ನಕ್ಸಲ್ ಸಮರ್ಥಕ ಸಾಯಿಬಾಬಾ, ಅರುಂಧತಿ ರಾಯ್ ಗೆ ನ್ಯಾಯಾಂಗದ ಬಿಸಿ

 

ನಕ್ಸಲ್ ಸಂಪರ್ಕದ ಆರೋಪದ ಹಿನ್ನೆಲೆಯಲ್ಲಿ ಬಂಧನವಾಗಿ ಆನಾರೋಗ್ಯದ ಆಧಾರದ ಮೇಲೆ ಜಾಮೀನು ಪಡೆದು ಹೊರಗಿದ್ದ ದೆಹಲಿ ವಿಶ್ವವಿದ್ಯಾಲಯದ ಪ್ರೊ.ಜಿ.ಎನ್.ಸಾಯಿಬಾಬರವರ ಜಾಮೀನು ಅವಧಿಯನ್ನು ವಿಸ್ತರಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಬಾಂಬೆ ಹೈಕೋರ್ಟ್ ನ ನಾಗಪುರ ಪೀಠ, 48 ಗಂಟೆಗಳಲ್ಲಿ ಶರಣಾಗುವಂತೆ ಆದೇಶಿಸಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಲೇಖನ ಬರೆದಿದ್ದ ಬೂಕರ್ ಪ್ರಶಸ್ತಿ ವಿಜೇತೆ ಅರುಂಧತಿ ರಾಯ್ ಅದರಲ್ಲಿ ನ್ಯಾಯಾಂಗವನ್ನು ಟೀಕಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಲಯವು ಅವರಿಗೆ ನ್ಯಾಯಾಂಗ ನಿಂದನೆಯ ಕ್ರಿಮಿನಲ್ ನೋಟಿಸ್ ಜಾರಿ ಮಾಡಿದೆ. ಜನವರಿ 25ರ ಒಳಗೆ ಇದಕ್ಕೆ ಉತ್ತರಿಸಬೇಕಿದೆ.

ಸಾಮಾಜಿಕ ಕಾರ್ಯಕರ್ತೆ ಪೂರ್ಣಿಮ ಉಪಾಧ್ಯಾಯರವರು ಬಾಂಬೆ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯವರಿಗೆ ಪತ್ರ ಬರೆದು, ಅದನ್ನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಿ ಸಾಯಿಬಾಬರವರಿಗೆ ತಾತ್ಕಾಲಿಕ ಜಾಮೀನು ನೀಡುವಂತೆ ಮನವಿ ಮಾಡಿದ್ದರು. ಅದಕ್ಕೆ ಪುರಸ್ಕಾರ ದೊರೆತಿದ್ದರಿಂದ ಸಾಯಿಬಾಬ ಅವರಿಗೆ ಮೂರು ತಿಂಗಳ ಬಿಡುಗಡೆ ಭಾಗ್ಯ ಲಭಿಸಿತ್ತು. ಇದನ್ನು ವಿಸ್ತರಿಸುವುದಕ್ಕೆ ಒಪ್ಪದ ನ್ಯಾಯಾಲಯ ಇದೀಗ ಶರಣಾಗುವಂತೆ ಆದೇಶಿಸಿದೆ.

Leave a Reply