ಪಠಾಣ್ ಕೋಟ್ ದಾಳಿ: ಭಾರತದ ಸೇನಾ ಮುಖ್ಯಸ್ಥರು ಏನಂದ್ರು?

 

ಪಠಾಣ್ ಕೋಟ್ ದಾಳಿ ಸಂಬಂಧ ಮಾಧ್ಯಮ, ರಾಜಕಾರಣಿಗಳು, ವಿಶ್ಲೇಷಕರು ಎಲ್ಲರೂ ಅವರವರ ಅಭಿಪ್ರಾಯ ವ್ಯಕ್ತಪಡಿಸಿಕೊಂಡೇ ಬಂದಿದ್ದಾರೆ. ಈ ವಿಷಯವಾಗಿ ಸೇನಾ ಮುಖ್ಯಸ್ಥರ ಪ್ರತಿಕ್ರಿಯೆಯನ್ನು ಕೇಳಿಸಿಕೊಳ್ಳುವ ಅವಕಾಶವು ಬುಧವಾರದ ಕಾರ್ಯಕ್ರಮವೊಂದರಲ್ಲಿ ಮಾಧ್ಯಮಗಳಿಗೆ ಪ್ರಾಪ್ತವಾಯಿತು.

ಪಠಾಣ್ ಕೋಟ್ ದಾಳಿ ಮಾಡಿದವರಿಗೆ ಅದೇ ಬಗೆಯ ನೋವು ನೀಡಲಿದ್ದೇವೆ, ಆದರೆ ಸಮಯ- ಸಂದರ್ಭ ನಾವೇ ನಿರ್ಧರಿಸುತ್ತೇವೆ ಎಂದು ರಕ್ಷಣಾ ಸಚಿವ ಮನೋಹರ ಪರ್ರಿಕರ್ ಹೇಳಿರುವ ಬಗ್ಗೆ ಗಮನಕ್ಕೆ ತಂದಾಗ, ‘ಯಾವುದೇ ಕಾರ್ಯಾಚರಣೆ ವಹಿಸಿದರೂ ಸೇನೆ ಅದನ್ನು ನಿರ್ವಹಿಸುವಷ್ಟು ಶಕ್ತವಾಗಿದೆ’ ಅಂತ ಚುಟುಕಾಗಿ ಉತ್ತರಿಸಿದರು ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್.

ಪಠಾಣ್ ಕೋಟ್ ಕಾರ್ಯಾಚರಣೆಯಲ್ಲಿ ಎನ್ ಎಸ್ ಜಿ, ಸ್ಥಳೀಯ ಪೋಲೀಸ್ ಹಾಗೂ ಸೇನೆ ನಡುವೆ ಸಮನ್ವಯದ ಕೊರತೆ ಇತ್ತು ಎಂಬ ಅಭಿಪ್ರಾಯ- ವದಂತಿಗಳನ್ನು ಮಾತ್ರ ಅವರು ಖಡಾಖಂಡಿತವಾಗಿ ನಿರಾಕರಿಸಿದರು. ಸಾವು-ನೋವನ್ನು ತಗ್ಗಿಸುವುದಕ್ಕೆ ಅತ್ಯಂತ ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿದ್ದರಿಂದ ದೀರ್ಘ ಸಮಯ ಬೇಕಾಯಿತಷ್ಟೆ ಎಂಬುದು ಅವರ ಸಮಜಾಯಿಷಿ.

‘ಗುಪ್ತಚರ ಮಾಹಿತಿಗಳ ಹೊರತಾಗಿಯೂ ವಾಯುನೆಲೆಯೊಳಗೆ ಉಗ್ರರು ಹೊಕ್ಕುವುದಕ್ಕೆ ಸಾಧ್ಯವಾಗಿದ್ದು ಹೇಗೆ ಎಂಬ ಬಗ್ಗೆ ರಾಷ್ಟ್ರೀಯ ತನಿಖಾ ದಳ ತನಿಖೆ ನಡೆಸುತ್ತಿದೆ. ಇಲ್ಲಿ ಕಲಿಯಬೇಕಾದ ಪಾಠಗಳನ್ನು ಕಲಿತಿದ್ದೇವೆ’ ಎಂದಿದ್ದಾರೆ ಸೇನಾ ಮುಖ್ಯಸ್ಥರು.

Leave a Reply