ಹುತಾತ್ಮ ಫತೇಹ್ ಸಿಂಗ್ (ಚಿತ್ರಕೃಪೆ- ಹಿಂದುಸ್ತಾನ್ ಟೈಮ್ಸ್)
ನಾಲ್ವರು ಉಗ್ರವಾದಿಗಳ ಹತ್ಯೆ ಹಾಗೂ ಇಬ್ಬರು ಭಾರತೀಯ ಸೈನಿಕರ ಪ್ರಾಣತ್ಯಾಗದೊಂದಿಗೆ ಪಂಜಾಬ್ ದಾಳಿಯ ಅಧ್ಯಾಯ ಶನಿವಾರವೇ ಮುಕ್ತಾಯವಾಯಿತೆಂದುಕೊಂಡಿದ್ದು ಸುಳ್ಳಾಗಿದೆ. ಭಾನುವಾರವೂ ಉಗ್ರರನ್ನು ಹತ್ತಿಕ್ಕಲು ಕಾರ್ಯಾಚರಣೆ ನಡೆದಿದೆ. ದಾಳಿಯನ್ನು ಎದುರಿಸುತ್ತ ಹುತಾತ್ಮರಾದ ಭಾರತೀಯ ಸೈನಿಕರ ಸಂಖ್ಯೆ 7ಕ್ಕೆ ಏರಿದೆ ಎಂಬ ನೋವಿನ ಸುದ್ದಿಯೂ ಬಂದಿದೆ.
ಪಠಾನ್ ಕೋಟ್ ದಾಳಿಯಲ್ಲಿ ಹುತಾತ್ಮರಾದ ಯೋಧರ ಪೈಕಿ, 1995ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟಿದ್ದ ಫತೇಹ್ ಸಿಂಗ್ ಸಹ ಒಬ್ಬರು. 15 ದೋಗ್ರಾ ರೆಜಿಮೆಂಟ್ ನಿಂದ ನಿವೃತ್ತರಾದ ನಂತರ ಫತೇಹ್ ಸಿಂಗ್ ಅವರು ‘ಡಿಫೆನ್ಸ್ ಸೆಕ್ಯುರಿಟಿ ಕಾರ್ಪ್ಸ್’ ಸೇರಿದ್ದರು. ವಾಯುನೆಲೆಗೆ ನುಗ್ಗುತ್ತಿದ್ದ ಉಗ್ರರನ್ನು ಎದುರಿಸುತ್ತ ಇವರು ಪ್ರಾಣತ್ಯಾಗ ಮಾಡಿದ್ದಾರೆ. ಶೂಟಿಂಗ್ ನ 300 ಎಮ್ ಬಿಗ್ ಬೋರ್ ನಲ್ಲಿ ವೈಯಕ್ತಿಕ ಮತ್ತು ತಂಡದ ಆಟಗಳೆರಡರಲ್ಲೂ ಪಾಲ್ಗೊಂಡಿದ್ದ ಗುರುದಾಸಪುರದ ಫತೇಹ್ ಸಿಂಗ್ ಬಂಗಾರ ಮತ್ತು ಬೆಳ್ಳಿ ಪದಕಗಳೆರಡನ್ನೂ ಗೆದ್ದಿದ್ದರು.
ಎನ್ ಎಸ್ ಜಿ ಯ ಕರ್ನಲ್ ನಿರಂಜನ್, ಐಎಎಫ್ ನ ಗಾರ್ಡ್ ಕಮಾಂಡರ್ ಗುರುಸೇವಕ್ ಸಿಂಗ್, ಇವರೆಲ್ಲ ದೇಶಕ್ಕಾಗಿ ಪ್ರಾಣ ತೆತ್ತ ಹುತಾತ್ಮರು. ಉಳಿದ ಹುತಾತ್ಮರ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.
nice app