ಸಿಕ್ಕಾಪಟ್ಟೆ ಕೆಲ್ಸ ಮಾಡಿ, ಕ್ರೆಡಿಟ್ಟೂ ಹಂಗೇ ತಗಳಿ.. ಹೊಸವರ್ಷದಲ್ಲಿ ನೀವು ಅನುಸರಿಸಬಹುದಾದ ಮೋದಿಮಂತ್ರ!

 

ಡಿಜಿಟಲ್ ಕನ್ನಡ ಟೀಮ್

ಕೆಲಸದಲ್ಲಿ ತೊಡಗಿಸಿಕೊಳ್ಳುವ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಾಟಿ ಯಾರಿಲ್ಲ. ಹೊಸವರ್ಷದ ದಿನವೂ ನಿರಾಳರಾಗುವಂತಿಲ್ಲ ಎಂಬುದು ಅವರ ಧೋರಣೆ. ಹೀಗಾಗಿ ತಮ್ಮ ಸಂಪುಟದ ಸದಸ್ಯರಿಗೆಲ್ಲ, ‘ಹೊಸವರ್ಷದ ದಿನವನ್ನು ಉಳಿದೆಲ್ಲ ದಿನಗಳಂತೆ ಕಾಣಿರಿ, ಕೆಲಸದಲ್ಲಿ ತೊಡಗಿಸಿಕೊಳ್ಳಿ’ ಅಂತ ಸಂದೇಶ ಕಳುಹಿಸಿದ್ದಾರಂತೆ ಎಂಬುದು ಮೂಲಗಳನ್ನು ಉಲ್ಲೇಖಿಸಿ ನಾನಾ ಮಾಧ್ಯಮಗಳಲ್ಲಿ ಆಗುತ್ತಿರುವ ವರದಿ.

ಇದರ ಪರಿಣಾಮ ಸ್ಪಷ್ಟವಾಗಿದೆ. ವಾರಾಂತ್ಯವನ್ನು ಜೋಡಿಸಿಕೊಂಡು ಒಂದೆರಡು ದಿನ ರಜೆ ಮಾಡೋಣ ಎಂದುಕೊಂಡಿದ್ದ ಸಚಿವರೆಲ್ಲ, ತಮ್ಮ ಪ್ಲಾನ್ ಮುಂದೂಡಿ ಹೊಸವರ್ಷದ ಪ್ರಾರಂಭದ ವಾರವನ್ನು ಕಚೇರಿಯಲ್ಲೇ ಕಳೆಯುವುದಕ್ಕೆ ನಿರ್ಧರಿಸಿದರು. ಇದುಬಿಜೆಪಿಯ ಇತರ ನೇತಾರರ ಮೇಲೂ ಪರಿಣಾಮ ಬೀರಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೊಸವರ್ಷಕ್ಕೆ ವಾರದಮಟ್ಟಿಗೆ ರಜೆ ತೆಗೆದುಕೊಳ್ಳುತ್ತಿದ್ದವರು ಈ ಬಾರಿ ತೆಗೆದುಕೊಂಡಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಹ ತಮ್ಮ ರಜೆಯನ್ನು ಒಂದೇ ದಿನಕ್ಕೆ ಮೊಟಕುಗೊಳಿಸಿಕೊಂಡಿದ್ದಾರೆ. ಜಾರ್ಖಂಡ್ ಮುಖ್ಯಮಂತ್ರಿ ರಘುವರ ದಾಸ್ ಹಾಗೂ ಹರ್ಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಸಹ ಹೊಸ ವರ್ಷಾಚರಣೆ ಎಂದೇನೂ ಮಾಡದೇ ದೈನಂದಿನ ಕೆಲಸದಲ್ಲಿ ತಲ್ಲೀನರಾಗುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಇಷ್ಟೆಲ್ಲ ಆಗ್ತಿದ್ರೆ, ಮೋದಿಯವರ ರೈಟ್ ಹ್ಯಾಂಡ್ ಮನುಷ್ಯ ಅಮಿತ್ ಶಾ ಬೇರೆ ಆಗ್ತಾರೆಯೇ? ಹೊಸವರ್ಷದ ಆರಂಭವನ್ನು ಪಕ್ಷದ ಕಾರ್ಯಕರ್ತರ ಅಹವಾಲುಗಳನ್ನು ಆಲಿಸುವುದಕ್ಕೆಂದೇ ಎತ್ತಿಟ್ಟಿದ್ದಾರವರು.

ಹಿಂಗೆಲ್ಲ ಕೆಲಸ ಮಾಡಿದಾಗ ಅದರ ಶ್ರೇಯಸ್ಸು ಪಡೆಯೋಕೆ ಯಾಕ್ರೀ ಮುಜುಗರ ಇಟ್ಕೋಬೇಕು? ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅನನ್ಯ. ವೇದಿಕೆ ಹಲವರು ಏರುತ್ತಾರೆ, ಆದರೆ ಕೆಮರಾ ಎಲ್ಲಿರುತ್ತೆ ಅಂತ ಮೋದಿಯವರಿಗೆ ಮಾತ್ರ ಸ್ಪಷ್ಟವಾಗಿ ಗೊತ್ತಿರುತ್ತೆ ಅನ್ನೋದು ಈಗ ಜೋಕಾಗಿ ಉಳಿದಿಲ್ಲ. ಅದಕ್ಕೇನೂ ತಕರಾರು ಮಾಡೋದು ಬೇಡ ಬಿಡಿ. ಆದ್ರೆ ಕೆಲಸ- ಕೆಲಸಕ್ಕೆ ತಕ್ಕ ಕ್ರೆಡಿಟ್ ಎಂಬ ಮೋದಿ ಜಲಕ್ ಒಮ್ಮೆ ಮೆಲುಕು ಹಾಕೋಣ…

ವಿಶ್ವನಾಯಕರು ಏನೆಲ್ಲ ತಿಳಿದುಕೊಂಡಿರಬಹುದು, ಕೆಮರಾ ಆ್ಯಂಗಲ್ ಹೊರತಾಗಿ… ಲಾಲುರಂಥ ಟಿವಿ ಫ್ರೆಂಡ್ಲಿ ರಾಜಕಾರಣಿಗಳೂ ಸಂಭ್ರಮದಲ್ಲಿ ಮೈಮರೆಯಬಹುದೇನೋ, ಆದ್ರೆ ಮೋದಿಯವರಲ್ಲ… ಅರ್ಥ ಆಗಿಲ್ವಾ? ಈ ಫೋಟೊಗಳನ್ನು ನೋಡಿ..

modicmodic1modic2modic4

 

ಅಂದಹಾಗೆ, ಫೇಸ್ ಬುಕ್ ನ ಜುಕರ್ ಬರ್ಗ್ ಗೂ ಇಂಥದೊಂದು ಸತ್ಯದ ಅರಿವು ಮೂಡಿಸಿದ್ದು ಮೋದಿಯವರೇ. ಅಲ್ಲದೇ, ಇನ್ನೊಮ್ಮೆ ತಮ್ಮ ಜತೆಗಿದ್ದು ಬೊಕೆ ಸ್ವೀಕರಿಸುತ್ತಿದ್ದ ಭದ್ರತಾ ದಳದ ಸಿಪಾಯಿ ಬಗ್ಗೆ ಮೋದಿಯವರಿಗೇಕೋ ಮುನಿಸಾದಂತಿತ್ತು. ಏಕೋ, ಏನೋ.. ನೀವೇ ನೋಡಿ..

Leave a Reply