ಅಫ್ಘನ್ ಯುದ್ಧಕಣದಲ್ಲಿ ಭಾರತದ ಹೆಲಿಕಾಪ್ಟರ್, ಎಮ್ ಐ-35 ಗೆ ಆಲ್ ದಿ ಬೆಸ್ಟ್ ಹೇಳೋಣ!

A photo taken from inside an MI-35 Hind E helicopter of another Afghan National Army Air Corps Mi-35 piloted by Hungarian Air Force Maj. Bela Lazar, Hungarian Operational Mentoring Liaison Team commander, and Afghan National Army Air Corps Capt. Gholar Mohaiudin, May 11, 2010, over Afghanistan. “I have a solid mind to be a good pilot, but our advisors have showed us the organizational skills it takes to execute our mission in combat,” said Capt. Mohaiudin, who has more than 22 years of experience flying the airframe. “Teaching us to defend our friends in battle and serve our country is something I will always appreciate, we are an asset for the Afghan people and we can be an active part in the defense of our nation.” (U.S. Air Force photo/ Staff Sgt. Manuel J. Martinez/released)

ಡಿಜಿಟಲ್ ಕನ್ನಡ ಟೀಮ್

ಎಮ್ ಐ- 35. ಇದು ಭಾರತ ನಿರ್ಮಿಸಿದ ಕದನ ಹೆಲಿಕಾಪ್ಟರ್ ಸರಣಿ. ತಾಲಿಬಾನ್ ಮತ್ತು ಅಲ್ ಕಾಯಿದಾ ಉಗ್ರರೊಂದಿಗೆ ಹೋರಾಡುತ್ತಿರುವ ಅಫಘಾನಿಸ್ತಾನಕ್ಕೆ ಭಾರತವು ಕೊಡುಗೆಯಾಗಿ ನೀಡಿದ್ದ ಈ ಹೆಲಿಕಾಪ್ಟರ್ ಗಳು ಬುಧವಾರದಿಂದ ಕಾರ್ಯಾಚರಣೆಗೆ ಸಿದ್ಧವಾಗಿವೆ.

ಕಳೆದ ಡಿಸೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಬೂಲ್ ಗೆ ಭೇಟಿ ನೀಡಿದ್ದಾಗ ಎಮ್ ಐ- 35 ಸರಣಿಯ ಮೂರು ಹೆಲಿಕಾಪ್ಟರ್ ಗಳನ್ನು ಅಫಘಾನಿಸ್ತಾನಕ್ಕೆ ಕೊಡುಗೆಯಾಗಿ ನೀಡಲಾಗಿತ್ತು. ಆ ಪೈಕಿ ಮೂರು ಹೆಲಿಕಾಪ್ಟರ್ ಗಳು ಬುಧವಾರ ಸಿದ್ಧಗೊಂಡು ಕದನ ಕಣದ ಮೇಲೆ ಫಡಫಡಿಸಲಿವೆ. ಇನ್ನೊಂದು ಹೆಲಿಕಾಪ್ಟರ್ ಈ ತಿಂಗಳಲ್ಲೇ ಉಪಯೋಗಕ್ಕೆ ಲಭ್ಯವಾಗಲಿದೆ.

ಅಫಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯವು ತಾಲಿಬಾನಿಗಳ ಹಿಡಿತದಲ್ಲಿದೆ. ಅರೆ ಮರುಭೂಮಿಯ ಈ ಪ್ರಾಂತ್ಯದಲ್ಲಿ ಹೆಚ್ಚಾಗಿ ಅಫೀಮು ಬೆಳೆಯಲಾಗುತ್ತದೆ. ಅರ್ಥಾತ್, ಮಾದಕ ದ್ರವ್ಯ ವಹಿವಾಟಿನ ಮೂಲಕ ತಾಲಿಬಾನಿ ಉಗ್ರರ ಆರ್ಥಿಕ ಪ್ರಾಬಲ್ಯ ಚಿಗುರುತ್ತಿರುವುದು ಇಲ್ಲಿಯೇ. ಹೆಲ್ಮೆಂಡ್ ಪ್ರಾಂತ್ಯದಲ್ಲಿ ಉಗ್ರರನ್ನು ಹಿಮ್ಮೆಟ್ಟಿಸುವುದು ಎಂದರೆ, ಅಫ್ಘನ್ ನಿಂದ ಭಾರತದ ಪಂಜಾಬ್ ವರೆಗೆ ಹರಡಿಕೊಂಡಿರುವ ಅಫೀಮು ಜಾಲಕ್ಕೂ ಹೊಡೆತ ಕೊಟ್ಟಂತೆ. ಇದೀಗ ಇದೇ ಹೆಲ್ಮೆಂಡ್ ಪ್ರಾಂತ್ಯದಲ್ಲಿ ಎಮ್ ಐ-35 ಯುದ್ಧ ಹೆಲಿಕಾಪ್ಟರ್ ಗಳು ಕದನದಲ್ಲಿ ಭಾಗಿಯಾಗಿರುವುದು ಈ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆ.

‘ಭಾರತ ಯಾವತ್ತೂ ನಮಗೆ ಸಹಾಯ ಮಾಡುತ್ತಲೇ ಬಂದಿದೆ. ಎಮ್ ಐ- 35 ಹೆಲಿಕಾಪ್ಟರ್ ಗಳು ಇಲ್ಲಿನ ವಾತಾವರಣಕ್ಕೆ ಅತ್ಯಂತ ಪೂರಕವಾಗಿವೆ. ಉಗ್ರರನ್ನು ಹಿಮ್ಮೆಟ್ಟಿಸುವುದರಲ್ಲಿ ಅವುಗಳ ಯೋಗದಾನ ದೊಡ್ಡದು’ ಅಂತ ಅಫಘಾನಿಸ್ತಾನದ ರಕ್ಷಣಾ ದಾಸ್ತಾನು ವಿಭಾಗದ ಮುಖ್ಯಸ್ಥರು ಸಂತಸದಿಂದ ಪ್ರತಿಕ್ರಿಯಿಸಿದ್ದಾರೆ.

ಇಷ್ಟವಾಗ್ತಿದೆಯೇ ಸುದ್ದಿಯ ಸೀಳುನೋಟ? ಹಾಗಾದ್ರೆ ಈ ಲಿಂಕಿನಲ್ಲಿ ಡಿಜಿಟಲ್ ಕನ್ನಡ ಆ್ಯಪ್ ಡೌನ್ಲೋಡ್ ಮಾಡ್ಕೋಳಿ.

Leave a Reply