ನಾಯಿಗಳಿಗೂ ವಿಸ್ತರಿಸಿದೆ ಬಾಡಿಗೆ ತಾಯ್ತನ!

This Sept. 29, 2015, photo provided by Cornell University College of Veterinary Medicine shows seven week-old puppies born by in vitro fertilization at the Baker Institute for Animal Health in Ithaca, N.Y. The advancement opens the door for conserving endangered species of canids and for eradicating heritable diseases in dogs. (Michael Carroll/Cornell University College of Veterinary Medicine via AP)

 

ಡಿಜಿಟಲ್ ಕನ್ನಡ ಟೀಮ್

ಮಾನವ ಜಾತಿಗೆ ಸಿಮಿತವಾಗಿದ್ದ ಬಾಡಿಗೆ ತಾಯ್ತನ, ಇದೀಗಾ ವಿಜ್ಞಾನಿಗಳ ಹಲವು ವರ್ಷಗಳ ಸಂಶೋಧನೆಯ ಫಲವಾಗಿ ನಾಯಿಗಳಿಗೂ ಸಂದಿದೆ. ಸಂಶೋಧನೆ ಫಲವಾಗಿ ಪ್ರಪಂಚದ ಮೊದಲ ಐವಿಎಫ್ ನಾಯಿ ಮರಿ ಜನಿಸಿದೆ.

ಫಲವತ್ತು ಕಣದ ಸಂಶೋಧನೆಯಿಂದ ಅಳಿವಿನಂಚಿನಲ್ಲಿರುವ ಪ್ರಾಣಿ ಸಂಕುಲವನ್ನು ಬೆಳೆಸಲು ಮತ್ತು ಮಾನವ ಮತ್ತು ಪ್ರಾಣಿಗಳ ರೋಗಗಳ ವಿರುದ್ದ ಹೋರಾಡಲು ಸಹಾಯವಾಗಲಿದೆ ಎಂದು ಕಾರ್ನೆಲ್ ವಿವಿಯ ಸಂಶೋಧಕರು ಹೇಳಿದ್ದಾರೆ.

ಸವೆನ್ ಬೀಗಲ್ ಮತ್ತು ಕ್ರಾಸ್ ಬೀಡ್ ಬೀಗಲ್ ನಾಯಿಗಳಿಗೆ ಸ್ಪಾನಿಯಲ್ ನಾಯಿಯನ್ನು ಬಾಡಿಗೆ ತಾಯಿಯನ್ನಾಗಿ ಮಾಡಲಾಗಿದೆ. ಜೊತೆಗೆ ಇದೇ ರೀತಿಯಾ ಸಂಶೋಧನೆ ಮುಂದುವರೆದಿದ್ದು ಮತ್ತೆ ಮೂರು ನಾಯಿಗಳನ್ನೂ ಈ ಪ್ರಕ್ರಿಯೆಗೆ ಬಳಸಿಕೊಳ್ಳಲಾಗಿದೆ. ಮಾನವರಿಗೆ ಆಳವಡಿಸುವ ರೀತಿಯ ವಿಧಾನಗಳನ್ನೆ ಈ ಹೆಣ್ಣು ನಾಯಿಯ ಭ್ರೂಣಕ್ಕೂ ಫಲಿಕರಿಸಲಾಗಿದೆ. ಈ ಭ್ರೂಣಗಳು ಪದೇ ಪದೇ ಶೀತಲೀಕರಣಗೊಳ್ಳುತ್ತಿವೆ. ಆದರೂ ಸಹ ಸಂಶೋಧಕರ ತಂಡಗಳು ಧೃತಿಗೆಡದೆ ಬೇರೆ ಬೇರೆ ರೀತಿಯಲ್ಲಿ ಸಂಶೋಧನೆ ನಡೆಸಿ ಪರಿಪೂರ್ಣತೆಯನ್ನು ಪಡೆದುಕೊಳ್ಳುತ್ತಿದ್ದಾರೆ.

‘1970 ರಿಂದ ಇಂತಹ ಸಂಶೋಧನೆಯನ್ನು ಹಲವು ಸಂಶೋಧಕರು ನಡೆಸಿದ್ದು ಎಲ್ಲರೂ ವಿಫಲರಾಗಿದ್ದಾರೆ. ಸದ್ಯ ನಮ್ಮ ಸಂಶೋಧನೆಯ ಫಲವಾಗಿ ಏಳು ಮುದ್ದಾದ ಮತ್ತು ಆರೋಗ್ಯ ಪೂರ್ಣವಾದ ನಾಯಿಮರಿಗಳಿವೆ. ಇದು ನಮ್ಮ ಸಂಶೋಧನೆಯ ಹೊಸ ಮೈಲಿಗಲ್ಲು’ ಎಂಬುದು ರಿಯ ಸಂಶೋಧಕ ಡಾ.ಅಲೇಕ್ಸ್ ಟ್ರಾವಿಸ್ ರವರ ಹೆಮ್ಮೆಯ ನುಡಿ.

Leave a Reply