ಬೆಂಗ್ಳೂರಲ್ಲಿ ಕ್ಯಾಬ್ ಕರೆಸಿಕೊಳ್ಳೋದಂದ್ರೆ ಅಷ್ಟು ಸುಲಭಾನಾ? ಕಣ್ಣನ್ ಗಿಲ್ ವಿಡಿಯೋ ನೋಡಿದ್ರೆ ನಕ್ಕು ಸುಸ್ತಾಗ್ತೀರಿ!

2822

 

ಕಣ್ಣನ್ ಗಿಲ್ ಎಂಬ ಕಾಮಿಡಿ ಪ್ರತಿಭೆ ಬೆಂಗಳೂರಿನದ್ದೇ. ಆದ್ರೆ ಇವರ ಸ್ಟ್ಯಾಂಡ್ ಅಪ್ ಕಾಮೆಡಿ ಪ್ರದರ್ಶನಗಳು ಇಂಗ್ಲಿಷ್- ಹಿಂದಿಯಲ್ಲಿರುತ್ವೆ. ರಾಷ್ಟ್ರೀಯ ಮಟ್ಟದಲ್ಲಿ ಕಾಮಿಡಿ ಪ್ರದರ್ಶನಗಳನ್ನು ಕೊಡುತ್ತಿರುವ ಕಣ್ಣನ್, ಯೂಟ್ಯೂಬ್ ನಲ್ಲಿ ಭಾರೀ ಜನಪ್ರಿಯರು. ಇನ್ನೊಬ್ಬ ಕಾಮಿಡಿ ಚತುರ ಬಿಸ್ವಾಸ್ ಕಲ್ಯಾಣ್ ರಥ್ ಅವರೊಂದಿಗೆ ಸೇರಿಕೊಂಡು ಸೃಷ್ಟಿಸಿರುವ ‘ಪ್ರಿಟೆನ್ಶಿಯಸ್ ಮೂವಿ ರಿವ್ಯೂ’ ಯೂಟ್ಯೂಬ್ ನಲ್ಲಿ ಮನರಂಜನೆ ಹುಡುಕುವವರ ಅಚ್ಚುಮೆಚ್ಚು ಸರಣಿ.

ಇಂಥ ಕಣ್ಣನ್ ರವರ ಇತ್ತೀಚಿನ ವಿಡಿಯೋ ಬೆಂಗಳೂರಲ್ಲಿ ಕ್ಯಾಬ್ ಬುಕ್ ಮಾಡೋಕೆ ಪಡಬೇಕಾದ ಪಡಿಪಾಟಲಿನ ಕುರಿತಾದದ್ದು. ಚಾಲಕನೇ ಗ್ರಾಹಕನನ್ನು ಆಡಿಸುವ ಪರಿಯನ್ನು ಆಸ್ವಾದಿಸುವುದಕ್ಕೆ ಖಂಡಿತ ನಿಮಗೆ ಭಾಷೆ ಅಡ್ಡಿಯಾಗೋದೇ ಇಲ್ಲ. ಐದು ನಿಮಿಷ ಇದಕ್ಕೆ ಧಾರಾಳ ವ್ಯಯಿಸಬಹುದು. ನಗು ಬೋನಸ್.

Leave a Reply