ಐಪಿಎಲ್ ಸಂಭಾವನೆ: ಧೋನಿಯನ್ನು ಹಿಂದಿಕ್ಕಿದ ಕೋಹ್ಲಿ, ಯಾರಿಗೆಷ್ಟು ಹಣ ಎಂಬ ನಿಖರ ಮಾಹಿತಿ

 

ಐಪಿಎಲ್ ಸಂಭಾವನೆಯಲ್ಲಿ ಕೋಹ್ಲಿಯೇ ಟಾಪ್

ಕ್ರಿಕೆಟ್ ಲೋಕದಲ್ಲಿ ದುಡ್ಡಿನ ಸುರಿಮಳೆ ಸುರಿಸುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಲವು ವಿವಾದಗಳಿಗೆ ಸುದ್ದಿಯಾಗಿದ್ದೆ ಹೆಚ್ಚು. ಆದರೆ ಈಗ ಪಾರದರ್ಶಕತೆ ಕಾಯ್ದುಕೊಳ್ಳಲು ದಿಟ್ಟ ನಿರ್ಧಾರಗಳಿಗೆ ಮುಂದಾಗಿದೆ. ಇದರ ಮೊದಲ ಹೆಜ್ಜೆಯಾಗಿ ತಂಡಗಳಲ್ಲಿ ಉಳಿಸಿಕೊಂಡಿರುವ ಆಟಗಾರರ ನಿಜವಾದ ವೇತನವನ್ನು ಬಿಸಿಸಿಐ ಪ್ರಕಟಿಸಿದೆ.

ಐಪಿಎಲ್ ನ 9 ನೇ ಆವೃತಿಯ ಸಿದ್ದತೆಗಳು ನಡೆಯುತ್ತಿದ್ದು ಆಟಗಾಗರ ಹರಾಜು ಪ್ರಕ್ರಿಯೆ ಬಾಕಿ ಇದೆ. ಇನ್ನೂ ಈಗಾಗಲೇ ತಂಡಗಳಲ್ಲಿ ಕಾಯಂ ಆಗಿ ಆಡುತ್ತಿರುವ ಆಟಗಾರರ ಪೈಕಿ ರಾಯಲ್ ಚಾಲೆಂಜರ್ ಬೆಂಗಳೂರು (ಆರ್.ಸಿ.ಬಿ) ತಂಡದ ನಾಯಕ ವಿರಾಟ್ ಕೋಹ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಆವರು 15 ಕೋಟಿ ರು ಸಂಭಾವನೆ ಪಡೆಯುವ ಮೂಲಕ ಮಹೇಂದ್ರ ಸಿಂಗ್ ಧೋನಿಯನ್ನು ಹಿಂದಿಕ್ಕಿದ್ದಾರೆ.

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾದ ಆರೋಪಕ್ಕೆ ಗುರಿಯಾಗಿ 2 ವರ್ಷಗಳ ಕಾಲ ಅಮಾನತ್ತಾಗಿರುವ ತಂಡ ಚೆನೈ ಸೂಪರ್ ಕಿಂಗ್ಸ್ (ಸಿ.ಎಸ್.ಕೆ). ಇದರ ನಾಯಕರಾಗಿದ್ದ, ಪ್ರಸ್ತುತ ಪುಣೆದ ತಂಡದಲ್ಲಿ ಸ್ಥಾನ ಪಡೆದಿರುವ ಧೋನಿ ಮತ್ತು ಸನ್ ರೈಜರ್ಸ ಹೈದರಾ ಬಾದ್ (ಎಸ್.ಆರ್.ಹೆಚ್) ತಂಡದ ಆಟಗಾರ ಶಿಖರ್ ಧವನ್  ತಲಾ 12.5 ಕೋಟಿ ರು ಪಡೆಯುತ್ತಿದ್ದಾರೆ. ಹಾಗೂ ಸಿ.ಎಸ್.ಕೆ ಯ ಮತ್ತೊಬ್ಬ ಸ್ಟಾರ್ ಆಟಗಾರ ಪ್ರಸ್ತುತ ರಾಜ್ ಕೋಟ್ ತಂಡದಲ್ಲಿ ಸ್ಥಾನ ಪಡೆದಿರುವ ಸುರೇಶ್ ರೈನಾ ಕೂಡ 12.5 ಕೋಟಿ ರು ಸಂಭಾವನೆ ಪಡೆಯುತ್ತಿದ್ದಾರೆ.

ವಿದೇಶಿ ಆಟಗಾರರ ವಿಚಾರದಲ್ಲಿ ಮುಂಬೈ ಇಂಡಿಯನ್ಸ್ (ಎಂ.ಐ) ತಂಡ ವೆಸ್ಟ್ ಇಂಡಿಸ್ಸ್ ನ ಆಲ್ ರೌಂಡರ್ ಕೇರಾನ್ ಫೋಲಾಡ್ ಗೆ ಅತಿ ಹೆಚ್ಚು ಸಂಭಾವನೆ ನೀಡಿದೆ. ಇವರು ಪಡೆಯುವ ಸಂಭಾವನೆ 9.7 ಕೋಟಿ ರು ಎಂದಿತ್ತು. ಆದರೆ ಅಧಿಕೃತ ಮಾಹಿತಿ ಪ್ರಕಾರ 9.5 ಕೋಟಿ ರು ಎಂಬುದು ಧೃಡಪಟ್ಟಿದೆ.

ಗಂಭೀರ್ 10 ಕೋಟಿ ರು, ಕಳೆದ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮುಂಬೈ ತಂಡದ ನಾಯಕ 1.25 ಕೋಟಿ ರು, ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ 4 ಕೋಟಿ ಗೆ ಬಿಡ್ ಆಗಿದ್ದ ಮನನ್ ಒರಾ, ಶೇ 10 ರಷ್ಟನ್ನು ಮಾತ್ರ ಅಂದರೆ 4 ಲಕ್ಷ ರು. ಪಡೆದಿದ್ದಾರೆ. ಇದೇ ರೀತಿ ವಿದೇಶಿ ಆಟಗಾರರಾದ ಡೇವಿಡ್ ಮಿಲ್ಲರ್, ಸ್ಟೀವ್ ಸ್ಮಿತ್, ಬ್ರೇಂಡನ್ ಮೆಕಲಮ್ ಮತ್ತು ಜೇಮ್ಸ್ ಫಾಲ್ಕನರ್ ರವರು ಬಿಡ್ ಆದ ಮೊತ್ತಕ್ಕಿಂತ ಕಡಿಮೆ ಹಣ ಪಡೆದಿದ್ದಾರೆ.

Leave a Reply