ಆಸ್ಟ್ರೇಲಿಯ ಸರಣಿಯಲ್ಲಿ ಯುವಿ, ಮನೀಷ್ ಗೆ ಸ್ಥಾನ  

 

ಕನ್ನಡಿಗ ಮನೀಷ್ ಪಾಂಡೆ

ಮುಂಬರುವ ಆಸ್ಚ್ರೇಲಿಯ ಕ್ರಿಕೆಟ್ ಪ್ರವಾಸಕ್ಕೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ಟಿ-ಟ್ವೆಂಟಿ ಸ್ಪೆಷಲಿಸ್ಟ್ ಯುವಿಗೆ ಅವಕಾಶ ನೀಡಲಾಗಿದೆ. ಕನ್ನಡಿಗ ಮನೀಶ್ ಪಾಂಡೆ ಏಕ ದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಆಶಿಶ್ ನೆಹ್ರ, ಹರ್ಭಜನ್ ಸಿಂಗ್ ಅವರಂಥ ಹಿರಿಯ ಆಟಗಾರರ ಜತೆ ಹಲವು ಹೊಸ ಆಟಗಾರರಿಗೆ ಅವಕಾಶ ನೀಡಿರುವುದು ಈ ಬಾರಿ ಆಯ್ಕೆಯ ವಿಶೇಷ.

ಜನವರಿ 12 ರಿಂದ 31 ರ ವರೆಗೆ ನಡೆಯಲಿರುವ ಐದು ಏಕ ದಿನ ಮತ್ತು ಮೂರು ಟಿ-ಟ್ವೆಂಟಿ ಪಂದ್ಯಗಳಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಿದೆ. ಸುಮಾರು ಒಂದು ವರ್ಷದಿಂದ ಮೊಣಕಾಲು ನೋವಿಗೆ ಚಿಕಿತ್ಸೆ ಪಡೆದು ಸದ್ಯ ಚೇತರಿಸಿಕೊಂಡಿರುವ ಮುಂಚೂಣಿ ವೇಗಿ ಮಹಮದ್ ಶಮಿ ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜಾ ತಂಡಕ್ಕೆ ವಾಪಸ್ಸಾಗಿದ್ದಾರೆ. ಇನ್ನು ಹರಭಜನ್ ಸಿಂಗ್, ಹಾರ್ದಿಕ್ ಪಾಂಡೆ, ಆಶಿಶ್ ನೆಹ್ರಾ ಮತ್ತೆ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಏಕ ದಿನ ತಂಡ – ಎಂ.ಎಸ್ ಧೋನಿ (ನಾಯಕ) , ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಆಜಿಂಕೆ ರಹಾನೆ, ಮನೀಶ್ ಪಾಂಡೆ, ಆರ್. ಅಶ್ವಿನ್, ರವಿಂದ್ರ ಜಡೇಜಾ, ಮಹಮದ್ ಶಮಿ, ಅಕ್ಷರ್ ಪಟೇಲ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಗುರ್ಕೀರತ್ ಸಿಂಗ್, ರಿಷಿ ಧವನ್, ಬ್ರಿಂದರ್ ಸಿಂಗ್.

ಟಿ-ಟ್ವೆಂಟಿ ತಂಡ – ಎಂ.ಎಸ್ ಧೋನಿ ( ನಾಯಕ ), ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಆಜಿಂಕೆ ರಹಾನೆ, ಯುವರಾಜ್ ಸಿಂಗ್, ಸುರೇಶ್ ರೈನಾ, ಆರ್. ಅಶ್ವಿನ್, ರವೀಂದ್ರ ಜಡೇಜಾ, ಮಹಮದ್ ಶಮಿ, ಹರಭಜನ್ ಸಿಂಗ್, ಉಮೇಶ್ ಯಾದವ್, ಹಾರ್ದಿಕ್ ಪಾಂಡೆ, ಭುವನೇಶ್ವರ್ ಕುಮಾರ್, ಆಶಿಶ್ ನೆಹ್ರಾ.

Leave a Reply