ಸಾನಿಯಾ- ಹಿಂಗಿಸ್ ಸತತ ಜಯದ ದಾಖಲೆ

 

ವಿಶ್ವದ ಅಗ್ರ ಶ್ರೇಯಾಂಕಿತ ಮಹಿಳಾ ಟೆನಿಸ್ ಆಟಗಾರ್ತಿಯರಾದ ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ರ ಜೋಡಿ ಸತತ 29 ಪಂದ್ಯಗಳನ್ನು ಗೆದ್ದು 21 ವರ್ಷಗಳ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಸಿಡ್ನಿ ಅಂತರಾಷ್ಟೀಯ ಟೆನ್ನಿಸ್ ಪಂದ್ಯಾವಳಿಯ ಎಂಟರ ಘಟ್ಟದ ಪಂದ್ಯದಲ್ಲಿ ಜಯಿಸುವ ಮೂಲಕ ಗುರುವಾರ ಈ ಸಾಧನೆ ಮಾಡಿದ ಮೊದಲ ಮಹಿಳಾ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 1994 ರಲ್ಲಿ ಗಿಗೀ ಫರ್ನಾಂಡೇಜ್ ಮತ್ತು ನತಾಷ ಝ್ವೇರೆವಾ ಜೋಡಿ ಸತತ 28 ಪಂದ್ಯಗಳನ್ನು ಗೆದ್ದು ದಾಖಲೆ ಮಾಡಿದ್ದರು. ಗುರುವಾರ ನಡೆದ ಪಂದ್ಯದಲ್ಲಿ ರಲುಕಾ ಓಲಾರು ಮತ್ತು ಯರೋಸ್ಲವಾ ಸ್ವೇಡೊವ ಜೋಡಿಯನ್ನು 4-6, 6-3, 10-8 ಸೆಟ್ ಗಳ ಅಂತರದಿಂದ ಸೋಲಿಸಿ ಅಂತಿಮ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.

 

Leave a Reply