ಜಗತ್ತನ್ನು ಕಾಡಿವೆ ಸಿಕ್ಕಾಪಟ್ಟೆ ‘ಇಸಂ’ಗಳು!

ಬುದ್ಧಿಜೀವಿಗಳು ಭಾಷಣ ಮಾಡುವಾಗ ‘ಇಸಂ’ಗಳನ್ನು ಉಲ್ಲೇಖಿಸುವುದನ್ನು ನೋಡಿ ನೀವು ಸುಸ್ತಾಗಿದ್ದಿರಬಹುದು. ಇದೇನಪ್ಪಾ, ನೆಟ್ಟಗೇ ಮಾತಾಡ್ದೇ ಆ ಪಂಥ- ಈ ಸಿದ್ಧಾಂತ ಅಂತೆಲ್ಲ ತಲೆಕೆಡಿಸ್ತಿದಾರೆ ಅಂತ ಸಾಮಾನ್ಯರು ಯೋಚಿಸಿದ್ದಿರಬಹುದು.

ಆದ್ರೆ, ವಾಸ್ತವ ಏನಂದ್ರೆ ಇಡೀ ಜಗತ್ತೇ ‘ಇಸಂ’ಗಳ ಬಗ್ಗೆ ತಲೆಕೆಡಿಸಿಕೊಂಡು ಕುಳಿತಿದೆ! ಕೊನೆಪಕ್ಷ ಆನ್ ಲೈನ್ ಪ್ರಪಂಚದ ಮಟ್ಟಿಗಾದರೂ ಈ ಮಾತು ಸತ್ಯ. ಅಂತರ್ಜಾಲದ ಜನಪ್ರಿಯ ಶಬ್ದಕೋಶ ಮೆರಿಯಮ್ ವೆಬ್ ಸ್ಟರ್, ಪ್ರತಿವರ್ಷವೂ ‘ವರ್ಷದ ಪದ’ವೊಂದನ್ನು ಹೆಸರಿಸುತ್ತದೆ. ಆ ವರ್ಷದಲ್ಲಿ ಹೆಚ್ಚಿನ ಮಂದಿ ಅವರ ತಾಣದಲ್ಲಿ ಯಾವ ಶಬ್ದದ ಅರ್ಥಕ್ಕಾಗಿ ಹುಡುಕಿರುತ್ತಾರೋ ಅದನ್ನೇ ವರ್ಷದ ಪದವನ್ನಾಗಿ ಪರಿಗಣಿಸುತ್ತಾರೆ. ಈ ಬಾರಿ ಇಸಂ (ism) ಎಂಬ ಪ್ರತ್ಯಯಕ್ಕೆ ಆ ಗೌರವವನ್ನು ಕೊಡಲಾಗಿದೆ. ಏಕೆಂದರೆ ಫ್ಯಾಸಿಸಂ, ಸೋಷಿಯಲಿಸಂ, ಫೆಮಿನಿಸಂ, ಕಮ್ಯುನಿಸಂ, ಟೆರರಿಸಂ.. ಹೀಗೆ ಇಸಂ ಪ್ರತ್ಯಯವನ್ನು ಸೇರಿಸಿಕೊಂಡಿರುವ ಶಬ್ದಗಳ ಅರ್ಥವನ್ನು ಜನರು ಹೆಚ್ಚು ಹುಡುಕಿರುವುದು ತಿಳಿದುಬಂದಿದೆ.

ಈ ಹಿಂದೆ 2012ರಲ್ಲಿ ಇದೇ ಜಾಲತಾಣವು ‘ಕ್ಯಾಪಿಟಲಿಸಂ’ ಶಬ್ದಕ್ಕೆ ವರ್ಷದ ಪದ ಎಂಬ ಗೌರವವನ್ನು ನೀಡಿತ್ತು.

ಈ ಮೇಲೆ ಉಲ್ಲೇಖಿಸಿದ ಕೆಲವು ಇಸಂ ಗಳನ್ನು ನಮ್ಮಲ್ಲಿಯೂ ಹಲವು ಚಿಂತಕರು, ರಾಜಕಾರಣಿಗಳು ಪದೇ ಪದೆ ತಮ್ಮ ಮಾತುಗಳಲ್ಲಿ ಬಳಸುತ್ತಾರೆ. ಈ ಶಬ್ದಗಳ ಮೇಲೆ ಇಂಥ ವ್ಯಾಮೋಹ ಏಕೆಂದು ಚಕಿತರಾದ ಜನರು ಅವುಗಳ ಅರ್ಥ ಏನಿದೆ ಅಂತ ಜಾಲಾಡಿಯೇಬಿಡೋಣ ಅಂಥ ಆನ್ ಲೈನ್ ಶಬ್ದಕೋಶದ ಮೊರೆ ಹೋಗಿರಬಹುದೇ? ಅರ್ಥಾತ್… ‘ಇಸಂ’ ಪ್ರತ್ಯಯವು ವರ್ಷದ ಶಬ್ದವೆನಿಸಿಕೊಳ್ಳುವುದಕ್ಕೆ ನಮ್ಮ ಕೊಡುಗೆಯೂ ಸಾಕಷ್ಟಿದ್ದಿರಬಹುದೇ?

Leave a Reply