ಎಚ್ಎಎಲ್ @75: ಸಾಧನೆಯ ಹಾದಿ ಪರಿಚಯಿಸುವ ವಿಡಿಯೋ ಕ್ಲಿಪ್

 

1940ರಲ್ಲಿ ವಾಲ್ ಚಂದ್ ಹೀರಾಚಂದ್ ಎಂಬ ಉದ್ಯಮಿ ಆಗಿನ ಮೈಸೂರು ಮಹಾರಾಜರೊಂದಿಗೆ ಸೇರಿಕೊಂಡು ಸ್ಥಾಪಿಸಿದ ಹಿಂದುಸ್ತಾನ್ ಏರೋನಾಟಿಕ್ಸ್ ಸಂಸ್ಥೆಗೆ ಈಗ 75 ವರ್ಷ. ಸಂಶೋಧನೆ ಮತ್ತು ಅಭಿವೃದ್ಧಿಯ ಹತ್ತು ಕೇಂದ್ರಗಳನ್ನು ಹೊಂದಿ ಸುಮಾರು 30 ಸಾವಿರ ಮಂದಿಗೆ ಉದ್ಯೋಗ ನೀಡಿರುವ ಎಚ್ಎಎಲ್, ಭಾರತದ ರಕ್ಷಣಾ ಪಡೆಗೆ ಕೊಡುಗೆ ನೀಡುವುದಕ್ಕಿರುವ ದೊಡ್ಡ ಸಂಸ್ಥೆ. ಯುದ್ಧ ವಿಮಾನವೂ ಸೇರಿದಂತೆ ರಕ್ಷಣಾ ಪರಿಕರಗಳ ವಿಷಯ ಬಂದಾಗ, ಭಾರತ ಸ್ವಾವಲಂಬಿ ಎಂದು ಹೇಳುವ ಹಂತದಲ್ಲಿಲ್ಲ. ಹೀಗಾಗಿ ಎಚ್ಎಎಲ್ ನಂಥ ಸಂಸ್ಥೆಗಳ ಹೊಣೆ ಇನ್ನಷ್ಟು ಹೆಚ್ಚಿನದ್ದೇ ಆಗಿದೆ.

ಮೇಕ್ ಇನ್ ಇಂಡಿಯಾ ಘೋಷಣೆ ಮೊಳಗುತ್ತಿರುವ ಸಂದರ್ಭದಲ್ಲಿ ಎಚ್ಎಎಲ್ ಕ್ರಮಿಸಬೇಕಿರುವ ಹಾದಿ ನಿರ್ಣಾಯಕವಾದದ್ದು. ಸದ್ಯಕ್ಕೆ ಎಚ್ಎಎಲ್ ಈವರೆಗೆ ನೀಡಿರುವ ಕೊಡುಗೆಯನ್ನು ಗಮನಿಸಬೇಕಿರುವ ಸಮಯ. ಈ ವಿಡಿಯೋ ಕ್ಲಿಪ್ ಎಚ್ಎ ಎಲ್ ನ ಹಲವು ಹೆಜ್ಜೆಗಳ ಪರಿಚಯ ನೀಡುತ್ತಿದೆ.

Leave a Reply