ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಹೊಸದಾಗಿರುವ 3 ಸಂಗತಿಗಳು ಯಾವವು ಗೊತ್ತೇ?

ಡಿಜಿಟಲ್ ಕನ್ನಡ ಟೀಮ್

  1. ಶ್ವಾನಪಡೆಯ ಮೆರುಗು: 26 ವರ್ಷಗಳ ನಂತರ ಸೇನೆಯ ಶ್ವಾನದಳ ಪಥ ಸಂಚಲನದಲ್ಲಿ ಭಾಗವಹಿಸಲಿದೆ. ಇದಕ್ಕೆಂದೇ 36 ಶ್ವಾನಗಳನ್ನು ತರಬೇತುಗೊಳಿಸಲಾಗಿದೆ. ಸೇನೆಯ ಬಳಿ ಲ್ಯಾಬ್ರಡಾರ್ ಮತ್ತು ಜರ್ಮನ್ ಶೆಫರ್ಡ್ ಥಳಿಯ 1200 ಶ್ವಾನಗಳಿವೆ. ಇವನ್ನು ಸ್ಫೋಟಕ ಮತ್ತು ನೆಲಬಾಂಬುಗಳ ಪತ್ತೆಗೆ, ಸುಳಿವು ಪತ್ತೆಗೆ, ಕಾವಲು ಮತ್ತು ಆಕ್ರಮಣಕ್ಕೆ ಬಳಸಿಕೊಳ್ಳಲಾಗುತ್ತದೆ. ಹೀಗೆ ಸದ್ದಿಲ್ಲದೇ ದೇಶಸೇವೆ ಸಲ್ಲಿಸುತ್ತಿರುವ ಶ್ವಾನಗಳು ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗಿಯಾಗುತ್ತಿರುವುದು ಹೆಮ್ಮೆಯ ವಿಷಯವಲ್ಲದೇ ಇನ್ನೇನು?
  1. ಮಹಿಳಾ ಪಡೆಯ ಬೈಕ್ ಸಾಹಸ: ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಸಶಸ್ತ್ರ ಪಡೆಯಲ್ಲಿರುವ ಮಹಿಳೆಯರು ಭಾಗವಹಿಸುವುದು ಹೊಸ ಸಂಗತಿ ಅಲ್ಲ. ಆದರೆ ಈ ಬಾರಿ ಕೇಂದ್ರ ಮೀಸಲು ಪೊಲೀಸ್ ಪಡೆಯ 120 ಮಹಿಳಾ ಸಿಪಾಯಿಗಳ ತಂಡವು ಅತಿಕ್ಲಿಷ್ಟ ಬೈಕ್ ಸಾಹಸಗಳನ್ನು ಮೊದಲ ಬಾರಿಗೆ ಪ್ರದರ್ಶಿಸಲಿದೆ. 2014ರಲ್ಲಿ ರೂಪುಗೊಂಡಿರುವ ‘ವಿಮನ್ ಡೇರ್ ಡೆವಿಲ್ಸ್ ಸಿಆರ್ ಪಿಎಫ್’ ತಂಡ ಕರಾರುವಾಕ ತರಬೇತಿಯೊಂದಿಗೆ ಬೈಕ್ ಸ್ಟಂಟ್ ಮಾಡಲು ತಯಾರಾಗಿದೆ.

7th National Conference of Women in Police

  1. ಫ್ರಾನ್ಸ್ ಸೈನಿಕರ ಪರೇಡ್: ಈ ಬಾರಿ ಗಣರಾಜ್ಯೋತ್ಸವದ ಅತಿಥಿಯಾಗಿ ಆಗಮಿಸುತ್ತಿರುವವರು ಫ್ರಾನ್ಸ್ ಅಧ್ಯಕ್ಷ ಫ್ರಾಂಕಾಯಿಸ್ ಹೊಲಾಂಡ್. ಅದಲ್ಲ ವಿಶೇಷ… ಇತಿಹಾಸದಲ್ಲೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪಥಸಂಚಲನದಲ್ಲಿ 130 ಫ್ರೆಂಚ್ ಯೋಧರ ಗುಂಪು ಪಥಸಂಚಲನ ನಡೆಸಲಿದೆ. ಈ ಹಿಂದೆ 2009ರಲ್ಲಿ ನಮ್ಮ ದೇಶದ ಮರಾಠಾ ಲೈಟ್ ಇನ್ ಫ್ಯಾಂಟ್ರಿ ಅಲ್ಲಿನ ಪಥಸಂಚಲನದಲ್ಲಿ ಪಾಲ್ಗೊಂಡಿತ್ತು ಅನ್ನೋದನ್ನು ಇಲ್ಲಿ ಸ್ಮರಿಸಬಹುದು.french soldiers

Leave a Reply