ಟೆಸ್ಟ್ ಕ್ರಿಕೆಟ್ ನಲ್ಲಿ ಮೆಕಲಮ್ ಹೆಸರಿಗೆ ನಿರಂತರತೆಯ ದಾಖಲೆ

 

ನ್ಯೂಜಿಲೆಂಡ್ ನ ಅಲ್ ರೌಂಡ್ ಆಟಗಾರ ಬ್ರೆಂಡನ್ ಮೆಕಲಮ್ ನಿರಂತರತೆ ಕಾಯ್ದುಕೊಂಡು 99 ಟೆಸ್ಟ್ ಪಂದ್ಯಗಳನ್ನು ಆಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಡಿಸೆಂಬರ್ 18 ರಂದು ಪ್ರಾರಂಭವಾದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಈ ದಾಖಲೆಯನ್ನು ನಿರ್ಮಿಸಿದ್ದು, ದಕ್ಷಿಣ ಆಫ್ರಿಕಾದ ಸ್ಫೋಟಕ ಆಟಗಾರ ಎಬಿ ಡೆವಿಲಿಯರ್ಸ ಹೆಸರಿನಲ್ಲಿದ್ದ 98 ಪಂದ್ಯಗಳ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಎಬಿಡಿಯು ಸದ್ಯ 102 ಪಂದ್ಯಗಳನ್ನು ಆಡಿದ್ದು, 98 ಪಂದ್ಯಗಳನ್ನು ಮುಗಿಸಿದ ನಂತರ ತಂದೆಯಾದ ಕಾರಣ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದರು.

ಬ್ರೆಂಡನ್ ಮೆಕಲಮ್ 2004 ರ ಮಾರ್ಚ್ 10 ರಂದು ಹ್ಯಾಮಿಲ್ಟನ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಚೊಚ್ಚಲ ಟೆಸ್ಟ್ ಪಂದ್ಯ ಆಡುವ ಮೂಲಕ ಪಾದಾರ್ಪಣೆ ಮಾಡಿದರು.

ಹೀಗೆ ಪದಾರ್ಪಣೆಗೊಂಡ ನಂತರ ನಿರಂತರತೆ ಕಾಪಾಡಿಕೊಂಡು ಆಡಿದವರ ಅಗ್ರ ಪಟ್ಟಿಯಲ್ಲಿ ಭಾರತದ ರಾಹುಲ್ ದ್ರಾವಿಡ್ ಅವರು 93 ಪಂದ್ಯಗಳ ಲೆಕ್ಕದೊಂದಿಗೆ 4ನೇ ಸ್ಥಾನದಲ್ಲಿದ್ದಾರೆ.

Leave a Reply