ಐಸಿಸಿ ಶ್ರೇಯಾಂಕದ ಅಗ್ರಸ್ಥಾನದಲ್ಲಿ ಅಶ್ವಿನ್

 

ಐಸಿಸಿ ಟೆಸ್ಟ್ ಶ್ರೇಯಾಂಕದ ಪಟ್ಟಿ ಪ್ರಕಟವಾಗಿದ್ದು, ಬೌಲಿಂಗ್ ಮತ್ತು ಆಲ್ ರೌಂಡರ್ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಆಟಗಾರನ ಸ್ಥಾನವನ್ನು ಭಾರತದ ಸ್ಪಿನ್ ಬೌಲರ್ ಆರ್ ಅಶ್ವಿನ್ ಅಲಂಕರಿಸಿದ್ದಾರೆ. ಈ ಗೌರವ ಭಾರತದ ಆಟಗಾರರೊಬ್ಬರಿಗೆ 1973ರ ನಂತರ ದೊರೆತಿದೆ. ಬಿಶನ್ ಸಿಂಗ್ ಬೇಡಿ ಈ ಹಿಂದೆ ಇಂತಹ ಗೌರವಕ್ಕೆ ಪಾತ್ರರಾಗಿದ್ದರು. ಈಗ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇನ್ ರವರನ್ನು ಹಿಂದಿಕ್ಕಿ 871 ಅಂಕಗಳನ್ನು ಹೊಂದಿರುವ ಅಶ್ವಿನ್ ಟಾಪ್ ಒಂದನೆ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

ವರ್ಷದ ಕೊನೆ ದಿನವಾದ ಗುರುವಾರ ಈ ಪಟ್ಟಿಯನ್ನು ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಬಿಡುಗಡೆಗೊಳಿಸಿದೆ. ಆಲ್ ರೌಂಡ್ ವಿಭಾಗದಲ್ಲೂ ಅಶ್ವಿನ್ ಅಗ್ರ ಶ್ರೇಯಾಂಕಿತ ಆಟಗಾರನ ಸ್ಥಾನ ಪಡೆದಿರುವುದು ವಿಶೇಷ. 2015 ರಲ್ಲಿ 9 ಟೆಸ್ಟ್ ಪಂದ್ಯಗಳಲ್ಲಿ 62 ವಿಕೆಟ್ ಗಳನ್ನು ಪಡೆದು ಈ ವರ್ಷದ ಅತ್ಯುತ್ತಮ ಬೌಲರ್ ಎನಿಸಿಕೊಂಡಿದ್ದಾರೆ. ಇನ್ನೂ ಬ್ಯಾಟಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

ಭಾರತದ ಅಜಿಂಕ್ಯಾ ರಹಾನೆ 11 ನೇ ಸ್ಥಾನ ಪಡೆದಿದ್ದು ಬಿಟ್ಟರೆ ಭಾರತದ ಯಾವ ಬ್ಯಾಟ್ಸ್ ಮ್ಯಾನ್ ಸಹ ಟಾಪ್ 20 ರಲ್ಲಿ ಕಾಣಿಸಿಕೊಂಡಿಲ್ಲ. ಬೌಲಿಂಗ್ ನಲ್ಲಿ ರವಿಂದ್ರ ಜಡೇಜಾಗೆ 6 ನೇ ಸ್ಥಾನ ಲಭಿಸಿದರೆ ಆಲ್ ರೌಂಡರ್ ವಿಭಾಗದಲ್ಲಿ 5 ನೇ ಶ್ರೇಣಿ ಪಡೆದಿದ್ದಾರೆ.

Leave a Reply