ಪಾಕಿಸ್ತಾನಿಗಳಿಗೆ ಭಾರತದ ಮೇಲೇಕೆ ಈ ಪರಿ ದ್ವೇಷ? ಈ ವಿಡಿಯೋದಲ್ಲಿದೆ ದ್ವೇಷ ತುಂಬುವವರ ಪರಿಚಯ

ಗಡಿಯಾಚೆಗಿನ ಉಗ್ರರು ಪಂಜಾಬ್ ನಲ್ಲಿ ದಾಳಿ ನಡೆಸುತ್ತಲೇ ಪಾಕಿಸ್ತಾನದ ಧೋರಣೆಗಳತ್ತ ಭಾರತೀಯರ ಗಮನ ಮತ್ತೆ ಚುರುಕಾಗಿದೆ. ಪಾಕಿಸ್ತಾನದಲ್ಲಿರುವ ಭಾರತ ವಿರೋಧಿ ಮನಸ್ಥಿತಿಗಳು ಹೇಗೆಲ್ಲ ಕೆಲಸ ಮಾಡುತ್ತವೆ ಎಂಬುದನ್ನು ವಿವರಿಸುವ ಹಳೆ ವಿಡಿಯೋಗಳು ಈಗ ಅಂತರ್ಜಾಲದಲ್ಲಿ ಮತ್ತೆ ಸರಿದಾಡುತ್ತಿವೆ.

ಮುಸ್ಲಿಂ ಮೂಲಭೂತವಾದದ ಕುರಿತು ಕಟು ವಿಮರ್ಶೆ ಮಾಡುತ್ತಿರುವವರಲ್ಲಿ ಮುಸ್ಲಿಂ ವಿದ್ವಾಂಸರೇ ಆಗಿರುವ ತರೇಕ್ ಫತಾಹ್ ಒಬ್ಬರು. ಅವರು ತಮ್ಮ ಬ್ಲಾಗ್ ನಲ್ಲಿ ಪ್ರಕಟಿಸಿರುವ ವಿಡಿಯೋ ಒಂದು ಈಗ ಸುದ್ದಿ ಮಾಡುತ್ತಿದೆ.

ಪಾಕಿಸ್ತಾನ ಸೃಷ್ಟಿಯಾಗಿರುವುದೇ ಭಾರತವನ್ನು ಮುಗಿಸೋದಕ್ಕೆ ಹಾಗೂ ಇದಕ್ಕೆ ಪ್ರವಾದಿಯ ಆಶೀರ್ವಾದವಿದೆ ಎಂದು ಸಭೆಯಲ್ಲಿದ್ದವರನ್ನು ಹುರಿದುಂಬಿಸುತ್ತಿರುವ ಮುಲ್ಲಾ ಮಾತುಗಳು ಇಲ್ಲಿವೆ. 2011 ರಲ್ಲಿ ಪಾಕಿಸ್ತಾನದ ಜನರಿಗೆ ನೀಡುತ್ತಿರುವ ಪ್ರವಚನದಲ್ಲಿ ಭಾರತ ಮತ್ತು ಹಿಂದೂ ಧರ್ಮವನ್ನು ನಾಶಮಾಡುವ ಬಗೆಯನ್ನು ಪ್ರಚಾರ ಮಾಡುತ್ತಿರುವ ಈ ವಿಡಿಯೋಗಳಿಗೆ ಮತ್ತೆ ಜೀವ ಬಂದಿದೆ. ಮುಲ್ಲಾ ಮಾತುಗಳು ಹೀಗಿವೆ-

ಭಾರತದ ಮೇಲೆ ಯುದ್ಧಮಾಡುವುದು, ಭಾರತವನ್ನು ನಾಶಮಾಡುವುದು ಪಾಕಿಸ್ತಾನಿಯರಿಗೆ ಅಲ್ಲಾಹು ನೀಡಿರುವ ಅದೃಷ್ಟ. ಮಹ್ಮದ್ ಪೈಗಂಬರರೂ ಈ ಭೂಮಿಯ ಮೇಲೆ ಜೀವಿಸಿದ್ದು ಕಡಿಮೆ ಅವಧಿ. ಈಗ ಇವರ ಸ್ಥಾನವನ್ನು ನಾವು ತುಂಬಬೇಕು. ಭಾರತ ಉಪಖಂಡದಲ್ಲಿ ಪಾಕಿಸ್ತಾನಿಯರೇ ಜೀವಿಸಬೇಕು. ಭಾರತದ ವಿರುದ್ಧ ಯುದ್ಧವನ್ನು “ಘಾಜ್ವಾ ಇ ಹಿಂದ್” ಎಂದು ಕರೆದಿರುವುದು ಏಕೆ ಗೊತ್ತೆ? ಏಕೆಂದರೆ ಈ ಕೆಲಸವನ್ನು ಪ್ರವಾದಿ ಮಹಮದ್ದರೇ ನಿಮಗೆ ವಹಿಸಿದ್ದಾರೆ. ಭಾರತ ಮತ್ತು ಹಿಂದೂ ಧರ್ಮದ ನಾಶ ಪಾಕಿಸ್ತಾನದ ಕೈಯಲ್ಲಿದೆ. ಇದು ಪಾಕಿಸ್ತಾನ ಒಂದಕ್ಕೆ ಮಾತ್ರ ಸಾಧ್ಯವಿದೆ.

Leave a Reply