್ದರೂ ಮುಲಾಜಿಲ್ಲದೇ ತೆರವು ಮಾಡಲಾಗುವುದು.

ರಾಜ್ಯದಲ್ಲಿ ಬರಗಾಲ ವ್ಯಾಪಕವಾಗಿದ್ದು, ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಇಂತಹ ಸಂದರ್ಭದಲ್ಲಿ ಕೆರೆ ಸಂರಕ್ಷಣೆಯಿಂದ ಅಂತರ್ಜಲ ಪ್ರಮಾಣ ಏರಲಿದ್ದು, ನೀರಿಗಾಗಿ ಜನರ ಬವಣೆ ಕಡಿಮೆಯಾಗಲಿದೆ. ಒತ್ತುವರಿ ತೆರವಿಗೆ ಅಡ್ಡಿಪಡಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ವಿಶ್ವಬ್ಯಾಂಕ್ ನೆರವಿನಡಿ ರಾಜ್ಯದ ಎಲ್ಲ ಕೆರೆಗಳ ಅಭಿವೃದ್ಧಿ ಕಾರ್ಯ ಸಧ್ಯದಲ್ಲೇ ಆರಂಭವಾಗಲಿದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವ ಈಗಾಗಲೇ ಸಿದ್ಧವಾಗಿದೆ ಎಂದು ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.

1 COMMENT

Leave a Reply