ಕಾವೇರಿ ಕಣಿವೆಯಲ್ಲಿ ನಾಲೆಗಳ ಆಧುನೀಕರಣಕ್ಕೆ ನಿಗಮ ಅನುಮತಿ

 

ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಕಾಲುವೆಗಳ ಆಧುನೀಕರಣ ಮತ್ತಿತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕಾವೇರಿ ನಿಗಮ ಅನುಮತಿ ನೀಡಿದ್ದು, ಇದರೊಂದಿಗೆ ಬಹುಕಾಲದಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಮುಕ್ತಿ ದೊರಕಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಕಾಲಮಿತಿಯೊಳಗೇ ಕಾಮಗಾರಿ ಪೂರ್ಣಗೊಳಿಸುವಂತೆ ಸಿದ್ದರಾಮಯ್ಯನವರು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಕಳೆದ ಮುಂಗಡ ಪತ್ರದಲ್ಲಿ ನಿಗದಿ ಮಾಡಿರುವ ಹಣ ಮುಂದಿನ ಮಾರ್ಚ್ ಅಂತ್ಯದೊಳಗೆ ಸಂಪೂರ್ಣ ಬಳಕೆ ಆಗಬೇಕು. ವಿಧಾನಪರಿಷತ್ , ತಾಲೂಕು ಜಿಲ್ಲಾ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಕೆಲ ಷರತ್ತು ವಿಧಿಸಿ ಚುನಾವಣಾ ಆಯೋಗ ಅನುಮತಿ ನೀಡಿದೆ. ಅದಕ್ಕನುಗುಣವಾಗಿ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರಬೇಕು. ಕಾವೇರಿ ನ್ಯಾಯಾಧೀಕರಣದ ತೀರ್ಪು ತಮಿಳುನಾಡಿಗೆ ಬಿಡುವ ನೀರಿಗೆ ಪ್ರಮಾಣ ನಿಗದಿ ಮಾಡಿದೆಯೇ ಹೊರತು ನಮ್ಮಲ್ಲಿ ಲಭ್ಯವಾಗುವ ನೀರು ಬಳಕೆಗೆ ಯಾವುದೇ ಇತಿಮಿತಿ ಇಲ್ಲ. ಹೀಗಾಗಿ ಲಭ್ಯ ನೀರಿನ ಸಮರ್ಪಕ ಬಳಕೆಯಾಗಬೇಕು. ಈ ಹಿನ್ನೆಲೆಯಲ್ಲಿ ಸೋರಿಕೆ ನಿಯಂತ್ರಣಕ್ಕೆ ನಾಲೆಗಳ ಆಧುನಿಕರಣ ಅತ್ಯಗತ್ಯ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

Leave a Reply