ವೆಂಕಟ್ ರನ್ನು ಹುಚ್ಚನಾಗಿಸಿ ಹಣ ಮಾಡಿಕೊಂಡವರ ನಡುವೆ ಸ್ವಚ್ಛ ಪ್ರಯೋಗ ಮಾಡಿರುವ ‘ಪರಪಂಚ’, ಯೋಗರಾಜ್ ಭಟ್!

 

 

ವೆಂಕಟ್ ಬಿಗ್ ಬಾಸ್ ನಿಂದ ಹೊರಬಂದ ಲಾಗಾಯ್ತಿನಿಂದ ಮಾಧ್ಯಮದವರು ಹೆಚ್ಚಿನವರೆಲ್ಲ ಅವರ ಬಾಯಿಂದ ವಿವಾದದ ಮಾತುಗಳನ್ನು ತೆಗೆಸುವುದರಲ್ಲಿ, ಜಗಳ ಹುಟ್ಟುಹಾಕಿ ವಿಷಯ ಎಳೆದಾಡುವಂತೆ ಮಾಡಿ ರೋಚಕತೆ ಸೃಷ್ಟಿಸುವಲ್ಲಿ ತೊಡಗಿಕೊಂಡವರೇ. ಇಂಥ ಗಲಾಟೆ, ಒದರಾಟಗಳ ನಡುವೆ ವೆಂಕಟ್ ಪ್ರತಿಭೆಯನ್ನು ‘ಪರಪಂಚ’ ಚಿತ್ರತಂಡ ಉತ್ತಮ ರೀತಿಯಲ್ಲಿ ಬಳಸಿಕೊಂಡು ಅವರಿಂದ ಹಾಡು ಹಾಡಿಸಿದ್ದು, ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈಗ ಅದರದ್ದೇ ಚರ್ಚೆ.

ಹಾಡು ಬರೆದಿರುವುದು ಯೋಗರಾಜ್ ಭಟ್. ‘ಹುಟ್ಟಿದ ಊರನ್ನು ಬಿಟ್ಟು ಬಂದ ಮೇಲೆ ಇನ್ನೇನು ಬಿಡುವುದಕ್ಕೆ ಬಾಕಿ ಇದೆ’ ಎಂದು ಪ್ರಾರಂಭವಾಗುವ ಹಾಡು ಗಿಮಿಕ್ ಗಳಿಗೆ ಶರಣಾಗದೇ ಅರ್ಥವತ್ತಾಗಿ ಮೂಡಿ ಬಂದಿದೆ. ವೆಂಕಟ್ ಸಹ ಅಷ್ಟೇ ಭಾವ ತುಂಬಿ, ನಡು ನಡುವೆ ವಿನಯಪೂರ್ವಕವಾಗಿ ಮಾತನಾಡುತ್ತ ಈ ಗೀತೆಯನ್ನು ಪ್ರಸ್ತುತಪಡಿಸಿದ್ದಾರೆ. ‘ನನ್ನ ಕಿರುಚಾಟ ಕೇಳಿ ಕೇಳಿ ತಲೆ ಕೆಟ್ ಹೋಗಿರೋ ನೀವು ಈ ಹಾಡನ್ನು ಕೇಳ್ ಬೇಕು, ಅರ್ಥ ಆಯ್ತಾ’ ಅಂತ ವೆಂಕಟ್ ಪ್ರಾರಂಭದಲ್ಲಿ ಹೇಳಿರೋದರಲ್ಲಿ, ಈಗ ಅವರೂ ತಮ್ಮನ್ನು ಅರ್ಥ ಮಾಡಿಕೊಳ್ತಿದಾರೆ ಹಾಗೂ ಪರಪಂಚ ತಂಡವೂ ವೆಂಕಟ್ ರನ್ನು ಅರ್ಥ ಮಾಡಿಕೊಂಡು ಉತ್ತಮ ಕೆಲಸ ಮಾಡಿಸಿದೆ ಎಂಬುದು ಸ್ಪಷ್ಟ.

Leave a Reply