ಸಂಪುಟ ಸಭೆ ನಿರ್ಣಯಗಳು, ತಿಳಿದಿರಬೇಕಾದ ಮುಖ್ಯಾಂಶಗಳು

ಗಣಿಗಾರಿಕೆ ಪ್ರಕರಣಗಳ ತನಿಖಾವಧಿ ವಿಸ್ತರಣೆ

ಡಿಜಿಟಲ್ ಕನ್ನಡ ಟೀಮ್

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆ ಕೈಗೊಂಡಿರುವ ಕೆಲವು ಪ್ರಮುಖ ನಿರ್ಣಯಗಳ ಮುಖ್ಯಾಂಶಗಳು ಇಲ್ಲಿವೆ.

– ಅರಣ್ಯ ಪ್ರದೇಶದಲ್ಲಿ ರೈತರು ಸಾಗುವಳಿ ಮಾಡುತ್ತಿದ್ದ ಭೂಮಿಯ ಪೈಕಿ ಮೂರು ಎಕರೆಯಷ್ಟು ಭೂಮಿ ಬಿಟ್ಟುಕೊಡಲು ನಿರ್ಧರಿಸಿದೆ.

ಡಿಮ್ಡ್ ಅರಣ್ಯ ವ್ಯಾಪ್ತಿ ಕಡಿತ: ಸುಪ್ರೀಂ ಕೋರ್ಟ್ ಆದೇಶದಂತೆ ಅರಣ್ಯ ಹಾಗೂ ಕಂದಾಯ ಇಲಾಖೆ ರಾಜ್ಯಾದ್ಯಂತ ಡಿಮ್ಡ್ ಅರಣ್ಯ ಪ್ರದೇಶದ ಸರ್ವೇ ಕಾರ್ಯ ಪೂರ್ಣಗೊಳಿಸಿದೆ. ಇದರನ್ವಯ 9.94.881.11 ಡಿಮ್ಡ್ ಅರಣ್ಯ ವಿಸ್ತೀರ್ಣವನ್ನು 500611.70 ಹೆಕ್ಟೇರ್ ಗೆ ತಗ್ಗಿಸುವ ನಿರ್ಣಯ ಕೈಗೊಂಡಿದೆ.

ಡಿಮ್ಡ್ ಅರಣ್ಯ ಪ್ರದೇಶ ವ್ಯಾಪ್ತಿಯಿಂದ 4.94 ಲಕ್ಷ ಹೆಕ್ಟೇರ್ ಭೂಮಿಯನ್ನು ಕಂದಾಯ ಭೂಮಿಯನ್ನಾಗಿ ಘೋಷಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ಸುಪ್ರೀಂ ಕೋರ್ಟ್ ಅನುಮತಿ ಬೇಕಿದ್ದು, ಆ ನಿಟ್ಟಿನಲ್ಲಿ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಲು ತೀರ್ಮಾನಿಸಲಾಗಿದೆ.

ಅಕ್ರಮ ಗಣಿಗಾರಿಕೆಯ ವಿಶೇಷ ತನಿಖಾ ತಂಡದ ಕಾರ್ಯಾವಧಿಯನ್ನು 24.01.2016 ರಿಂದ ಜಾರಿಗೆ ಬರುವಂತೆ ಒಂದು ವರ್ಷದ ಕಾಲ ವಿಸ್ತರಿಸಲು ತೀರ್ಮಾಸಿದೆ.

-ಶಿಂಷಾ ಬಲದಂಡೆ ನಾಲೆಯನ್ನು 28 ಕೋಟಿ ರೂ.ಗಳ ವೆಚ್ಚದಲ್ಲಿ 20 ಕಿ.ಮೀ ಉದ್ದ ಆಧುನೀಕರಣಗೊಳಿಸುವ ಕಾಮಗಾರಿಯನ್ನು ಕಾವೇರಿ ನೀರಾವರಿ ನಿಗಮಕ್ಕೆ ನೀಡಲು ಒಪ್ಪಿಗೆ ಸೂಚಿಸಿದೆ.

– 2015-16ನೇ ಸಾಲಿನಲ್ಲಿ ಐಇಬಿಆರ್ ಅಡಿಯಲ್ಲಿ ಕಾವೇರಿ ನೀರಾವರಿ ನಿಗಮಕ್ಕೆ ಹಣಕಾಸು ಮಾರುಕಟ್ಟೆಯಿಂದ ಅವಧಿ ಸಾಲಗಳ ಮೂಲಕ 335 ಕೋಟಿ ರೂ.ಗಳನ್ನು ಸಂಗ್ರಹಿಸಲು ಅನುಮತಿ ನೀಡಲಾಗಿದ್ದು, ಅದೇ ಕಾಲಕ್ಕೆ ಇದಕ್ಕೆ ಸರ್ಕಾರಿ ಖಾತರಿ ನೀಡಲು ನಿರ್ಧಾರ.

– 2014-15ನೇ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದಾಗಿ ಹಾನಿಯಾಗಿರುವ ಬೆಳೆಗಳಿಗೆ ಇನ್ ಪುಟ್ ಸಬ್ಸಿಡಿ ಒದಗಿಸಲು ಸಂಪುಟ ತೀರ್ಮಾನಿಸಿದ್ದು, ಇದಕ್ಕಾಗಿ ಅಗತ್ಯದ ಅನುದಾನ ಬಿಡುಗಡೆ ಮಾಡಲು ತೀರ್ಮಾನಿಸಿದೆ.

-ಕರ್ನಾಟಕ ಹೈಕೋರ್ಟ್ ನ ಬೆಂಗಳೂರು, ಧಾರವಾಡ ಹಾಗೂ ಗುಲ್ಬರ್ಗಗಳಲ್ಲಿನ ಪೀಠಗಳಲ್ಲಿ ಸಮಗ್ರ ನ್ಯಾಯಾಲಯ ಪ್ರಕರಣ ನಿರ್ವಹಣಾ ಪದ್ಧತಿಯನ್ನು 10.16 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ತೀರ್ಮಾನ.

-ಅಗರ ಕೆರೆಯನ್ನು 16.10 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಆಡಳಿತಾತ್ಮಕ ಅನುಮೋದನೆ ನೀಡಿರುವ ಸರ್ಕಾರ ಗಾಲ್ಫ್ ಕ್ಲಬ್ ಸಂಸ್ಥೆಗೆ ನೀಡಿರುವ ಜಮೀನಿನ ಗುತ್ತಿಗೆ ಬಾಡಿಗೆ ಪರಿಷ್ಕರಿಸಿದೆ.

-ತುಮಕೂರು ಜಿಲ್ಲೆಯ ಕೊರಟಗೆರೆಯ ಕೋಳಾಲ ಹೋಬಳಿ, ಸಿದ್ದಾಪುರ ಗ್ರಾಮದ 12 ಎಕರೆ ಗೋಮಾಳ ಜಮೀನನ್ನು ಚಾಮುಂಡೇಶ್ವರಿ, ಈಶ್ವರ ಹಾಗೂ ಪರ್ವತಾಂಜನೇಯ ದೇವಾಲಯ ಸೇವಾ ಟ್ರಸ್ಟ್ ಗೆ ಮಂಜೂರು ಮಾಡಲು ಸಮ್ಮತಿಸಿದೆ.

Leave a Reply