ಬಂತಿದೋ ಬ್ಯಾಡ್ಮಿಂಟನ್ ಪ್ರೀಮಿಯರ್

ಡಿಜಿಟಲ್ ಕನ್ನಡ ತಂಡ

ಈಗೇನಿದ್ದರೂ ಪ್ರೀಮಿಯರ್ ಟೂರ್ನಿಗಳ ಕಾಲ. ಕಬಡ್ಡಿ ಪ್ರೀಮಿಯರ್, ಕುಸ್ತಿ ಪ್ರೀಮಿಯರ್… ಈಗ ಇದೋ ಬರ್ತಿದೆ ಬ್ಯಾಡ್ಮಿಂಟನ್ ಪ್ರೀಮಿಯರ್. ಹೊಸ ಅಲೋಚನೆ, ಹೊಸ ರೂಪುರೇಷೆಗಳನ್ನು ಆಳವಡಿಸಿಕೊಂಡು ಸಿದ್ದಗೊಂಡಿರುವ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಎರಡನೇ ಆವೃತಿ ಶನಿವಾರದಿಂದ ಪ್ರಾರಂಭ.

2013ರಲ್ಲಿ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ (ಐಬಿಎಲ್) ಹೆಸರಿನಲ್ಲಿ ಆರಂಭವಾದ ಈ ಟೂರ್ನಿ ಕೆಲವು ವಿವಾದಗಳಿಂದ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿತ್ತು. ಜನವರಿ 2 ರಿಂದ 17 ರ ವರೆಗೆ ನಡೆಯುವ ಟೂರ್ನಿಯಲ್ಲಿ 6 ತಂಡಗಳು ಭಾಗವಹಿಸಲಿವೆ.

ಬ್ಯಾಡ್ಮಿಂಟನ್ ಲೋಕದಲ್ಲಿ ಉತ್ತುಂಗಕ್ಕೆ ಏರಿರುವ ವಿಶ್ವ ಟಾಪ್ 2  ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಮೊದಲ ಆವೃತ್ತಿಯಲ್ಲಿ ಹೈದರಾಬಾದ್ ಹಾಟ್ ಶಾಟ್ಸ್ ಪರ ಆಡಿದ್ದರು. ಈ ಆವೃತ್ತಿಯಲ್ಲಿ ಅವಧೆ ವಾರಿಯರ್ಸ್ ಪಾಲಾಗಿರುವ ಸೈನಾ, ಮುಂಬೈ ರಾಕೆಟ್ಸ್ ತಂಡದ ವಿರುದ್ಧ ಶನಿವಾರ ಸೆಣಸಲಿದ್ದಾರೆ.

ಕಳೆದ ಬಾರಿ ಸೈನಾಗೆ ಹೈದರಾಬಾದ್ ತಂಡ ನೀಡಿದ್ದ ಮೊತ್ತ 71.27 ಲಕ್ಷ ರುಪಾಯಿ. ಈ ಬಾರಿ 66.76 ಲಕ್ಷ ಪಡೆದುಕೊಂಡು ಅವಧೆ ವಾರಿಯರ್ಸ್ ತಂಡಕ್ಕೆ ಸೇರಿದ್ದಾರೆ. ಅವಧೆ ತಂಡಕ್ಕೆ ಪೈಪೋಟಿ ನೀಡಲು ಮುಂಬೈ ತಂಡ ಭಾರತದ ಪುರುಷರ ವಿಭಾಗದ ಇಬ್ಬರು ಅಗ್ರ ಶ್ರೇಯಾಂಕಿತ ಶೆಟ್ಲರ್ ಗಳಾದ ಹೆಚ್ ಎಸ್ ಪ್ರಣಯ್ ಮತ್ತು ಆರ್ ಎಂ ವಿ ಗುರು ಸಾಯಿದತ್ತ ರವರು ಆಯ್ಕೆಯಾಗಿದ್ದಾರೆ. ವಿದೇಶಿ ಶೆಟ್ಲರ್ ಗಳಾದ ಡೆನ್ ಮಾರ್ಕಿನ ಮಥೀಯಸ್, ರಷ್ಯಾದ ವಾಡ್ಲಿಮೀರ್ ಲ್ಯಾನವ್ ರವರ ಆಟವು ಈ ಟೂರ್ನಿಗೆ ಮತ್ತಷ್ಟು ಮೆರಗು ನೀಡಲಿದೆ.

Leave a Reply