ಶಾಕುರ್ ಬಸ್ತಿ ಕೊಳಗೇರಿ ತೆರವು ವೇಳೆ ಮಗು ಸಾವು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ

 

 

ದೆಹಲಿಯಲ್ಲಿ ಶಾಕುರ್ ಬಸ್ತಿ ಕೊಳಗೇರಿಯ 500 ಕ್ಕೂ ಹೆಚ್ಚು ಮನೆಗಳನ್ನು ರೈಲ್ವೆ ಇಲಾಖೆ ನೆಲಸಮಗೊಳಿಸಿರುವುದು ರಾಜಕೀಯ ಸಮರಕ್ಕೆ ಕಾರಣವಾಗಿದೆ. ಈ ತೆರವು ಕಾರ್ಯಾಚರಣೆಯ ವೇಳೆ ಆರು ತಿಂಗಳ ಹಸುಳೆ ಮೃತಪಟ್ಟಿರುವುದು ಕೇಂದ್ರ ಸರ್ಕಾರದ ವಿರುದ್ಧ ಆಪ್, ಕಾಂಗ್ರೆಸ್ ಇನ್ನಿತರ ರಾಜಕೀಯ ಪಕ್ಷಗಳ ಪ್ರತಿಭಟನೆಗೆ ಇಂಬು ನೀಡಿದೆ.

ಪ್ರಕರಣದ ಬಗ್ಗೆ ಸಂಸತ್ತಿನಲ್ಲಿ ವಿವರಣೆ ನೀಡಿದ ರೈಲ್ವೆ ಮಂತ್ರಿ ಸುರೇಶ್ ಪ್ರಭು ಅವರು, ‘ತೆರವು ಮಾಡಿದ ಪ್ರದೇಶದಲ್ಲಿ ಅಕ್ರಮ ಜನವಸತಿ ಇತ್ತು. ಧ್ವಂಸಕ್ಕೆ ಮುನ್ನ ಸಾಕಷ್ಟು ಬಾರಿ ನೋಟೀಸ್ ನೀಡಲಾಗಿತ್ತು. ಮಗು ಮೃತಪಟ್ಟಿರುವುದಕ್ಕೂ ತೆರವು ಕಾರ್ಯಾಚರಣೆಗೂ ಸಂಬಂಧವಿಲ್ಲ. ಈಗ ತೆರವುಗೊಳಿಸಿರುವ ಕೊಳೆಗೇರಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸುವುದಕ್ಕೆ ಕೇಂದ್ರ ಬದ್ಧವಾಗಿದೆ’ ಎಂದು ಭರವಸೆ ನೀಡಿದ್ದಾರೆ.

ಆದರೆ ಕೇಂದ್ರದ ಸಮಜಾಯಿಷಿಗಳು ಯಾರಿಗೂ ತೃಪ್ತಿ ಕೊಡುವಂತಿಲ್ಲ. ಏಕೆಂದರೆ ಈಗ ದೆಹಲಿಯಲ್ಲಿ ಅತಿಯಾಗಿ ಚಳಿ ಬೀಳುತ್ತಿದೆ. ಇಂಥ ಸಂದರ್ಭದಲ್ಲಿ, ಯಾವುದೇ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸದೇ ಮನೆಗಳನ್ನು ಧ್ವಂಸ ಮಾಡಿರುವುದಕ್ಕೆ ಕಾನೂನಿನ ಬೆಂಬಲ ಇರಬಹುದಾದರೂ ಮಾನವೀಯ ದೃಷ್ಟಿಕೋನ ಬೇಡವೇ ಎಂಬ ಪ್ರಶ್ನೆಯನ್ನು ವಸತಿಹೀನರು ಕೇಳುತ್ತಿದ್ದಾರೆ. ‘ಎಲ್ಲರ ತಲೆ ಮೇಲೂ ಸೂರು ಎಂಬ ಭರವಸೆ ಕೊಟ್ಟಿದ್ದ ಮೋದಿ ಸರ್ಕಾರ ಹೀಗೇಕೆ ಮಾಡುತ್ತಿದೆ’ ಎಂದು ಸ್ಲಂ ನಿವಾಸಿಗಳು ಕೇಳುತ್ತಿರುವ ಪ್ರಶ್ನೆಗೆ ಉತ್ತರ ಹೇಳುವವರು ಯಾರೂ ಇಲ್ಲ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ‘ನಾವು ಸರ್ಕಾರದಲ್ಲಿಲ್ಲ. ಆಪ್ ಮತ್ತು ಬಿಜೆಪಿ ಸರ್ಕಾರ ನಡೆಸುತ್ತಿವೆ. ಆದರೆ ನಮ್ಮಿಂದಾದ ಸಹಾಯ ಮಾಡುತ್ತೇವೆ. ಸಂಸತ್ತಿನಲ್ಲಿ ಈ ಬಗ್ಗೆ ಪ್ರಶ್ನೆ ಎತ್ತುವೆ’ ಎಂಬುದು ರಾಹುಲ್ ಸ್ಥಳೀಯರಿಗೆ ಕೊಟ್ಟ ಭರವಸೆ..

ಶಾಕುರ್ ಬಸ್ತಿಯಲ್ಲಿ ಸ್ಲಂ ತೆರವು ವೇಳೆ  ಮಗುವಿನ ಸಾವು  ಪ್ರಕರಣವನ್ನು ದೆಹಲಿ ಸರಕಾರ ತನಿಖೆಗೆ ಆದೇಶಿಸಿದೆ.

‘2007ರಲ್ಲಿ ಕಾಂಗ್ರೆಸ್ ನ ಶೀಲಾ ದೀಕ್ಷಿತ್ ಅವರ ಸರ್ಕಾರವಿದ್ದಾಗಲೇ ಶಾಕುರ್ ಬಸ್ತಿಯಲ್ಲಿ ರೈಲ್ವೆ ಟರ್ಮಿನಲ್ ಸ್ಥಾಪಿಸುವುದಕ್ಕೆ ಉದ್ದೇಶಿಸಲಾಗಿತ್ತು. ಆದರೂ ರೈಲ್ವೆಯವರು ಈ ಚಳಿಗಾಲದಲ್ಲಿ ಅಕ್ರಮ ಜನವಸತಿ ಧ್ವಂಸ ಮಾಡಬಾರದಿತ್ತು. ಇದನ್ನು ಮಾನವೀಯ ನೆಲೆಯಲ್ಲಿ ನೋಡಬೇಕೇ ಹೊರತು ರಾಜಕೀಯ ಮಾಡುವುದು ಬೇಡ’ ಎಂದಿದ್ದಾರೆ ಸಂಸದೀಯ ವ್ಯವಹಾರಗಳ ಸಚಿವ ಎಂ. ವೆಂಕಯ್ಯನಾಯ್ಡು.

ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ‘ನಾವು ಸರ್ಕಾರದಲ್ಲಿಲ್ಲ. ಆಪ್ ಮತ್ತು ಬಿಜೆಪಿಗಳು ಸರ್ಕಾರ ನಡೆಸುತ್ತಿವೆ. ಆದರೆ ನಮ್ಮಿಂದಾದ ಸಹಾಯ ಮಾಡುತ್ತೇವೆ. ಸಂಸತ್ತಿನಲ್ಲಿ ಈ ಬಗ್ಗೆ ಪ್ರಶ್ನೆ ಎತ್ತುವೆ’ ಎಂದು ರಾಹುಲ್ ಸ್ಥಳೀಯರಿಗೆ ಭರವಸೆ ನೀಡಿದರು.

ದೆಹಲಿ ಸರಕಾರ ಶಾಕುರ್ ಬಸ್ತಿಯಲ್ಲಿ ನಡೆದ ಮಗುವಿನ ಸಾವಿನ ಪ್ರಕರಣವನ್ನು ತನಿಖೆಗೆ ಆದೇಶಿಸಿದೆ.

‘2007ರಲ್ಲಿ ಕಾಂಗ್ರೆಸ್ ನ ಶೀಲಾ ದೀಕ್ಷಿತ್ ಅವರ ಸರ್ಕಾರವಿದ್ದಾಗಲೇ ಶಾಕುರ್ ಬಸ್ತಿಯಲ್ಲಿ ರೈಲ್ವೆ ಟರ್ಮಿನಲ್ ಸ್ಥಾಪಿಸುವುದಕ್ಕೆ ಉದ್ದೇಶಿಸಲಾಗಿತ್ತು. ಆದರೂ ರೈಲ್ವೆಯವರು ಈ ಚಳಿಗಾಲದಲ್ಲಿ ಅಕ್ರಮ ಜನವಸತಿ ಧ್ವಂಸ ಮಾಡಬಾರದಿತ್ತು. ಇದನ್ನು ಮಾನವೀಯ ನೆಲೆಯಲ್ಲಿ ನೋಡಬೇಕೇ ಹೊರತು ರಾಜಕೀಯ ಮಾಡುವುದು ಬೇಡ’ ಎಂದಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ ಎಂ. ವೆಂಕಯ್ಯನಾಯ್ಡು.

Leave a Reply