ಬಿಸಿಸಿಐ ‘ರಾಜಕೀಯ’ಕ್ಕೆ ಕಡಿವಾಣ ಹಾಕೋಕೆ ಜಸ್ಟೀಸ್ ಲೋಧಾ ಸಮಿತಿಯ ಜಬರ್ದಸ್ತ್ ಶಿಫಾರಸು

ಡಿಜಿಟಲ್ ಕನ್ನಡ ಟೀಮ್

ಬಿಸಿಸಿ ಐ ನಲ್ಲಿ ಹುದ್ದೆ ಯಾರೆಲ್ಲ ಹೊಂದಬಹುದು, ಅದರ ಅಧಿಕಾರ ಸಂರಚನೆ ಹೇಗಿರಬೇಕು ಎಂಬುದರ ಬಗ್ಗೆ ಜಸ್ಟೀಸ್ ಲೋಧಾ ನೇತೃತ್ವದ ಸಮಿತಿ, ಸುಪ್ರೀಂ ಕೋರ್ಟ್ ಗೆ ಸೋಮವಾರ ತನ್ನ ಶಿಫಾರಸುಗಳನ್ನು ಸಲ್ಲಿಸಿದೆ. ಮುಖ್ಯಾಂಶಗಳು ಹೀಗಿವೆ:

  • ಸಚಿವರಾಗಲಿ, ಸರ್ಕಾರಿ ಸೇವೆಯಲ್ಲಿರುವವರಾಗಲೀ ಕ್ರಿಕೆಟ್ ಬೋರ್ಡ್ ಗೆ ಚುನಾಯಿತರಾಗುವಂತಿಲ್ಲ.
  • ಎಪ್ಪತ್ತು ವರ್ಷ ಮೀರಿದವರಿಗೆ ಆಯ್ಕೆಯಾಗುವ ಅವಕಾಶ ಇರಬಾರದು.
  • ಹುದ್ದೆ ಮೂರು ವರ್ಷಗಳಿಗೆ ಸೀಮಿತವಾಗಿರಬೇಕು. ಮೂರು ಅವಧಿಗಳಿಗಿಂತ ಹೆಚ್ಚು ಸಾರಿ ಹುದ್ದೆ ಹೊಂದುವ ಅವಕಾಶವಿರಬಾರದು. ಅಷ್ಟೇ ಅಲ್ಲ, ಮೂರು ವರ್ಷಗಳ ಅಧಿಕಾರದ ನಂತರ ಒಂದು ವಿರಾಮ ಪಡೆದ ನಂತರವಷ್ಟೇ ಆ ವ್ಯಕ್ತಿ ಮತ್ತೆ ಆಯ್ಕೆಯಾಗಬಹುದು.
  • ಬಿಸಿಸಿಐ ಮತ್ತು ಐಪಿಎಲ್ ಗಳಿಗೆ ಬೇರೆಯದೇ ಆದ ಆಡಳಿತ ಅಂಗಗಳಿರಬೇಕು.
  • ಬಿಸಿಸಿಐ ಸಂಸ್ಥೆಯನ್ನು ಮಾಹಿತಿ ಹಕ್ಕಿನ ಅಡಿ ತರಬೇಕು.

ಹಲವು ಮಾಜಿ ಕ್ರಿಕೆಟರ್ ಗಳು, ಕ್ರಿಕೆಟ್ ಆಡಳಿತ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿರುವವರು ಇವರಿಗೆಲ್ಲ ಪ್ರಶ್ನಾವಳಿಗಳನ್ನು ನೀಡಿ, ಉತ್ತರ ಪಡೆದುಕೊಂಡು ಲೋಧಾ ಸಮಿತಿ ಈ ಶಿಫಾರಸುಗಳನ್ನು ಮಾಡಿದೆ. ಈ ಶಿಫಾರಸುಗಳು ಅನುಷ್ಠಾನಕ್ಕೆ ಬಂದಿದ್ದೇ ಆದಲ್ಲಿ, ಕ್ರಿಕೆಟ್ ಸಂಸ್ಥೆಗಳನ್ನು ತಮ್ಮ ಆಡುಂಬೊಲ ಮಾಡಿಕೊಂಡಿರುವ ಅಧಿಕಾರಸ್ಥ ರಾಜಕಾರಣಿಗಳನ್ನು ತಕ್ಕಮಟ್ಟದಲ್ಲಿ ನಿಯಂತ್ರಣದಲ್ಲಿಡುವುದಕ್ಕೆ ಸಹಕಾರಿಯಾಗಲಿದೆ.

Leave a Reply