
ಡಿಜಿಟಲ್ ಕನ್ನಡ ಟೀಮ್
ಗಮನಿಸಿ ಬೇಕಾದ್ರೆ, ಇಸ್ರೇಲ್- ಪ್ಯಾಲಸ್ತೀನ್ ಗಡಿಯಲ್ಲಿ ಏನೇ ಆದ್ರೂ ಭಾರತದಲ್ಲಿ, ಕರ್ನಾಟಕದಲ್ಲಿ ಸುದ್ದಿ- ಚರ್ಚೆಗಳು ಸಣ್ಣಮಟ್ಟಿಗಾದ್ರೂ ಆಗುತ್ತವೆ. ಕಾರಣವೇನೆಂದರೆ ನಮ್ಮ ಬುದ್ಧಿಜೀವಿಗಳು. ಇಸ್ರೇಲ್ ವಿರುದ್ಧ ಭಾರತ ಬಾಂಧವ್ಯ ಕಡಿದುಕೊಳ್ಳಬೇಕು ಅಂತ ಯಾರಾದರೂ ಹೇಳಿಕೆ ಕೊಟ್ಟಿರುತ್ತಾರೆ. ಪ್ಯಾಲಸ್ತೀನ್ ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗ್ತಿದೆ ಅಂತ ಇಲ್ಲಿ ನಾಲ್ಕು ಮಂದಿ ಸೇರಿ ಪ್ರತಿಭಟನೆ- ಪತ್ರಿಕಾ ಹೇಳಿಕೆಗಳನ್ನೆಲ್ಲ ಕೊಟ್ಟ ಉದಾಹರಣೆಗಳಿವೆ.
ಆದರೆ…
ವಾರದ ಹಿಂದೆ ಸೌದಿ ಅರೇಬಿಯಾ ಒಂದೇ ದಿನದಲ್ಲಿ 47 ಜನರನ್ನು ಭಯೋತ್ಪಾದಕರು ಎಂದು ವಿಂಗಡಿಸಿ ಮರಣದಂಡನೆ ವಿಧಿಸಿದೆ. ಹಲವರ ರುಂಡ ಬೇರ್ಪಡಿಸಿ ಕೊಂದರೆ ಹಲವರನ್ನು ಗುಂಡಿಟ್ಟು ಕೊಲ್ಲಲಾಗಿದೆ.
ಈ ಬಗ್ಗೆ ಯಾರಾದರೂ ಬುದ್ಧಿಜೀವಿ ಮಾತಾಡಿದ್ದು ತಮ್ಮ ಗಮನಕ್ಕೇನಾದ್ರೂ ಬಂತೇ? ಭಾರತದಲ್ಲಿ ದಶಕಗಳ ಕಾಲ ವಿಚಾರಣೆ ನಂತರವೂ ಯಾರನ್ನಾದರೂ ನೇಣಿಗೆ ಹಾಕಲು ಹೋದರೆ ಅಲ್ಲಿ ಮಾನವೀಯತೆ, ಮಾನವ ಹಕ್ಕುಗಳ ಚರ್ಚೆ ಆಗಲೇಬೇಕು. ಯುರೋಪು ತನ್ನೊಳಗೆ ನಿರಾಶ್ರಿತರನ್ನೆಲ್ಲ ಬಿಟ್ಟುಕೊಳ್ಳಬೇಕು ಅಂತ ಇಲ್ಲಿ ನಿಂತು ಆಗ್ರಹಿಸಿ ಬುದ್ಧಿಜೀವಿತನ ಮೆರೆವವರೂ ಎಷ್ಟು ಮಂದಿಯಿಲ್ಲ?
ಆದರೆ ಸೌದಿ ಬಗ್ಗೆ ಮಾತ್ರ ಅಮೆರಿಕವೂ ಸೇರಿದಂತೆ ಯಾವ ‘ಪ್ರಜಾಪ್ರಭುತ್ವವಾದಿಗಳದ್ದೂ’ ಸೊಲ್ಲಿಲ್ಲ. ಅಲ್ಲಿನ ಕ್ರೌರ್ಯಗಳ ಬಗ್ಗೆ ಮಾತನಾಡಿದರೆ ಪವಿತ್ರ ಜಾಗದ ವಿರುದ್ಧ ದನಿ ಎತ್ತಿದಂತಾಗಿ ಧರ್ಮನಿಂದೆಯಾಗಿಬಿಡುವುದೆಂಬ ಭಯವೇ?
ಸತ್ತವರಲ್ಲಿ ಸೌದಿ ಆಡಳಿತದ ವಿರುದ್ದ ಸೋಲ್ಲೆತ್ತಿದ್ದ ಶಿಯಾ ಸಮಾಜದ ನಾಯಕ ನಿಮ್ರ್ ಅಲ್ ನಿಮ್ರ್ ಪ್ರಮುಖ. ಒಬ್ಬ ಈಜಿಪ್ಟ್ , ಮತ್ತೊಬ್ಬ ಚಾಡ್ ದೇಶದವನು. ಉಳಿದವರೆಲ್ಲ ಸೌದಿಯವರೇ.
ವಾಸ್ತವ ಏನೆಂದರೆ, ಜಗತ್ತಿನೆಲ್ಲೆಡೆ ಪ್ರಜಾಪ್ರಭುತ್ವ ಸ್ಥಾಪಿಸುವ ಅಮೆರಿಕದ ಸಹಾಯದಿಂದ ಇವತ್ತಿನವರೆಗೂ ಸೌದಿಯನ್ನು ಆಳುತ್ತಿರುವವರು ಏಕಚಕ್ರಾಧಿಪತ್ಯದ ದೊರೆ ಮನೆತನದವರು. ಮರಣದಂಡನೆಗೆ ಒಳಗಾದವರಿಗೆ ಸಹ ಆ ಗತಿ ಬರಲಿಕ್ಕೆ ಅವರು ಪ್ರಭುತ್ವವನ್ನು ಪ್ರಶ್ನಿಸುತ್ತಿದ್ದರು ಎಂಬುದೇ ಪ್ರಮುಖ ಕಾರಣ. ಛಡಿ ಏಟು, ಕೈ ಕತ್ತರಿಸೋದು, ಬೇರೆ ದೇಶಗಳಿಂದ ಬಂದ ಕೆಳಹಂತದ ಕೆಲಸಗಾರರನ್ನು ಗುಲಾಮರಂತೆ ನೋಡಿಕೊಳ್ಳೋದು ಇವೆಲ್ಲದರಲ್ಲೂ ಸೌದಿ ಮುಂಚೂಣಿಯಲ್ಲಿದೆ.
ಹಿಂದಿನ ವರ್ಷ ಸೆಪ್ಟೆಂಬರ್ ನಲ್ಲಿ ಭಾರತೀಯ ಕೆಲಸದಾಕೆ ಜಯಲಲಿತಾ ಎಂಬುವವಳ ಕೈಯನ್ನೇ ಕತ್ತರಿಸಿ ಹಾಕಿದ್ದ ಸೌದಿ ಉದ್ಯೋಗದಾತ!
ಆದರೆ, ಸಿರಿಯಾದಲ್ಲಿ ಆಡಳಿತ ಬದಲಾಗಬೇಕೆಂದು ಹಸ್ತಕ್ಷೇಪ ಮಾಡುವವರಿಗೆ ಸೌದಿಯ ನಿರಂಕುಶ ಪ್ರಭುತ್ವ ಲೆಕ್ಕಕ್ಕೆ ಸಿಗೋಲ್ಲ! ವ್ಯಂಗ್ಯವೆಂದರೆ ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಯೊಂದಕ್ಕೆ ಸೌದಿ ಅರೇಬಿಯಾ ನೇತೃತ್ವವನ್ನೂ ವಹಿಸಿದೆ!
ಸೌದಿ ವಿರುದ್ಧ ಧ್ವನಿ ಎತ್ತಿರುವ ಒಂದೇ ರಾಷ್ಟ್ರ ಇರಾನ್. ಶಿಯಾ ಧರ್ಮಗುರುವನ್ನು ಕೊಂದಿದ್ದಕ್ಕೆ ಇರಾನ್ ಗೆ ಎಲ್ಲಿಲ್ಲದ ಆಕ್ರೋಶ. ಈ ಇರಾನ್ ನಲ್ಲೂ ಮಾನವ ಹಕ್ಕುಗಳು ಪಾಲನೆಯಾಗುತ್ತಿರುವುದು ಅಷ್ಟರಲ್ಲೇ ಇದೆ. ಆದರೆ ಅಮೆರಿಕಕ್ಕೆ ಎದುರಾಡುವ ತಾಕತ್ತು, ಭಾರತದೊಂದಿಗಿನ ಸ್ನೇಹ, ಪ್ರಜಾಪ್ರಭುತ್ವ ಈ ಎಲ್ಲ ಅಂಶಗಳಲ್ಲಿ ಇರಾನ್ ಭಿನ್ನ.
ಸೌದಿ ಅರೇಬಿಯಾ ವಿಷಯದಲ್ಲಿ ಅಮೆರಿಕ ಮತ್ತು ಅಮೆರಿಕವನ್ನು ಬಯ್ದುಕೊಂಡಿರುವ ಬುದ್ಧಿಜೀವಿಗಳು ಒಂದೇ ಜಾಗದಲ್ಲಿ ನಿಂತಿರೋದು ಕೌತುಕದ ಸಂಗತಿ.
ee article baredavanu saudiyannu kevala nammorina dinapatrike moolaka thilidahavanagiddane endu anisutte.desha virodhi chatuvatike nadesidavarannu mathu bayothpadakarannu alli galligerisiddaare.adu ella deshagalallu nadeyuthe.. saudiyalli narankusha aadalithaviddare allenu nammad deshadashtu brastachara illa.bere deshdavarannu gulmaranthe dudisuthare endu helidderi..aadre saudiyalli eshtu mandi uthama vethana atahva ollya business maduva bhratiyariddare.kaelavu kroorigalau maduva kelsagalige idee deshvannu dooruvudu sari alla..ee reethi kelavondu soshanegalu namma deshdalloo ide.naanu kooda saudiyalle work maduthene..
Please watch this and write something worth t hear..
http://www.aljazeera.com/programmes/listeningpost/2016/01/saudi-arabia-iran-sunni-shia-narrative-160109103036343.html
superstar daim
“Getty Images4Partey (left) takes on Tottenham in pre-seasonA trusted member of Diego Simeone’s squad last season, he has played just 242 minutes this?term.