ಬೆಂಗಳೂರಿನ ಚಿತ್ರಸಂತೆ ಮಿಸ್ ಮಾಡಿಕೊಂಡವರೆಲ್ಲ ಇಲ್ಲಿ ಕ್ಲಿಕ್ಕಿಸಿದರೆ ಸಾಕು!

 

ಬೆಂಗಳೂರಿನ ಕುಮಾರಕೃಪ ರಸ್ತೆಗೆ ವರ್ಷಕ್ಕೊಮ್ಮೆ ಸಿಂಗಾರಗೊಳ್ಳುವ ಯೋಗ ಬರುತ್ತದೆ. ಬಣ್ಣ- ಬಣ್ಣಗಳಲ್ಲಿ ಸಿಂಗರಿಸಿಕೊಂಡಿರುವ ಬೀದಿಗೆ ಕಲಾಸಕ್ತರೆಲ್ಲ ಬರುತ್ತಾರೆ. ಕಣ್ಣು ತುಂಬಿಸಿಕೊಳ್ಳಲು ಬರುವವರು ಹಲವರು, ಆ ಬಣ್ಣದ ಲೋಕದ ಚೂರೊಂದು ತಮ್ಮ ಮನೆ ಜಗುಲಿಯ ಚೌಕಟ್ಟಲ್ಲಿ ಕೂರಲಿ ಎಂಬ ಖರೀದಿಯ ಉಮೇದಿನವರು ಕೆಲವರು.

ಚಿತ್ರಕಲಾ ಪರಿಷತ್ ಆಶ್ರಯದಲ್ಲಿ ನಡೆಯುವ ಚಿತ್ರಸಂತೆ ಇದು. ದೇಶದ ಮೂಲೆ ಮೂಲೆಗಳ ಕಲಾವಿದರು ಈ ಬೀದಿಗೆ ಬಣ್ಣ ಹೊದೆಸುತ್ತಾರೆ ತಮ್ಮ ತಮ್ಮ ಪ್ರದೇಶದ ಸಂವೇದನೆಗಳನ್ನು ಕಲಸಿ. ನೂರು ರುಪಾಯಿಗಳಿಂದ ಹಿಡಿದು ಲಕ್ಷ ಲಕ್ಷ ರುಪಾಯಿಗಳವರೆಗಿನ ಕಲಾಕೃತಿಗಳು ಸಂತೆಯಲ್ಲಿ ಕುಳಿತು ಕೇಳುತ್ತವೆ- ನನ್ನ ಕರೆದೊಯ್ಯುವಿರಾ ನಿಮ್ಮ ಮನೆಗಳಿಗೆ ಅಂತ. ಅದೊಂದು ಪುಟ್ಟ ಜಾತ್ರೆ.

ಈ ಭಾನುವಾರ ನೆರವೇರಿದ ಚಿತ್ರಸಂತೆಯ ಬಗ್ಗೆ ಮಾತು ಹೊಸೆದರೇನು ಬಂತು…? ನೀವೇ ನೋಡಿ ಚಿತ್ರಗಳಲ್ಲಿ.

MOH_Jan-03-2016-Chitra Santhe 28MOH_Jan-03-2016-Chitra Santhe 57MOH_Jan-03-2016-Chitra Santhe 48MOH_Jan-03-2016-Chitra Santhe 60MOH_Jan-03-2016-Chitra Santhe 54

Leave a Reply