ಸೀಮೆಎಣ್ಣೆ ಮಾಫಿಯಾಕ್ಕೆ ಕೇಂದ್ರದ ಹೊಡೆತ, ಸಬ್ಸಿಡಿ ಹಣ ಗ್ರಾಹಕನಿಗೆ ನೇರ ವರ್ಗಾವಣೆ

ಎಲ್.ಪಿ.ಜಿ ಸಬ್ಸಿಡಿಯನ್ನು ನೇರ ಬ್ಯಾಂಕಿನ ಖಾತೆಗೆ ಜಮಾಮಾಡುವ ಯೋಜನೆಯಲ್ಲಿ ಯಶಸ್ಸು ಕಂಡಿರುವ ಕೇಂದ್ರ ಸರ್ಕಾರ ಈಗ ಸೀಮೆಎಣ್ಣೆಗೆ ನೀಡುತ್ತಿರುವ ಸಹಾಯಧನವನ್ನು ಏಪ್ರಿಲ್ 1 ರಿಂದ ಗ್ರಾಹಕರ ಖಾತೆಗೆ ಜಮಾಮಾಡುವ ನೇರ ಲಾಭ ವರ್ಗಾವಣೆ (ಡಿಬಿಟಿ) ಮಾಡುವುದಾಗಿ ಘೋಷಿಸಿದೆ.

ಇನ್ನು ಮುಂದೆ ಅಡುಗೆಗೆ ಬಳಸುವ ಸೀಮೆಎಣ್ಣೆಯನ್ನು ಗ್ರಾಹಕರು ಮಾರುಕಟ್ಟೆ ದರದಲ್ಲಿ ಕೊಂಡುಕೊಳ್ಳಬೇಕು.ನಂತರ ಸರ್ಕಾರದಿಂದ ಸಿಗಬೇಕಾದ ಸಹಾಯಧನ ಬ್ಯಾಂಕಿನ ಖಾತೆಯಲ್ಲಿ ಪಡೆದುಕೊಳ್ಳಬೇಕು. ಪ್ರಸ್ತುತ ಮಾರುಕಟ್ಟೆಯಲ್ಲಿ ಸೀಮೆಎಣ್ಣೆ ದರ 43 ರು ಇದೆ. ಸರ್ಕಾರದಿಂದ ಗ್ರಾಹಕರಿಗೆ ಕೊಡುತ್ತಿರುವುದು 12 ರು ಗೆ.

ರಾಷ್ಟ್ರೀಯ ಮಾದರಿ ಸಮೀಕ್ಷೆ ಪ್ರಕಾರ 2011-12 ರಲ್ಲಿ 71.30 ಲಕ್ಷ ಕಿಲೋ ಲೀಟರ್ ಗಳಷ್ಟು ಸೀಮೆಎಣ್ಣೆ ಮುಕ್ತ ಮಾರುಕಟ್ಟೆ ಮತ್ತು ಸಬ್ಸಿಡಿ ಮೂಲಕ ಬಳಕೆಯಾಗಿದೆ. ಇದು 2015-16 ರಲ್ಲಿ 86.85 ಲಕ್ಷ ಕಿಲೋ ಲೀಟರ್ ಗಳಷ್ಟು ಬೇಡಿಕೆ ರಾಜ್ಯಗಳಿಂದ ಬಂದಿದೆ. ಆದರೆ ಈ ಸೀಮೆಎಣ್ಣೆ ಕೆಲವು ಭಾಗಗಳಲ್ಲಿ ಆರ್ಹರಲ್ಲದವರಿಗೂ ತಲುಪುತ್ತಿರುವುದರ ಬಗ್ಗೆ ಮಾಹಿತಿಗಳು ಲಭ್ಯವಾಗಿವೆ. ಅಕ್ರಮವನ್ನು ತಡೆಯುವ ನಿಟ್ಟಿನಲ್ಲಿ ಈ ಯೋಜನೆ ಸಿದ್ಧವಾಗಿದೆ.

ಮಾಫಿಯಾ ಸೃಷ್ಟಿಸಿದ್ದ ಸೀಮೆಎಣ್ಣೆ ವ್ಯವಹಾರಕ್ಕೆ ಕೇಂದ್ರದ ಕ್ರಮ ಕಡಿವಾಣ ಹಾಕಿರುವುದಕ್ಕೆ ಸಾಮಾಜಿಕ ತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಪಶ್ಚಿಮ ಬಂಗಾಳದಲ್ಲಂತೂ ಸೀಮೆಎಣ್ಣೆ ಮಾಫಿಯಾ ಹಣ ಅಧಿಕಾರದ ಮೇಲ್ ಸ್ತರದವರೆಗೆ ತಲುಪ್ತಿತ್ತು ಅಂತ ಟ್ವೀಟ್ ಮಾಡಿದ್ದಾರೆ ಹಿರಿಯ ಪತ್ರಕರ್ತ- ಅಂಕಣಕಾರ ಕಾಂಚನ್ ಗುಪ್ತ.

tw1

ಇತ್ತೀಚಿನ ಕೆಲವು ತಿಂಗಳುಗಳಿಂದ ಸಾಕಷ್ಟು ಹಳ್ಳಿಗಳಿಗೆ ವಿದ್ಯುತ್ ಕಲ್ಪಿಸಿರುವುದರಿಂದ ಈ ಭಾಗಗಳಲ್ಲಿ ಮಹತ್ತರವಾದ ಬೆಳವಣಿಗೆಗಳಾಗಿವೆ. ಜೊತೆಗೆ “ಗಿವ್-ಬ್ಯಾಕ್” ಯೋಜನೆಯಿಂದ ಸುಮಾರು 45 ಲಕ್ಷದಷ್ಟು ಬಡವರಿಗೆ ಎಲ್.ಪಿ.ಜಿ ಗ್ಯಾಸ್ ಸಂಪರ್ಕವನ್ನು ಪಡೆದುಕೊಂಡಿದ್ದಾರೆ. ಇದರಿಂದ ಸೀಮೆಎಣ್ಣೆಯಿಂದ ದೀಪ ಮತ್ತು ಆಡುಗೆ ಮಾಡುವವರ ಸಂಖ್ಯೆಯು ಇಳಿಮುಖಗೊಂಡಿದೆ. ಸರ್ಕಾರದ “ಪಹಲ್” ಯೋಜನೆ ಯಶಸ್ವಿಯಾಗಿದ್ದು ಸೀಮೆಎಣ್ಣೆಯ ಸಬ್ಸಿಡಿಗೂ ಇದೇ ಮಾದರಿಯನ್ನು ಅನುಸರಿಸಲಿದ್ದಾರೆ.

ಈಗಾಗಲೇ ಚತ್ತಿಸ್ ಗಡದ ರಾಜ್ಯದ ರಾಯ್ ಪುರ್, ದುರ್ಗ್, ಬಿಲಾಸ್ ಪುರ್, ಹರಿಯಾಣದ ಪಾಣೆಪುರ್, ಪಂಚ್ ಕುಲ, ಹಿಮಾಚಲ ಪ್ರದೇಶದ ಶಿಮ್ಲಾ, ಸೋಲಾನ್ ಮತ್ತು ಉನಾ, ಜಾರ್ಖಾಂಡ್ ನ ಛಾತ್ತ್ರಾ, ಗಿರಿದೇ, ಪೂರ್ವ ಸಿಂಗ್ ಬೂಮ್, ಹಜಾರಿಬಾಗ್, ಜಾಮ್ ತ್ರಾ ಮತ್ತು ಖುಂಥಿ, ಮಧ್ಯಪ್ರದೇಶದ ಹೋಶಾಂಗಬಾದ್, ಹರ್ದಾ, ಖಾನ್ ಧ್ವಾ ಬುರಾನ್ ಪುರ್, ಮಹಾರಾಷ್ಟ್ರದ ಅಮರಾವತಿ, ಲಾತುರ್, ಪಂಜಾಬ್ ನ ತರಾನ್ ತರಾನ್, ಪಾಟಾನ್ ಕೊಟ್ ಮತ್ತು ಮೊಹಾಲಿ, ರಾಜಾಸ್ಥಾನದ ಪಾಲಿ, ಜುಂನ್ ಜುನು, ಕೋಟ ಜಿಲ್ಲೆಗಳಿಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲು ಆಯಾ ರಾಜ್ಯ ಸರ್ಕಾರಗಳು ಮುಂದೆ ಬಂದಿವೆ.

ಯೋಜನೆಯನ್ನು ಆಳವಡಿಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮೊದಲ ಮತ್ತು ಎರಡನೇ ವರ್ಷಕ್ಕೆ ಶೇ 75, ಮೂರನೇ ವರ್ಷಕ್ಕೆ ಶೇ 50, ಹಾಗೂ ನಾಲ್ಕನೇ ವರ್ಷಕ್ಕೆ ಶೇ 25 ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ನೀಡಲಿದೆ.

Leave a Reply