ಅತಿಉಷ್ಣತೆ ಭೂಮಿಯಿಡೀ ಇದೆ, 2015 ಅತಿ ಬೆಚ್ಚಗಿನ ವರ್ಷ!

ಡಿಜಿಟಲ್ ಕನ್ನಡ ಟೀಮ್

ಭೂಮಿ ಬಿಸಿಯಾಗ್ತಿದೆ ಅನ್ನೋದಕ್ಕೀಗ ಅಧಿಕೃತ ಮುದ್ರೆ ಬಿದ್ದಿದೆ. 2015ನೇ ಇಸ್ವಿ ಅತಿ ಉಷ್ಣದ ವರ್ಷವಾಗಿತ್ತು ಅಂತ ಅಮೆರಿಕದ ಸಮುದ್ರ ಮತ್ತು ಹವಾಮಾನ ಅಧ್ಯಯನದ ಆಡಳಿತ ಸಂಸ್ಥೆ ಸಾರಿದೆ.

1880ರ ನಂತರ ಅತಿ ಬೆಚ್ಚಗಿನ ವರ್ಷ 2015. ಇದಕ್ಕೂ ಮೊದಲು 2014ಕ್ಕೆ ಆ ಪಟ್ಟವಿತ್ತು. ಅರ್ಥಾತ್ ವರ್ಷದಿಂದ ವರ್ಷಕ್ಕೆ ಭೂಮಿ ತನ್ನ ಉಷ್ಣ ಹೆಚ್ಚಿಸಿಕೊಳ್ಳುತ್ತಿದೆ.

ನಾಸಾದ ಉಪಗ್ರಹ, ಜಗತ್ತಿನಾದ್ಯಂತ ಇರುವ ಹವಾಮಾನ ಕೇಂದ್ರಗಳು ಇವೆಲ್ಲವುದರ ಮಾಹಿತಿ ಉಪಯೋಗಿಸಿಕೊಂಡು ನೀಡಿರುವ ವರದಿ ಇದು. ‘ಈ ಟ್ರೆಂಡು ಹೀಗೆಯೇ ಮುಂದುವರಿಯುವ ಸಾಧ್ಯತೆಗಳೇ ದಟ್ಟವಾಗಿವೆ. ಹೀಗಾಗಿ ಹವಾಮಾನ ಬದಲಾವಣೆಯೇ ಈ ಪೀಳಿಗೆ ಎದುರಿಸಬೇಕಿರುವ ಅತಿದೊಡ್ಡ ಸವಾಲಾಗಿದೆ’ ಅಂತ ಸಂಸ್ಥೆಯ ಅಧ್ಯಯನಕಾರರು ಎಚ್ಚರಿಸಿದ್ದಾರೆ.

ಭೂಮಿ ಅತಿಬೆಚ್ಚಗಾಗುವುದರ ಪರಿಣಾಮ ಏನು? ಹಿಮಪದರಗಳು ಕರಗುತ್ತವೆ. ಇದರಿಂದ ಸಮುದ್ರ ಮಟ್ಟ ಏರುತ್ತದೆ. ಅತಿವೃಷ್ಟಿ, ಚಂಡಮಾರುತಗಳ ಸರಣಿ ತೆಗೆದುಕೊಳ್ಳುತ್ತದೆ.

ಇರುವ ಜಾಗದಲಿ ಉಷ್ಣವಾದೊಡೆ ಊಟಿಗೋ- ಮುನ್ನಾರಿಗೋ ಹೋಗಬಹುದಯ್ಯ… ಪೃಥ್ವಿಯೇ ಕುದಿದರೆ ರಜೆ ಹಾಕಿ ಹೋಗುವುದೆಲ್ಲಿಗೆ?

Leave a Reply