ಪಾಕ್ ಬೋಟ್ ಸ್ಫೋಟಕ್ಕೆ ನಾನೇ ಆದೇಶಿಸಿದ್ದೆ ಎಂದಿದ್ದ ಡೆಪ್ಯುಟಿ ಇನ್ ಸ್ಪೆಕ್ಟರ್ ವಜಾ

ಗುಜರಾತ್ ಪ್ರವೇಶಿಸುತ್ತಿದ್ದ ಪಾಕಿಸ್ತಾನದ ಬೋಟ್ ಅನ್ನು ಹೊಡೆದುರುಳಿಸಲು ಆದೇಶಿಸಿದ್ದು ನಾನೇ ಎಂದು ಹೇಳಿಕೆ ಕೊಟ್ಟಿದ್ದ ಕೋಸ್ಟ್ ಗಾರ್ಡ್ ನ ಡೆಪ್ಯುಟಿ ಇನ್ ಸ್ಪೆಕ್ಟರ್ ಜನರಲ್ ಬಿಕೆ ಲೋಶಾಲಿ ಅವರನ್ನು ಸರ್ಕಾರದ ನಿಲುವಿಗೆ ವ್ಯತಿರಿಕ್ತ ಹೇಳಿಕೆ ಕೊಟ್ಟು ಶಿಸ್ತು ಉಲ್ಲಂಘಿಸಿದ ಕಾರಣಕ್ಕೆ ವಜಾ ಮಾಡಲಾಗಿದೆ.

2014ರ ಡಿಸೆಂಬರ್ ನಲ್ಲಿ ಪಾಕಿಸ್ತಾನದ ಬೋಟ್ ಒಂದು ಗುಜರಾತ್ ತೀರವನ್ನು ಪ್ರವೇಶಿಸುತ್ತಿದ್ದಾಗ ಸ್ಫೋಟವಾಗಿ ಅದರಲ್ಲಿದ್ದವರೆಲ್ಲ ಸತ್ತಿದ್ದರು. ‘ಆ ಬೋಟ್ ನಲ್ಲಿ ಉಗ್ರಗಾಮಿಗಳಿರಬಹುದಾದ ಶಂಕೆಯಿಂದ ಅವರನ್ನು ಸುತ್ತುವರಿಯಲಾಗಿತ್ತು. ಆಗ ಬೋಟ್ ನ ಒಳಗಿದ್ದವರು ತಮ್ಮನ್ನೇ ಸ್ಫೋಟಿಸಿಕೊಂಡರು’ ಎಂದು ರಕ್ಷಣಾ ಸಚಿವ ಮನೋಹರ ಪಾರ್ರಿಕರ್ ಹೇಳಿದ್ದರು. ಇದಕ್ಕೆ ವ್ಯತಿರಿಕ್ತವಾಗಿ ಲೋಶಾಲಿ ಅವರು, ‘ಆ ರಾತ್ರಿ ಗಾಂಧಿನಗರದಲ್ಲಿದ್ದೆ. ಬೋಟ್ ಸ್ಫೋಟಿಸುವುದಕ್ಕೆ ಕೋಸ್ಟ್ ಗಾರ್ಡ್ ಗೆ ನಾನೇ ಆದೇಶಿಸಿದ್ದೆ. ಅದರೊಳಗಿದ್ದವರಿಗೆ ಬಿರಿಯಾನಿ ತಿನ್ನಿಸಿಕೊಂಡಿರುವುದಕ್ಕೆ ಇಷ್ಟವಿರಲಿಲ್ಲ’ ಅಂತ ಹೇಳಿಕೆ ನೀಡಿದ್ದರು.

Leave a Reply