ಕತಾರ್ ನ ಗ್ಯಾಸ್ ದರ ಕಡಿತ, ನಮಗೀಗ ವಾರ್ಷಿಕ 4 ಸಾವಿರ ಕೋಟಿ ರುಪಾಯಿ ಉಳಿತಾಯ!

 

ವರ್ಷಾಂತ್ಯದಲ್ಲೊಂದು ಅಚ್ಛೇ ಸುದ್ದಿ. ಭಾರತಕ್ಕೆ ಇಂಧನ ಪೂರೈಸುವ ದೇಶಗಳಲ್ಲೊಂದಾದ ಕತಾರ್, ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್ ( ಎಲ್ ಎನ್ ಜಿ) ದರವನ್ನು ಗಣನೀಯವಾಗಿ ಇಳಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನದ ಬೆಲೆ ಇಳಿಯುತ್ತಿರುವುದರ ಹಿನ್ನೆಲೆಯಲ್ಲಿ ಕತಾರ್ ಇಂಥದೊಂದು ಕ್ರಮಕ್ಕೆ ಮುಂದಾಗಿದೆ.

ಸರ್ಕಾರಿ ಸ್ವಾಮ್ಯದ ಪೆಟ್ರೊನೆಟ್ ಎಲ್ ಎನ್ ಜಿ ಸಂಸ್ಥೆಯು ಗುರುವಾರ ಕತಾರ್ ನೊಂದಿಗೆ ತನ್ನ ಒಪ್ಪಂದವನ್ನು ನವೀಕರಿಸಿಕೊಂಡಿತು. ಈ ಸಂದರ್ಭದಲ್ಲಿ, ಮೊದಲು ಎಲ್ ಎನ್ ಜಿಯ ಪ್ರತಿ ಮಿಲಿಯನ್ ಬ್ರಿಟಿಷ್ ಥರ್ಮಲ್ ಯೂನಿಟ್ ಗೆ 12-13 ಡಾಲರ್ ನೀಡುತ್ತಿದ್ದಿದ್ದರ ಬದಲಾಗಿ, 6-7 ಡಾಲರ್ ಎಂದು ನಿಗದಿಪಡಿಸಲಾಯಿತು. ಜತೆಯಲ್ಲೇ, ಪ್ರಸಕ್ತ ವರ್ಷದಲ್ಲಿ ಕಡಿಮೆ ವಹಿವಾಟು ನಡೆಸಿದ್ದಕ್ಕೆ ಭಾರತದ ಮೇಲೆ ವಿಧಿಸಿದ್ದ 12 ಸಾವಿರ ಕೋಟಿ ರುಪಾಯಿಗಳ ದಂಡವನ್ನೂ ತೆಗೆದುಹಾಕಲಾಗಿದೆ.

ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪ್ರಕಾರ, ದರ ಇಳಿಕೆಯ ಈ ಒಪ್ಪಂದದಿಂದ ಸರ್ಕಾರಕ್ಕೆ ವಾರ್ಷಿಕವಾಗಿ ಸುಮಾರು 4000 ಕೋಟಿ ರುಪಾಯಿಗಳ ಉಳಿತಾಯವಾಗಲಿದೆ. ಪ್ರತಿವರ್ಷ ಭಾರತವು ಕತಾರ್ ನಿಂದ 70 ಲಕ್ಷ ಟನ್ ಎಲ್ ಎನ್ ಜಿ ಆಮದು ಮಾಡಿಕೊಳ್ಳುತ್ತದೆ.

Leave a Reply