ಹ್ಯಾಪಿ ನ್ಯೂ ಇಯರ್ ಎಂಬ ಸಂತೋಷ ಘೋಷಕ್ಕೆ ಈ ಅಮ್ಮಂದಿರ ನೋವಿನ ದನಿ ಸವಾಲೊಡ್ಡಿದೆ

 

ಕ್ಯಾಲೆಂಡರು ಬದಲಾಗುತ್ತಿದೆ. ಹಿಂದಿನ ವರ್ಷದ ರಸಕ್ಷಣಗಳನ್ನೂ, ಮುಂದಿನ ವರ್ಷದ ನಿರೀಕ್ಷೆಗಳನ್ನೂ ಹರವಿಟ್ಟುಕೊಂಡು ನಾವೆಲ್ಲ ಕುಳಿತಿದ್ದೇವೆ.

ನಮ್ಮ ಲೋಕದ ಇನ್ನೊಂದು ಚೂರಿನಲ್ಲಿ ಇಂಥ ಕನಸು- ನೆನಪುಗಳಿಗೇನೂ ಎಡೆಯಿಲ್ಲದಂತೆ ಆತಂಕವನ್ನೇ ಹೊದ್ದು ಕುಳಿತ ಅಮ್ಮಂದಿರಿದ್ದಾರೆ. ಐಎಸ್ ಐಎಸ್ ಎಂಬ ಉಗ್ರ ಸಂಘಟನೆಯ ಫರ್ಮಾನು ನಡೆಯುತ್ತಿರುವ ಸಿರಿಯಾ ಮತ್ತು ಮಧ್ಯಪ್ರಾಚ್ಯದ ಕೆಲ ಭಾಗಗಳಲ್ಲಿ ಯಾಜಿದಿ ಸಮುದಾಯದ ಮಹಿಳೆಯರೆಂದರೆ ಜಿಹಾದಿಗಳ ಆಟಿಕೆಗಳು. ಇವರನ್ನು ತೋಚಿದ ರೀತಿಯಲ್ಲೆಲ್ಲ ಅತ್ಯಾಚಾರ, ಮಾರಾಟ, ಗುಲಾಮಗಿರಿಗೆ ಒಳಪಡಿಸುತ್ತಿದ್ದಾರೆ ಉಗ್ರರು. ಜಗತ್ತು ಈ ಕತೆಗಳನ್ನಷ್ಟೇ ಕೇಳಿಕೊಂಡು ಕೈಕಟ್ಟಿ ಕುಳಿತಿದೆ. ಈ ಹಿಂದೆ ನಾಜಿ ಜರ್ಮನಿಯಲ್ಲಿ ಯಹೂದಿ ಮಹಿಳೆಯರಿಗೆ ಇಂಥದೇ ಸ್ಥಿತಿ ಒದಗಿತ್ತು.

ಈ ಕ್ರೌರ್ಯದ ತಾರ್ಕಿಕ ಅಂತ್ಯ ಹೇಗೋ ಗೊತ್ತಿಲ್ಲ. ಆದರೆ, ಹೊಸತನ್ನು ತಬ್ಬಿಕೊಳ್ಳುವ ಧಾವಂತ- ಸಂಭ್ರಮಗಳ ನಡುವೆ ಯಾಜಿದಿ ಹೆಣ್ಣುಗಳ ಆಕ್ರಂದನ ನಮ್ಮೆಲ್ಲರ ಪ್ರಜ್ಞೆಯನ್ನು ಘಾಸಿಗೊಳಿಸುತ್ತಲೇ ಇರಲಿ. ದೂರದಲ್ಲೆಲ್ಲೊ ಮೊಳಗುತ್ತಿರುವ ಈ ಜಿಹಾದಿ ಅಟ್ಟಹಾಸ, ನಮ್ಮ ಮನೆಬಾಗಿಲಲ್ಲೇ ಕೇಳಿಸುತ್ತಿರುವ ಭಾವವೊಂದು ನಮ್ಮೆಲ್ಲರನ್ನು ಎಚ್ಚರಿಸಲಿ…

Leave a Reply