ತಿಳ್ಕೋಳಿ ಹುಡುಗ್ರಾ… ಪೋರ್ನ್ ಚಿತ್ರದಲ್ಲಿ ಮಾಡೋದ್ನೆಲ್ಲ ನಿಜ ಜೀವನದಲ್ಲಿ ಮಾಡಕಾಗಲ್ಲ ಅಂದಿರೋದು ಸನ್ನಿ ಲಿಯೋನ್ !

ಡಿಜಿಟಲ್ ಕನ್ನಡ ಟೀಮ್

ಬಿಡಿ. ಇದು ಇಂಟರ್ನೆಟ್ ಯುಗ. ಹೀಗಾಗಿ ಲೈಂಗಿಕ ಚಿತ್ರಗಳ ಬಗ್ಗೆ ಮಾತನಾಡುವುದಕ್ಕೆ ಮಡಿವಂತಿಕೆ ಅರ್ಥಹೀನ. ಹಾಗಂತ ಇದನ್ನೇ ಬಂಡವಾಳ ಮಾಡಿಕೊಂಡು ಎಲ್ಲವನ್ನೂ ರೋಚಕಗೊಳಿಸಿ ಲಾಭ ಪಡೆಯುವುದು ಈ ಬರಹದ ಉದ್ದೇಶ ಅಲ್ಲ.

ಲೈಂಗಿಕತೆಯ ಹಸಿ-ಬಿಸಿಗಳ ರೋಚಕ ಮಸಾಲೆಗಳನ್ನು ಹೊದ್ದಿರುವ ಮಸ್ತಿಜಾದೆ ಎಂಬ ಚಿತ್ರ ತೆರೆಗೆ ಬರುತ್ತಿರುವ ಸಂದರ್ಭವನ್ನೇ ಮುಂದುಮಾಡಿಕೊಂಡು ಹಲವು ರಾಷ್ಟ್ರೀಯ ವಾಹಿನಿಗಳು, ಆ ಚಿತ್ರದ ಮುಖ್ಯ ಭೂಮಿಕೆಯಲ್ಲಿರುವ ಸನ್ನಿ ಲಿಯೋನ್ ಳ ಸಂದರ್ಶನ ಬಿತ್ತರಿಸಿದ್ದಾರೆ. ಆ ಚಿತ್ರದ ಪ್ರಚಾರಕ್ಕೆ ಆಡಿರುವ ಮಾತುಗಳು, ಬಾಲಿವುಡ್ ನಲ್ಲಿ ಸ್ವೀಕೃತಿಯ ಭಾವ ಸಿಗುವುದಕ್ಕೆ ತಾನು ನಡೆಸಿದ ಹೋರಾಟ ಇವೆಲ್ಲದರ ಬಗ್ಗೆ ಮಾಜಿ ನೀಲಿ ಚಿತ್ರತಾರೆ ಸನ್ನಿ ಮಾತಾಡಿದ್ದಾರೆ.

ಆದ್ರೆ ಅವುಗಳಲ್ಲಿ ಎತ್ತಿಟ್ಟುಕೊಳ್ಳಬೇಕಾದ ಅಂಶ ಎಂದರೆ, ಎನ್ ಡಿ ಟಿವಿಯ ವಾಕ್ ದಿ ಟಾಕ್ ಕಾರ್ಯಕ್ರಮದಲ್ಲಿ ಆಕೆಗೆದುರಾದ ಪ್ರಶ್ನೆ ಮತ್ತು ಬಂದ ಉತ್ತರ. ‘ನೀಲಿ ಚಿತ್ರಗಳಲ್ಲಿ ಕೆಲಸ ಮಾಡಿದ್ದೀರಲ್ಲ, ಅವನ್ನು ಅನುಭವವನ್ನಾಗಿ ಸ್ವೀಕರಿಸುತ್ತೀರೋ ಅಥವಾ ಒಂದು ಕೆಲಸವೋ’ ಅಂತ ಪತ್ರಕರ್ತ ಶೇಖರ್ ಗುಪ್ತ ಕೇಳಿದ್ದಕ್ಕೆ ಸನ್ನಿ ಹೇಳಿದ್ದು-  ‘ಅದರಲ್ಲಿ ಬಹುತೇಕ ಯಾಂತ್ರಿಕ ಕ್ರಿಯೆ ಅಷ್ಟೆ. ಅದೊಂದು ಫ್ಯಾಂಟಸಿ ಕಟ್ಟಿಕೊಡುವ ಸಾಮ್ರಾಜ್ಯ. ಅಲ್ಲಿ ತೋರಿಸಿದ್ದೆಲ್ಲ ನಿಜ ಬದುಕಿನಲ್ಲಿ ಆಗುವಂಥದ್ದಲ್ಲ. ನೀಲಿಚಿತ್ರ ನಟಿಯಾಗುವಾಗ ಅದು ಶೀಲವೋ- ಅಶ್ಲೀಲವೋ ಅಂತೆಲ್ಲ ಯೋಚಿಸಿರಲೂ ಇಲ್ಲ. ಹದಿಹರೆಯದಲ್ಲಿದ್ದ ನನಗೆ ಅದೊಂದು ಥ್ರಿಲ್ ಕೊಡುವ ಕೆಲಸವಾಗಿ ಕಂಡಿತ್ತಷ್ಟೇ’ ಎಂದಿದ್ದಾರೆ.

ಇದರಿಂದ ಯುವ ಸಮೂಹ ಸ್ವೀಕರಿಸಬೇಕಿರುವ ಗಂಭೀರ ಪಾಠ ಎಂದರೆ- ಪೋರ್ನ್ ನೋಡುವ, ನೋಡದೇ ಇರುವ ಚರ್ಚೆಗಳೆಲ್ಲ ಹಾಗಿರಲಿ. ಆದರೆ ಲೈಂಗಿಕ ಉದ್ದೀಪನದ ಚಿತ್ರಗಳನ್ನು ನೋಡಿದ ನಂತರ ನಮ್ಮ ಲೈಂಗಿಕ ಬದುಕೂ ಹಂಗೇ ರೋಚಕ ಭಂಗಿಗಳಲ್ಲಿರಲಿ ಅಂತ ಹೋಲಿಸಿಕೊಳ್ಳೋದು ಮೂರ್ಖತನ. ಅದಾಗಲೇ ಹೀಗೆ ಹೋಲಿಸಿಕೊಂಡು ಕೀಳರಿಮೆ- ಲೈಂಗಿಕ ಅಸಂತೃಪ್ತಿ ಹೊಂದಿರುವವರು ಎಷ್ಟೆಲ್ಲ ಮಂದಿಯಿರಬಹುದಲ್ಲವೇ?

ಹುಡುಗರಿಗೆ ಮಾತ್ರ ಸನ್ನಿಯ ಈ ತಿಳಿವಳಿಕೆ ಮಾತುಗಳು ಮುಟ್ಟಿದರೆ ಸಾಕು ಎನ್ನಲಾಗದು. ನೀವು ಪೋರ್ನ್ ನೋಡ್ತೀರಾ ಎಂಬ ಪ್ರಶ್ನೆಗೆ ದೆಹಲಿಯ ಹುಡುಗಿಯರು ಪ್ರತಿಕ್ರಿಯಿಸಿದ್ದನ್ನು ಕೆಳಗಿನ ವಿಡಿಯೋ ಬಿಡಿಸಿಟ್ಟಿದೆ. ಹಿಂಗಾಗಿ, ಒಟ್ಟಾರೆ ಯುವ ಭಾರತ ಸನ್ನಿ ಹೇಳಿದ ಲೈಂಗಿಕ ಸತ್ಯಕ್ಕೆ ಕಿವಿಗೊಡಲಿ.

Leave a Reply