‘ಡಿಜಿಟಲ್ ಕನ್ನಡ’ ಲೋಕಾರ್ಪಣೆ: ಯಾರು ಏನಂದ್ರು?

‘ಮಾಹಿತಿ ತಂತ್ರಜ್ಞಾನ ನಿರೀಕ್ಷೆಗೆ ಮೀರಿದ ವೇಗದಲ್ಲಿ ಬೆಳೆಯುತ್ತಿದೆ. ಇಂಟರ್ನೆಟ್ ಮಾಧ್ಯಮದಲ್ಲಿ ನಾಳಿನ ಸುದ್ದಿ ಇಂದೇ ಬರುತ್ತಿದೆ. ಈ ಕಾಲಕ್ಕೆ ಹೊಂದಿಕೊಳ್ಳುವಲ್ಲಿ ‘ಡಿಜಿಟಲ್ ಕನ್ನಡ’ ಒಂದು ದೊಡ್ಡ ಹೆಜ್ಜೆ ಮತ್ತು ಉತ್ತಮ ಪ್ರಯತ್ನ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಭಾನುವಾರ ‘ಡಿಜಿಟಲ್ ಕನ್ನಡ’ ಅಂತರ್ಜಾಲ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

‘ಇವತ್ತಿನ ಯುವ ಜನಾಂಗ ಸೋಷಿಯಲ್ ಮೀಡಿಯಾಕ್ಕೆ ಒಗ್ಗಿಕೊಂಡಿದೆ. ಹೀಗಾಗಿ ಅವುಗಳನ್ನೇ ಬಳಸಬೇಕಿರುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಇವತ್ತಿನ ಆವಿಷ್ಕಾರ ಮತ್ತು ಬದಲಾವಣೆ ಜತೆ ಹೆಜ್ಜೆ ಹಾಕುವ ‘ಡಿಜಿಟಲ್ ಕನ್ನಡ’ದಂಥ ಪ್ರಯತ್ನಗಳು ಶ್ಲಾಘನೀಯ’ ಎಂದರು.

ಹಿರಿಯ ರಾಜಕಾರಣಿ ಎಂ. ಸಿ. ನಾಣಯ್ಯನವರು ತಮ್ಮ ಮಾತುಗಳಲ್ಲಿ ಸಾಮಾಜಿಕ ಮಾಧ್ಯಮದ ಆತಂಕಗಳ ಬಗ್ಗೆಯೂ ಚಿತ್ರಣ ತೆರೆದಿಟ್ಟರು. ಜಾಲತಾಣಗಳು ಪುಕ್ಕಟೆಯಾಗಿರುವುದರಿಂದ, ಜನರನ್ನು ಅವುಗಳಿಗೆ ಖರ್ಚು ಮಾಡುವಂತೆ ಮಾಡಲಾಗದ ಸವಾಲಿದೆ ಎಂದು ಎಚ್ಚರಿಸಿದರು.

‘ಡಿಜಿಟಲ್ ಕನ್ನಡ’ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ. ವೆಂಕಟಸುಬ್ಬಯ್ಯನವರು, ‘ಜಾಹೀರಾತಿಗೆ ಸಾವಿರಾರು ಕೋಟಿ ರುಪಾಯಿಗಳನ್ನು ವೆಚ್ಚ ಮಾಡುವ ವಾಣಿಜ್ಯೋದ್ಯಮಿಗಳು, ಅವುಗಳ ಶೇ. 10-15 ಭಾಗವನ್ನು ಪ್ರಾಂತೀಯ ಭಾಷೆಯ ಪತ್ರಿಕೆಗಳು ಮತ್ತು ಪ್ರಾದೇಶಿಕ ಭಾಷೆಗಳ ಅಂತರ್ಜಾಲ ತಾಣಗಳಿಗೆ ಮೀಸಲಿಡುವ ಕಾನೂನು ಬರಬೇಕು’ ಎಂದರು.

1 COMMENT

Leave a Reply