ಬಿಬಿಸಿ ಕಾಮಾಲೆ ರೋಗ, ಭಾರತದ ಮೇಲಿನ ಉಗ್ರ ದಾಳಿ ಇವರಿಗೆ ಸಣ್ಣ ವಿಷಯ!

ಡಿಜಿಟಲ್ ಕನ್ನಡ ಟೀಮ್

ಪಾಶ್ಚಾತ್ಯ ರಾಷ್ಟ್ರಗಳಿಗೆ ಮೊದಲಿನಿಂದಲೂ ಉಗ್ರವಾದದ ಬಗ್ಗೆ ಇಬ್ಬಗೆ ನೀತಿ. ಅದು ಅವರ ಮಾಧ್ಯಮಗಳಲ್ಲಿ ಆಗಾಗ ರಾರಾಜಿಸುತ್ತದೆ. ಶನಿವಾರ ಪಂಜಾಬ್ ನ ಪಠಾಣ್ ಕೋಟ್ ನ ವಾಯುಸೇನೆಯ ನೆಲೆಯ ಮೇಲಾದ ಉಗ್ರರ ದಾಳಿಯನ್ನು ಬಿಬಿಸಿ ವರದಿ ಮಾಡಿರುವ ರೀತಿ ಹೇಗಿದೆ ನೋಡಿ. ‘ಭಾರತದ ಸೇನಾನೆಲೆ ಮೇಲೆ ಬಂದೂಕುಧಾರಿಗಳ ದಾಳಿ’ ಎಂಬ ಶೀರ್ಷಿಕೆಯಲ್ಲಿ ಘಟನೆಯನ್ನು ವರದಿ ಮಾಡಿದೆ ಬಿಬಿಸಿ ಜಾಲತಾಣ.

bbc

ಇದರರ್ಥ, ಪಾಶ್ಚಾತ್ಯ ದೇಶಗಳ ಮೇಲೆ ದಾಳಿಗಳಾದಾಗ ಮಾತ್ರ ಉಗ್ರಗಾಮಿ, ಭಯೋತ್ಪಾದಕ ಎಂಬೆಲ್ಲ ಸಂಬೋಧನೆಗಳೊಂದಿಗೆ ಅದನ್ನು ತುಂಬ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಬಂದೂಕುದಾರಿ ಅಂದರೆ ಯಾರೂ ಆಗಿರಬಹುದು. ಯಾರೋ ಭಾರತೀಯನಿಗೇ ಸಿಟ್ಟುಬಂದು ಗನ್ ಎತ್ತಿಕೊಂಡು ಕೋಲಾಹಲ ಮಾಡಿರಬಹುದೇನೋ ಎಂಬಷ್ಟರಮಟ್ಟಿಗೆ ಈ ವಿದ್ಯಮಾನವನ್ನು ಸಹಜವಾಗಿ ಗ್ರಹಿಸಿದೆ ಬಿಬಿಸಿ.

ಇದೇ ಬಿಬಿಸಿ ಮೊನ್ನೆ ಹೊಸವರ್ಷದ ಹೊಸ್ತಿಲಲ್ಲಿ ಯುರೋಪ್ ಮೇಲೆ ದಾಳಿಗಳಾಗಬಹುದು ಎಂಬ ಸುದ್ದಿಯನ್ನು ಪ್ರಸ್ತುತ ಪಡಿಸುವಾಗ ಮಾತ್ರ ಉಗ್ರವಾದ ಎಂಬ ಶಬ್ದದ ಬಗ್ಗೆ ಯಾವ ಮಡಿವಂತಿಕೆಯನ್ನೂ ತೋರಲಿಲ್ಲ. ಉಗ್ರದಾಳಿಯಾಗುವ ಬಗ್ಗೆ ಬೆಲ್ಜಿಯಂ ಸರ್ಕಾರ ಕಟ್ಟೆಚ್ಚರ ಮೊಳಗಿಸಿರುವುದರಿಂದ ಬ್ರಸೆಲ್ಸ್ ನ ಹೊಸವರ್ಷಾಚರಣೆ ಮಂಕಾಗಿದೆ ಅಂತ ಶೀರ್ಷಿಕೆ ಬರೆದಿತ್ತು.

bbc1

ಪಾಶ್ಚಾತ್ಯ ರಾಷ್ಟ್ರಗಳ ಮೇಲೆ ದಾಳಿ ಮಾಡಿದವರು ಮಾತ್ರ ಭಯೋತ್ಪಾದಕರೆನಿಸುತ್ತಾರೆ, ಉಳಿದವರೇನಿದ್ದರೂ ಬಂದೂಕುಧಾರಿಗಳು (ಕಳ್ಳರು, ದರೋಡೆಕೋರರು ಎಂದಂತೆ) ಎಂದಾಯಿತಲ್ಲವೇ?

ಜಾಗತಿಕವಾಗಿ ಇನ್ನೊಂದು ಪ್ರಭಾವಿ ಮಾಧ್ಯಮವಾಗಿರುವ ‘ಅಲ್ ಜಜೀರಾ’ ಧೋರಣೆಯೂ ಇದೇ ಧಾಟಿಯಲ್ಲಿದೆ. ಬಂದೂಕುಧಾರಿಗಳು ಭಾರತದ ಮೇಲೆ ದಾಳಿ ಮಾಡಿದ್ದಾಗಿ ಸಾರುತ್ತಿರುವ ಶೀರ್ಷಿಕೆ ಹಾಗೂ ಅಂತರ್ಜಾಲ ವರದಿಯಲ್ಲಿ ಉಗ್ರ ಪದ ಬಳಸದೇ ‘ದಾಳಿಕೋರರು’ ಅಂತ ಉಲ್ಲೇಖಿಸುವ ಮಡಿವಂತಿಕೆ ಮೆರೆದಿದೆ ಅಲ್ ಜಜೀರಾ! ಇಂಥವರೇ ಬರೆದ ಭಾರತದ ಇತಿಹಾಸ ಎಂಥವರನ್ನೆಲ್ಲ ಹೀರೋ ಮಾಡಿದ್ದಿರಬಹುದಲ್ವೇ?

al jajeera

2 COMMENTS

  1. ಅಂತರಾಷ್ಟ್ರೀಯ ಮಾದ್ಯಮಗಳಿಗೆ ಯಾವ ಸುದ್ದಿಗಳನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಅವುಗಳದ್ದೇ ಆದ ಸ್ಟೈಲ್ ಶೀಟ್ ಇರುತ್ತದೆ. ಭಾರತ ಮತ್ತು ಪಾಕಿಸ್ತಾನದ ವಿಚಾರ ಬಂದರೆ ಅವರ ನಿಲುವು ನಮ್ಮ ದೇಶಗಳ ಮಾದ್ಯಮಗಳ ನಿಲುವು ಆಗಲೇಬೇಕು ಎಂದು ನಾವು ಬಯಸುವುದು ತಪ್ಪಾಗುತ್ತದೆ.

    ನಿಮಗೆ ಇನ್ನೊಂದು ವಿಚಾರವನ್ನು ಇಲ್ಲಿ ಸ್ಪಷ್ಟಪಡಿಸಬೇಕಿದೆ. ನೀವು ಒಂದು ಸುದ್ದಿಯನ್ನು ಅಂತರಾಷ್ಟ್ರೀಯ ಮಾದ್ಯಮಗಳು ಹೇಗೆ ವರದಿ ಮಾಡಿವೆ ಎಂಬ ಬಗ್ಗೆ ಸುದ್ದಿ ಕೊಡಿ..ಹಿಂದೆ ಕಸಬ್ ವಿಚಾರದಲ್ಲಿ ಹೇಗೆಲ್ಲಾ ಅಂತರಾಷ್ಟ್ರೀಯ ಪತ್ರಿಕೆಗಳು ಸುದ್ದಿ ಪ್ರಕಟಿಸಿದ್ದವು ಎಂಬ ವರದಿಗಳು ಬಂದಿದ್ದವು. ಆದರೆ, ಸುದ್ದಿ ಕೊಡುತ್ತಾ ಕೊನೆಯಲ್ಲಿ, “ಇಂಥವರೇ ಬರೆದ ಭಾರತದ ಇತಿಹಾಸ ಎಂಥವರನ್ನೆಲ್ಲ ಹೀರೋ ಮಾಡಿದ್ದಿರಬಹುದಲ್ವೇ?,” ಎಂದು ಷರಾ ಬರುವ ಮೂಲಕ ನೀವ್ಯಾರು? ನಿಮ್ಮ ಆಲೋಚನೆಗಳು ಏನು ಎಂಬುದನ್ನು ಜಾಹೀರು ಮಾಡಿಕೊಳ್ಳುತ್ತಿದ್ದೀರಿ. ಹಾಗಾದ್ರೆ, ನಿಮ್ಮ ಪ್ರಕಾರ ಇತಿಹಾಸ ಎಂದರೇನು? ಅದನ್ನು ಯಾರು ಬರೆಯಬೇಕು? ವೈವಿಧ್ಯತೆಯೇ ಜೀವಾಳವಾಗಿರುವ ದೇಶದಲ್ಲಿ ನೀವು ಬಯಸುವ ಇತಿಹಾಸ ಹೇಗಿರಬೇಕು? ಏಕರೂಪದ್ದೋ? ಬಹು ಸಂಸ್ಕೃತಿಗಳನ್ನು ಒಪ್ಪಿಕೊಂಡಿದ್ದೋ?

    ‘ಚಡ್ಡಿ’ ಒಳಗಿರಲಿ, ಹೊರಗೆ ಕಾಣಿಸಿಕೊಂಡರೆ ನೋಡಲು ಅಸಹ್ಯವಾಗಿರುತ್ತೆ!

  2. ಪ್ರಭಾ ಅವರೆ,
    ಪ್ಯಾಂಟ್ ಎಂಬ ಕಲ್ಪನೆ ಹುಟ್ಟುವುದಕ್ಕೂ ಮುನ್ನ ಚಡ್ಡಿಯನ್ನೆ ಬಳಸುತಿದ್ದದ್ದು. ಅಂದರೆ ಪ್ಯಾಂಟ್ ಗಿಂತ ಚಡ್ಡಿಗೆ ಇತಿಹಾಸ ಇರೋದು.

Leave a Reply