ತಮ್ಮ ಮೇಲೆ ಸಿಬಿಐ ದಾಳಿ- ಕೇಜ್ರಿ; ದಾಳಿ ಗುರಿ ಅವರಲ್ಲ ಸಿಬಿಐ ಸ್ಪಷ್ಟನೆ

‘ಸಿಬಿಐ ನನ್ನ ಕಚೇರಿ ಮೇಲೆ ದಾಳಿ ಮಾಡಿದೆ. ಮೋದಿಯವರಿಗೆ ನನ್ನನ್ನು ರಾಜಕೀಯವಾಗಿ ನಿಯಂತ್ರಿಸಲಾಗುತ್ತಿಲ್ಲವಾದ್ದರಿಂದ ಈ ನಡೆ. ಮೋದಿ ಒಬ್ಬ ಹೇಡಿ ಹಾಗೂ ವಿಕ್ಷಿಪ್ತ’ ಇದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟ್ವಿಟ್ಟರ್ ನಲ್ಲಿ ಬೆಳಗ್ಗೆ ಕೊಟ್ಟ ಬ್ರೇಕಿಂಗ್ ನ್ಯೂಸ್.

ಆದರೆ, ಸಿಎಂ ಕಚೇರಿ ಇರುವ ಕಟ್ಟಡದಲ್ಲೇ ಇರುವ ಪ್ರಧಾನ ಕಾರ್ಯದರ್ಶಿ ಕಚೇರಿ ಮೇಲೆ ದಾಳಿ ಮಾಡಿದ್ದೇವೆಯೇ ಹೊರತು ಕೇಜ್ರಿವಾಲ್ ಕಚೇರಿ ಮೇಲಲ್ಲ ಅಂತ ಸಿಬಿಐ ಸ್ಪಷ್ಟಪಡಿಸಿದೆ. ಪ್ರಧಾನ ಕಾರ್ಯದರ್ಶಿ ಮೇಲೆ ಅವ್ಯವಹಾರದ ಆರೋಪಗಳಿರುವುದರಿಂದ ಸಿಬಿಐ ದಾಳಿ ನಡೆಸಿದ್ದಾಗಿ ತಿಳಿದುಬಂದಿದೆ.

ಆದರೆ ಕೇಜ್ರಿವಾಲ್ ಅವರ ಟ್ವಿಟರ್ ರಣೋತ್ಸಾಹವನ್ನು ನೋಡಿದರೆ ಈ ಘಟನೆಯನ್ನು ಬಳಸಿಕೊಂಡು, ಈಗಾಗಲೇ ರೈಲ್ವೆ ಇಲಾಖೆಯ ಕೊಳೆಗೇರಿ ತೆರವು ಕ್ರಮದ ರೀತಿನೀತಿಗೆ ಆಕ್ರೋಶ ಎದುರಿಸುತ್ತಿರುವ ಕೇಂದ್ರದ ಮೇಲೆ ಇನ್ನಷ್ಟು ರಾಜಕೀಯ ಒತ್ತಡ ಸೃಷ್ಟಿಯಾಗುವುದನ್ನು ನಿರೀಕ್ಷಿಸಬಹುದಾಗಿದೆ.

Leave a Reply