ಶರವಣ ಅಂದರೆ ಸಭಾ ಮರ್ಯಾದೆಗೆ ವಿರುದ್ಧ ಪದವೇ..?!

ಕಾರ್ಯಕ್ರಮದ ವೇದಿಕೆಯಲ್ಲಿ ಆಹ್ವಾನವೇ ಇರದಿದ್ದರೂ ಗಣ್ಯರ ಸಂದಿಯಲ್ಲೇ ಹೋಗಿ ಖುರ್ಚಿ ಎಳೆದುಕೊಂಡು ಕೂರುವವರನ್ನು ಮರ್ಯಾದೆಯುತ ಭಾಷೆಯಲ್ಲೇ ಹೆಸರಿಸಬೇಕಾದರೆ ಮೇಲಿನ ಶೀರ್ಷಿಕೆ ಬಳಸುವುದು ಅನಿವಾರ್ಯ.

ಹೋಗ್ಲಿ, ಯಾರೋ ತಿಳಿವಳಿಕೆ ಇಲ್ಲದವರು ಇಂಥದ್ದೇನೋ ಅಭಾಸ ಮಾಡಿಕೊಂಡರು ಅಂತಂದ್ರೆ ಒಂದು ಲೆಕ್ಕ. ಈ ಅಸಾಮಿ ಪ್ರತಿನಿಧಿಸುತ್ತಿರುವುದು ವಿಧಾನ ಪರಿಷತ್ ಅನ್ನು. ಬೌದ್ಧಿಕ ತೀಕ್ಷ್ಣಮತಿಗಳು, ಬುದ್ಧಿಜೀವಿಗಳು, ಚಿಂತಕರು ಪ್ರತಿನಿಧಿಸುವ ಉನ್ನತಸ್ತರದ ಆ ಮನೆಯಲ್ಲಿ ಎಂಥ ಬುದ್ಧಿಹೀನರು ಸೇರಿಕೊಂಡಿದ್ದಾರೆ ಎಂಬುದಕ್ಕೆ ಇದೊಂದು ಉದಾಹರಣೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ‘ಡಿಜಿಟಲ್ ಕನ್ನಡ’ ಅಂತರ್ಜಾಲ ಪತ್ರಿಕೆ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಅನಂತಕುಮಾರ್, ಮಾಜಿ ಸಚಿವ ಎಂ.ಸಿ. ನಾಣಯ್ಯ, ನಾಡೋಜ ಪ್ರೊ. ಜಿ. ವೆಂಕಟಸುಬ್ಬಯ್ಯನವರು ವೇದಿಕೆಗೆ ಆಹ್ವಾನಿತ ಅತಿಥಿಗಳಾಗಿದ್ದರು. ವಿಧಾನ ಪರಿಷತ್ ಸದಸ್ಯ ಶರವಣ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದರೇ ಹೊರತು, ವೇದಿಕೆ ಅಲಂಕರಿಸಲು ಅಲ್ಲ. ಆದರೆ ಶರವಣ ಅವರು ಯಾವುದೇ ಮುಜುಗರ ಇಲ್ಲದೇ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಿಂದಿನ ಜಾಗದಲ್ಲಿ ಕುರ್ಚಿ ಎಳೆಸಿಕೊಂಡು ವಿರಾಜಮಾನರಾದರು.

ಸಭಿಕರಿಗೆ ಆಶ್ಚರ್ಯ. ಕಾರ್ಯಕ್ರಮ ಆಹ್ವಾನ ಪತ್ರಿಕೆ ಅತಿಥಿಗಳ ಪಟ್ಟಿಯಲ್ಲಿ ಶರವಣ ಹೆಸರು ಇಲ್ಲದಿದ್ದರೂ ಅವರು ಹೇಗೆ ವೇದಿಕೆ ಹತ್ತಿದರು ಎಂದು. ಅದೇ ರೀತಿ ಕಾರ್ಯಕ್ರಮ ಸಂಘಟಕರಿಗೆ ಇರಿಸುಮುರಿಸು. ವೇದಿಕೆಯಿಂದ ಕೆಳಗೆ ಹೋಗಿ ಎಂದು ಹೇಳುವಂತಿಲ್ಲ, ಬಿಡುವಂತಿಲ್ಲ. ಸಭಾಕಲಾಪದಲ್ಲಿ ಗೊಂದಲ ಸೃಷ್ಟಿಯಾಗುತ್ತದೆ ಎಂದು.

ಮೇಲ್ಮನೆಯಲ್ಲಿರುವವರ ಬುದ್ಧಿಯೆಲ್ಲ ಮೇಲ್ಮಟ್ಟದಲ್ಲೇ ಇರಬೇಕು ಅಂತೇನಿಲ್ಲವಲ್ಲ. ಪಾಪ, ಅವರ ಬುದ್ಧಿಮಟ್ಟಕ್ಕೆ ವೇದಿಕೆಗಳೆಲ್ಲವೂ ಕರ್ಚೀಪ್ ತೂರಿಸಿ ಹೋಗಿ ಕುಳಿತುಬಿಡಬಹುದಾದ ಸಿಟಿ ಬಸ್ಸಿನ ಸೀಟುಗಳಂತೆ ಕಂಡಿದ್ದರೆ ಯಾರೇನು ಮಾಡೋಕಾಗುತ್ತೆ?

ಇಡೀ ಕಾರ್ಯಕ್ರಮದಲ್ಲಿ ನಿರೂಪಕರಾಗಲೀ, ಸಂಪಾದಕರಾಗಲೀ, ಮಾತಾಡಿದ ಹೆಚ್ಚಿನ ಗಣ್ಯರಾಗಲೀ ಇವರ ಹೆಸರನ್ನು ಉಲ್ಲೇಖಿಸಲಿಲ್ಲ. ಏಕೆಂದರೆ ಆಹ್ವಾನ ಪತ್ರಿಕೆಯನ್ನು ಎಷ್ಟೇ ಹಿಂದೆ- ಮುಂದೆ ತಿರುಗಿಸಿ ನೋಡಿದರೂ ಶರವಣರ ಹೆಸರೇನಿರಲಿಲ್ಲ. ಸಭಾಸದರ ಪೈಕಿ ಒಬ್ಬರಾಗಿ ಕುಳಿತುಕೊಳ್ಳುವುದಕ್ಕೆ ಅವರಿಗೇನಾದರೂ ಹೇಳಿಕೊಳ್ಳಲಾಗದ ಸಮಸ್ಯೆ ಎದುರಾಗಿಬಿಟ್ಟಿತ್ತೋ, ನೀವು ಹೋಗಿ ಕೂತ್ಕೊಳ್ಳಿ ಏನಾಗಲ್ಲ’ ಅಂತ ಯಾರಾದರೂ ಖತರ್ನಾಕ್ ದಿಗ್ಗಜರು ಆ ಪರಿ ಅವರಲ್ಲಿ ವಿಶ್ವಾಸ ತುಂಬಿ ಮಜಾ ತೆಗೆದುಕೊಂಡರೇ ಎಂಬುದು ಗೊತ್ತಿಲ್ಲ.

6 COMMENTS

  1. Funny one… I did see a pic published in Vijayavani today where Saravana also was present on the dias. Had not seen his name in the invitation last week and how did he figure there was my first question too….

  2. ಸಭಾ ಮರ್ಯಾದೆಗೆ ವಿರುದ್ಧ ಪದ ಆವಿಷ್ಕಾರ ಮಾಡಿದ ಡಿಜಿಟಲ್ ಕನ್ನಡ ತಂಡಕ್ಕೆ ವಂದನೆಗಳು.

  3. Some people like that only .thank u digital kannada as u showd da guts to teach politician, on first day lonching ur digital kannada.

Leave a Reply