ಭಾರತ- ಜಪಾನ್ ಅಣುಬಂಧ

ಭಾರತ ಮತ್ತು ಜಪಾನ್ ಗಳ ನಡುವೆ ಐತಿಹಾಸಿಕ ಅಣುಬಂಧಕ್ಕೆ ಒಪ್ಪಿಗೆಯ ಮುದ್ರೆ ಬಿದ್ದಿದೆ. ಹಲವು ವರ್ಷಗಳಿಂದ ಮಾತುಕತೆ- ಸಂಧಾನದ ಹಂತದಲ್ಲಿದ್ದ ಒಪ್ಪಂದಕ್ಕೆ ಪ್ರಧಾನಿ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೊ ಅಬೆ ಶನಿವಾರ ಹೊಸದೆಹಲಿಯಲ್ಲಿ ಅಂಕಿತ ಹಾಕಿದ್ದಾರೆ.

ಅಣುಶಕ್ತಿ ಪೂರೈಕೆ ರಾಷ್ಟ್ರಗಳ ಪೈಕಿ ಜಪಾನ್ ಮುಖ್ಯ ಪಾತ್ರಧಾರಿಯಾಗಿದ್ದು, ಈ ಒಪ್ಪಂದದಿಂದ ಅಮೆರಿಕದೊಂದಿಗಿನ ಅಣುಬಂಧಕ್ಕೂ ಶಕ್ತಿ ಬರಲಿದೆ.

2011ರಲ್ಲಿ ಫುಕೊಶಿಮಾ ಅಣು ದುರಂತವಾದ ನಂತರ ಭಾರತದೊಂದಿಗೆ ಅಣುಬಂಧಕ್ಕೆ ಅಲ್ಲಿ ವ್ಯಾಪಕ ರಾಜಕೀಯ ವಿರೋಧ ವ್ಯಕ್ತವಾಗಿತ್ತು. ಇದೀಗ, ಒಪ್ಪಂದದ ನಂತರ ಕೆಲ ತಾಂತ್ರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಕೆಲಸವಷ್ಟೇ ಉಳಿದಿದೆ.

Leave a Reply