ಕೇಳೋರಿಲ್ಲದ ಕಾಲಿಯಾಚೌಕ್ ಹಿಂಸಾಚಾರ, ಇಲ್ಲೇಕೆ ಪ್ರಸ್ತಾಪವಾಗುತ್ತಿಲ್ಲ ಅಸಹಿಷ್ಣುತೆ ವಿಚಾರ?

ಡಿಜಿಟಲ್ ಕನ್ನಡ ಟೀಮ್

ಪಶ್ಚಿಮ ಬಂಗಾಳದ ಮಾಡ್ಲಾ ವಲಯದಲ್ಲಿ ದೊಂಬಿ, ಹಿಂಸಾಚಾರ ಅತಿರೇಕಕ್ಕೆ ಹೋಗಿದೆ. ಇದರ ಕಿಡಿ ಹೊತ್ತಿದ್ದು ಡಿಸೆಂಬರ್ ಮಧ್ಯಭಾಗದಲ್ಲೇ. ಪೊಲೀಸ್ ಠಾಣೆ ಧ್ವಂಸ, 25ಕ್ಕೂ ಹೆಚ್ಚು ಪೊಲೀಸರ ಮತ್ತು ಸಾರ್ವಜನಿಕರ ವಾಹನಗಳಿಗೆ ಬೆಂಕಿ, ಸುಮಾರು 15- 20 ಮಂದಿಗೆ ಗಾಯ, ಮುಖ್ಯವಾಗಿ ಆ ಪ್ರಾಂತ್ಯದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದು ಸಮುದಾಯಕ್ಕೆ ಪ್ರತಿಕ್ಷಣವೂ ಜೀವ ಬೆದರಿಕೆ – ಇವು ಸದ್ಯದ ಸ್ಥಿತಿಗತಿ.

ಇಷ್ಟೆಲ್ಲ ಆಗುತ್ತಿದ್ದರೂ ಈ ಬಗ್ಗೆ ವ್ಯಾಪಕ ವರದಿಗಳಾಗುತ್ತಿಲ್ಲ, ಬುದ್ಧಿಜೀವಿಗಳ ‘ಅಸಹಿಷ್ಣುತೆ ಚರ್ಚೆ’ ಪರಿಧಿಗೆ ಈ ಪ್ರತಿಭಟನೆ ದೊಂಬಿಗಳು ಬರುತ್ತಿಲ್ಲ. ಬೀದಿಗಿಳಿದವರು ಮುಸ್ಲಿಂ ಸಮುದಾಯದವರು ಹಾಗೂ ಇದರ ಬಿಸಿ ಅನುಭವಿಸುತ್ತಿರುವವರು ಹಿಂದುಗಳೆಂಬ ಕಾರಣಕ್ಕೆ ಇಂಥ ಮೌನವೇ? ಹಾಗೆಂದು ಟ್ವಿಟರ್ ಸಾಮಾಜಿಕ ಮಾಧ್ಯಮದಲ್ಲಿ ಸೋಮವಾರ ಬಿಸಿ-ಬಿಸಿ ಚರ್ಚೆ ನಡೆಯಿತು. “ಕಾಲಿಯಾಚೌಕ್ ದಾಳಿ” ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಆಯಿತು.

tw3

tw1

ಆಗಿರುವುದೇನು?: ಅಖಿಲ ಭಾರತ ಹಿಂದು ಮಹಾಸಭಾದ ‘ಸ್ವಘೋಷಿತ’ ನಾಯಕ ಕಮಲೇಶ್ ತಿವಾರಿ, ಪ್ರವಾದಿ ಮಹಮದ್ ಅವtw2ರಿಗೆ ಅವಹೇಳನ ಮಾಡಿದ್ದಾರೆ ಅನ್ನೋದು ಬೃಹತ್ ಸಂಖ್ಯೆಯಲ್ಲಿ ಮುಸ್ಲಿಮರು ಪ್ರತಿಭಟನೆ- ದೊಂಬಿಗೆ ತೊಡಗಿಕೊಳ್ಳುವುದಕ್ಕೆ ಕಾರಣ. ತಿವಾರಿ ನಿಂದನಾತ್ಮಕ ಹೇಳಿಕೆ ನೀಡಿದ್ದಾರೆ ಎಂಬುದು ಡಿಸೆಂಬರ್ ಪ್ರಾರಂಭದಲ್ಲೇ ವರದಿಯಾದ ವಿದ್ಯಮಾನ. ತಿವಾರಿಗೆ ಮರಣದಂಡನೆ ಆಗಬೇಕು ಹಾಗೂ ಪ್ರವಾದಿ ಮಹಮದ್ ಪೈಗಂಬರರ ವಿರುದ್ಧ ಮಾತನಾಡುವ ಯಾರಿಗೇ ಆದರೂ ಈ ಶಿಕ್ಷೆ ಆಗಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯ. ಹೀಗೆ ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವಾಗಲೇ ಕ್ಷುಲ್ಲಕ ಕಾರಣಗಳೂ ದೊಡ್ಡದಾಗಿವೆ.

ಪ್ರತಿಭಟನೆ ನಡೆಯುತ್ತಿದ್ದ ಹೆದ್ದಾರಿಯಲ್ಲಿ ಬಂದ ಬಸ್ಸೊಂದು ತಿರುವು ಪಡೆದುಕೊಳ್ಳುವ ವಿಚಾರಕ್ಕೆ ಚಾಲಕನೊಂದಿಗೆ ಪ್ರತಿಭಟನಕಾರರು ಮಾತಿನ ಚಕಮಕಿಗೆ ಇಳಿದರು. ನಂತರ ಸ್ಥಿಮಿತ ಕಳೆದುಕೊಂಡು ಪ್ರಯಾಣಿಕರನ್ನು ಕೆಳಗಿಳಿಸಿ ಬಸ್ಸಿಗೆ ಬೆಂಕಿ ಹಚ್ಚಿದರು. ಸ್ವಲ್ಪ ಸಮಯದ ನಂತರ ಇಲ್ಲಿಗೆ ಬಂದ ಬಿ.ಎಸ್.ಎಫ್ ವಾಹನಕ್ಕೂ ಬೆಂಕಿಹಚ್ಚಿದರು. ಪರಿಸ್ಥಿತಿ ಕೈಮೀರುತ್ತಿದೆ ಎಂಬುದನ್ನು ಅರಿತ ಮಾಲ್ಡಾ ಪೊಲೀಸರು ಪ್ರತಿಭಟನಕಾರರನ್ನು ಚದುರಿಸಲು ಪ್ರಯತ್ನಿಸಿದರು. ಆದರೆ ಇದು ಹಿಂಸಾರೂಪ ಪಡೆದು ಪ್ರತಿಭಟನಕಾರರು ಪೊಲೀಸ್ ಠಾಣೆ ಮತ್ತು ಸಿಬ್ಬಂದಿ ಮನೆಗಳಿಗೂ ಬೆಂಕಿ ಹಚ್ಚಿದರು. ಇಲ್ಲಿನ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಆರಂಭಿಸಿದರು. ಈ ವೇಳೆ ಪ್ರತಿಭಟನಕಾರರು ಸ್ಥಳೀಯರ ಮನೆಗಳಲ್ಲಿ ದರೋಡೆ ಕೂಡ ಶುರುವಿಟ್ಟುಕೊಂಡರು.

ಈ ಪ್ರತಿಭಟನೆ ವಿರೋಧಿಸಲು ಹೋದ ಆರ್.ಎಸ್.ಎಸ್. ಕಾರ್ಯಕರ್ತ ಸೇರಿದಂತೆ ಇಬ್ಬರಿಗೆ ಗುಂಡೇಟು ತಗುಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಮುಸ್ಲಿಂ ಪ್ರಾಬಲ್ಯದ ಪ್ರದೇಶವಾಗಿದ್ದು, ಸುಮಾರು 2.5 ಲಕ್ಷಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮೊದಲು ಕಿಡಿ ಹತ್ತಿಸಿದವರು ಯಾರು?: ಈ ಕುಖ್ಯಾತಿ ಸಲ್ಲಬೇಕಿರುವುದು ಸಮಾಜವಾದಿ ಪಕ್ಷದ ಅಜಂ ಖಾನ್ ರಿಗೆ. ಆರೆಸ್ಸೆಸ್ ನಲ್ಲಿರುವವರು ಮದುವೆ ಆಗುವುದಿಲ್ಲವಾದ್ದರಿಂದ ಸಲಿಂಗಕಾಮದಲ್ಲಿ ತೊಡಗಿರುತ್ತಾರೆ ಅಂತ ಹೇಳಿಕೆ ಕೊಟ್ಟರು. ಇದಕ್ಕೆ ಪ್ರತಿಕ್ರಿಯೆ ಕೊಡುವಾಗ ತಿವಾರಿ ಅದೇ ಆರೋಪವನ್ನು ಧಾರ್ಮಿಕ ವ್ಯಕ್ತಿಯ ಮೇಲೆ ಹೊರೆಸಿದ್ದೇ ಆಕ್ರೋಶ ಭುಗಿಲೇಳುವುದಕ್ಕೆ ಕಾರಣವಾಯಿತು.

ಉತ್ತರ ಪ್ರದೇಶದ ಶಿಯಾ ಪುರೋಹಿತ ಮೌಲಾನಾ ಜವಾದ್ ಅವರು ಪ್ರತಿಕ್ರಿಯಿಸಿದ್ದು ಹೀಗೆ- ‘ಹಿಂದುಗಳು ಮತ್ತು ಮುಸ್ಲಿಮರು ಹೊಡೆದಾಡಿಕೊಂಡು ಮತ ವಿಭಜನೆ ಆಗಲಿ ಎಂಬುದು ಹಿಂದು ಮಹಾಸಭಾ ಹಾಗೂ ಅಜಂ ಇಬ್ಬರ ಉದ್ದೇಶವೂ ಆಗಿದೆ. ಹೀಗಾಗಿ ಇಬ್ಬರಿಗೂ ಶಿಕ್ಷೆಯಾಗಬೇಕು.’

ಅಖಿಲ ಭಾರತ ಹಿಂದು ಮಹಾಸಭಾದ ಸ್ವಯಂ ಘೋಷಿತ ಕಾರ್ಮಿಕ ನಾಯಕನಾಗಿರುವ ಕಮಲೇಶ್ ತಿವಾರಿಯನ್ನು ಕಳೆದ ವರ್ಷ ಡಿಸೆಂಬರ್ 2ರಂದು ಬಂಧಿಸಿ ಲಕ್ನೋ ಜಿಲ್ಲಾ ಕಾರಾಗೃಹದಲ್ಲಿರಿಸಲಾಗಿದೆ.

Leave a Reply