ನಾಯಿ ನಂಬುಗೆಯ ಸಂಕೇತ, ಮನುಷ್ಯನ ಅತ್ಯುತ್ತಮ ಸ್ನೇಹಿತ ಎಂಬ ಮಾತುಗಳನ್ನೆಲ್ಲ ಕೇಳುತ್ತ ಬಂದಿದ್ದೇವೆ. ನಾಯಿಯ ನಿಷ್ಠೆ ಬಗ್ಗೆ ಲೇಖನಗಳನ್ನೂ ಓದಿದ್ದೇವೆ, ಕತೆಗಳನ್ನು ಕೇಳಿದ್ದೇವೆ. ಆದರೆ ಅಂಥ ಪ್ರೀತಿಯನ್ನು ಕಣ್ಣೆದುರು ತಂದಿಕೊಳ್ಳುವುದರಲ್ಲಿರುವ ಪುಳಕವೇ ಬೇರೆ.
ಜಗತ್ತಿನಲ್ಲಿ, ಮಾಧ್ಯಮಗಳಲ್ಲಿ, ಫೇಸ್ ಬುಕ್ ನಲ್ಲಿ ನಾಯಿ- ನರಿಗಳಂತೆ ಕಿತ್ತಾಡುವವರೇ ಹೆಚ್ಚಾಗಿದಾರೆ ಎಂಬ ಬೇಸರ ಹೆಚ್ಚಾಗಿರುವಾಗ ನಾಯಿಪ್ರೀತಿ ನಮಗೆ ಪಾಠ ಹೇಳಬಲ್ಲುದೇನೋ. ಕಿತ್ತಾಟಗಳನ್ನೆಲ್ಲ ಬಿಟ್ಟು ಮಗು ಮನಸ್ಸನ್ನು ಹೊಂದಬೇಕು ಅಂದ್ಕೋತೇವೆ. ಅಂಥ ಮಗುವಿಗೂ- ನಾಯಿಗೂ ಇರೋ ಬಾಂಧವ್ಯ ಏನು ಅಂತ ಇಲ್ಲಿರುವ ಎರಡು ವಿಡಿಯೋಗಳು ಸಾರಿ ಹೇಳ್ತಿವೆ.
ಮೊದಲನೇ ವಿಡಿಯೋದಲ್ಲಿ ಆ ತಾಯಿ, ಚಪ್ಪಲ್ಲಿ ತಗೊಂದು ಮಗುವಿಗೆ ಹೊಡೆಯೋ ನಾಟಕ ಮಾಡ್ತಿರೋದು ಅತಿಯಾಯ್ತೇನೋ ಅಂತನಿಸದಿರದು. ಆದ್ರೆ ಅದನ್ನು ತಪ್ಪಿಸುವುದಕ್ಕೆ ನಾಯಿಗಳೆರಡು ಸವಾಲು ಸ್ವೀಕರಿಸುವ ದೃಶ್ಯ ಮನ ಮುಟ್ಟುತ್ತೆ.
ಎರಡನೇ ವಿಡಿಯೋದಲ್ಲಿ ನಾಯಿಗೆ ಚುಚ್ತಿರೋ ಇಂಜೆಕ್ಷನ್ ತನಗೇ ನೋವು ಮಾಡಿದಂತೆ ಅಳುತ್ತಿರುವುದು ನಮಗೆ ನಗುತ್ತಲೇ ಹನಿ ಒಸರಿಸುತ್ತದೆ.
ವಾಟ್ಸ್ ಆ್ಯಪ್ ನಲ್ಲಿ ಪ್ರಚಲಿತದಲ್ಲಿರುವ ಈ ವಿಡಿಯೋವನ್ನು ಮೂಲ ತಿಳಿಯದೇ ಇರುವುದರಿಂದ, ಅನಾಮಧೇಯರಿಗೆ ಕೃತಜ್ಞತೆ ಸೂಚಿಸುತ್ತ ತೆಗೆದುಕೊಳ್ಳಲಾಗಿದೆ.