ಸುದ್ದಿಸಂತೆ: ಕ್ರಿಕೆಟ್ ನಲ್ಲಿ ಸೋಲು, ಟೆನಿಸ್ ನಲ್ಲಿ ಗೆಲುವು, ಸುನಂದಾ ಸಾವಿನ ವರದಿ…. ಎನಿವೇ ಹ್ಯಾಪಿ ಸಂಕ್ರಾಂತಿ!

People celebrating Sankranthi and Pongal festival in Bengaluru on Friday.

 

ರೋಹಿತ್ ಶತಕದ ಅಭಿಯಾನ, ಕೊಡ್ತಿಲ್ವಲ್ಲ ಆಸ್ಟ್ರೇಲಿಯ ವಿರುದ್ಧ ಜಯಾನಾ?!

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 5 ಏಕ ದಿನ ಪಂದ್ಯಗಳ ಸರಣಿಯ ಎರಡನೇ ಪಂದ್ಯವನ್ನೂ ಭಾರತ ಶುಕ್ರವಾರ ಸೋತಿದೆ. ಬ್ರಿಸ್ ಬೇನ್ ನಲ್ಲಿ ನಡೆದ ಆತಿಥೇಯ ತಂಡ ಆಸ್ಟ್ರೇಲಿಯ ಪ್ರವಾಸಿ ಭಾರತದ ವಿರುದ್ಧ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ ಟೂರ್ನಿಯ ಮೇಲೆ 2-0 ಅಂತರದ ಹಿಡಿತ ಸಾಧಿಸಿದೆ.

ಭಾರತದ ಪರ ರೋಹಿತ್ ಶರ್ಮಾ ಕಳೆದೆರಡು ಪಂದ್ಯಗಳಿಂದ ಸತತವಾಗಿ ಅತ್ಯುತ್ತಮ ಪ್ರದರ್ಶನ ನೀಡಿ ಶತಕಗಳನ್ನು ಸಿಡಿಸಿದರೂ ಆಸಿಸ್ ನೆಲದಲ್ಲಿ ಗೆಲುವೆಂಬುದು ಮರೀಚಿಕೆಯಾಗಿ ಉಳಿದಿದೆ. ಈ ಪಂದ್ಯದಲ್ಲೂ ರೋಹಿತ್ 124 ರನ್ ಗಳನ್ನು ಸಿಡಿಸಿದ್ದರು.

8 ವಿಕೆಟ್ ಕಳೆದುಕೊಂಡು ಭಾರತ ನೀಡಿದ್ದ 309 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಆಸಿಸ್ ತಂಡ ಇನ್ನೂ ಆರು ಎಸೆತಗಳು ಬಾಕಿ ಇರುವಂತೆಯೆ 3 ವಿಕೆಟ್ ನಷ್ಟಕ್ಕೆ 309 ರನ್ ದಾಖಲಿಸಿ ಟೂರ್ನಿಯಲ್ಲಿ ಸತತ ಎರಡನೇ ಜಯ ಪಡೆದುಕೊಂಡಿತು. ಆಸಿಸ್ ಪರ ಪಿಂಚ್ (71), ಸ್ಮಿತ್ (71), ಬೇಯ್ಲಿ (76) ರವರುಗಳ ಅರ್ಧ ಶತಕಗಳ ಆಟ ಗೆಲುವಿಗೆ ಕಾರಣವಾಯಿತು.

ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಶಿಖರ್ ಧವನ್ ರ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಆನುಭವಿಸಿದರೂ ರೋಹಿತ್ ಶರ್ಮಾ (124) ರ ಶತಕದಾಟ, ವಿರಾಟ್ ಕೊಹ್ಲಿ (59) ಮತ್ತು ಅಜೀಂಕ್ಯಾ ರಹಾನೆ (89) ಯವರ ಪ್ರದರ್ಶನ 300 ರ ಗಡಿ ದಾಟುವಂತೆ ಮಾಡಿತು. ಆದರೆ ಇದೇ ರೀತಿಯ ಪ್ರದರ್ಶನ ಬೌಲರ್ ಗಳ ಕಡೆಯಿಂದ ಬಾರದೇ ಇದ್ದಾಗ ಗುರಿ ಮಟ್ಟುವುದು ಆಸಿಸ್ಗೆ ಸುಲಭವಾಯಿತು. ಭಾರತದ ಪರ ಉಮೇಶ್ ಯಾದವ್ ನಿಗದಿತ ಓವರ್ ಗಳನ್ನು ಪೂರೈಸಿ 1 ವಿಕೆಟ್ ಗೆ 74 ರನ್ ನೀಡಿ ದುಬಾರಿ ಬೌಲರ್ ಎನ್ನಿಸಿಕೊಂಡರು.

 

ಶಬರಿಮಲೈ ವಿದ್ಯಮಾನ: ವಕೀಲರಿಗೆ ಬೆದರಿಕೆ

ಕೇರಳದ ಪ್ರಸಿದ್ಧ ಶಬರಿಮಲೆ ದೇವಾಲಯದಲ್ಲಿ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಮೇಟ್ಟಿಲೇರಿದ್ದ ವಕೀಲಲರಿಗೆ ವಿದೇಶದಿಂದ 500 ಕ್ಕೂ ಹೆಚ್ಚೂ ಬೆದರಿಕೆ ಕರೆಗಳು ಬಂದಿವೆ. ಹೀಗೆಂದು ನ್ಯಾಯವಾದಿ ಕೋರ್ಟ್ ಗೆ ತಿಳಿಸಿದ್ದಾರೆ.

ಭಾರತೀಯ ಯವ ವಕೀಲರ ಸಂಘ (ಐವೈಎಲ್ಎ) ದ ವಕೀಲರ ಗುಂಪೊಂದು 10 ರಿಂದ 55 ವರ್ಷ ವಯೋಮಾನದ ಮಹಿಳೆಯರಿಗೂ ದೇಗುಲ ಪ್ರವೇಶಕ್ಕೆ ಅವಕಾಶ ಕೋರಿ ದೇವಸ್ತಾನ ಆಡಳಿತ ಮಂಡಳಿಯ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಕೆಲವು ದಿನಗಳ ಹಿಂದೆ ಅರ್ಜಿ ದಾಖಲಿಸಿದ್ದರು. ಇದರ ನೇತೃತ್ವ ವಹಿಸಿದ್ದ ವಕೀಲ ನೌಶಾದ್ ಅಹ್ಮದ್ ಖಾನ್ ಗೆ ಬೆದರಿಕೆ ಕರೆಗಳು ಬರುತ್ತಿವೆ. ಇವುಗಳಲ್ಲಿ ಬಹುತೇಕ ಕರೆಗಳು ಅಮೆರಿಕದಿಂದ ಬಂದಿದ್ದು ತಮ್ಮ ಮನೆಯನ್ನು ಸ್ಫೋಟಿಸುವುದಾಗಿ ಬೆದರಿಸಿ, ಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯನ್ನು ಹಿಂಪಡೆಯುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಿದ್ದಾರೆ. ಖಾನ್ ಅವರಿಗೆ ಯಾವ ರಿತೀಯ ಭದ್ರತೆ ಒದಗಿಸಬೇಕು ಎಂಬುದನ್ನು ಸೋಮವಾರ ತಿಳಿಸಲಾಗುವುದು ಎಂದು ಕೋರ್ಟ್ ಹೇಳಿದೆ.

ವಿಷಪ್ರಾಶನದಿಂದಲೇ ಪುಷ್ಕರ್ ಸಾವು

ಸುನಂದಾ ಪುಷ್ಕರ್ ರವರ ನಿಗೂಡ ಸಾವಿನ ವೈದ್ಯಕೀಯ ವರದಿ ಬಹಿರಂಗವಾಗಿದ್ದು ವಿಷಪ್ರಾಶನದಿಂದಲೇ ಸಾವು ಸಂಭವಿಸಿರುವುದಾಗಿ ವೈದಕೀಯ ವರದಿ ದೃಢಪಡಿಸಿದೆ. ಏಮ್ಸ್ ವೈದ್ಯರು ದೆಹಲಿ ಪೊಲೀಸರಿಗೆ ಸಲ್ಲಿಸಿರುವ ವರದಿಯ ಆಧರಿಸಿ ಪೊಲೀಸ್ ಆಯುಕ್ತ ಬಿ.ಎಸ್.ಬಸ್ಸಿ, ಪುಷ್ಕರ್ ಅವರ ಸಾವು ಅಸ್ವಾಭಾವಿಕ ಎಂದು ಶುಕ್ರವಾರ ಖಚಿತ ಪಡಿಸಿದ್ದಾರೆ. ಪುಷ್ಕರ್ ಅವರು ಕಾಂಗ್ರೆಸ್ ಸಂಸದ ಶಶಿತರೂರ್ ಅವರ ಪತ್ನಿಯಾಗಿದ್ದರು.

ಸಾನಿಯಾ- ಹಿಂಗಿಸ್ ಜಯ

ವಿಶ್ವ ಶ್ರೇಯಾಂಕಿತ ಟೆನಿಸ್ ಆಟಗಾರ್ತಿಯರಾದ ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿ ಆಸ್ಟ್ರೇಲಿಯಾದಲ್ಲಿ ಶುಕ್ರವಾರ ಮುಕ್ತಾಯವಾದ ಸಿಡ್ನಿ ಅಂತರಾಷ್ಟ್ರೀಯ ಡಬ್ಲೂಟಿಎ ಟೆನಿಸ್ ಪಂದ್ಯಾವಳಿಯ ಫೈನಲ್ ನಲ್ಲಿ ಜಯಿಸಿದ್ದಾರೆ. ಈ ಮೂಲಕ ಈ ಜೋಡಿ ಯಶಸ್ವಿ 11 ನೇ ಟ್ರೋಫಿಯನ್ನು ಗೆದ್ದುಕೊಂಡಂತಾಗಿದೆ.

ಕ್ರೀಸ್ಟಿನಾ ಮ್ಲಾಡೆನೋವಿಕ್ ಮತ್ತು ಕ್ಯಾರೋಲೈನ್ ಗಾರ್ಸಿಯಾ ಜೋಡಿಯ ವಿರುದ್ಧ  1-6,  7-5, 10-5 ಸೆಟ್ ಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಇದು ವಿಶ್ವ ಶ್ರೇಯಾಂಕಿತ ಜೋಡಿಯ ಸತತ 30 ನೇ ಜಯವಾಗಿದೆ.

 

ಸಂಕ್ರಾಂತಿ ಪ್ರಯುಕ್ತ ಕರ್ನಾಟಕ ರಕ್ಷಣಾ ವೇದಿಕೆಯು ಮಕ್ಕಳಿಗಾಗಿ ಚಿತ್ರರಚನೆ ಸ್ಪರ್ಧೆಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿತ್ತು.
ಸಂಕ್ರಾಂತಿ ಪ್ರಯುಕ್ತ ಕರ್ನಾಟಕ ರಕ್ಷಣಾ ವೇದಿಕೆಯು ಮಕ್ಕಳಿಗಾಗಿ ಚಿತ್ರರಚನೆ ಸ್ಪರ್ಧೆಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿತ್ತು.

Leave a Reply