ಭಕ್ತ ಮಹಾಜನರ ಗಮನಕ್ಕೆ… ನೆಲ ಗುಡಿಸ್ತಿರೋ ಫೋಟೋ ಮೋದಿಯವರದ್ದಲ್ಲ!

ನರೇಂದ್ರ ಮೋದಿಯವರು ಎಂಥ ವಿನಮ್ರ ಹಿನ್ನೆಲೆಯಿಂದ ಬಂದವರು ಎಂಬುದನ್ನು ಬಿಂಬಿಸುವುದಕ್ಕೆ ಅವರು ಕೆಲಸಗಾರನ ದಿರಿಸಲ್ಲಿ ನೆಲ ಗುಡಿಸುತ್ತಿರುವ ಕಪ್ಪು- ಬಿಳುಪು ಚಿತ್ರವೊಂದು ಲೋಕಸಭೆ ಚುನಾವಣೆ ಪೂರ್ವದಲ್ಲಿ ಅಂತರ್ಜಾಲದಲ್ಲಿ ಭಾರೀ ಸಂಚಲನ ಉಂಟುಮಾಡಿತ್ತು.

1988ರಲ್ಲಿ ಮೋದಿಯವರು ಆರೆಸ್ಸೆಸ್ ನ ಸಾಮಾನ್ಯ ಕಾರ್ಯಕರ್ತರಾಗಿದ್ದಾಗ ತೆಗೆದಿದ್ದ ಚಿತ್ರ ಇದು ಎಂಬ ಒಕ್ಕಣೆ ಹೊತ್ತು, ಬಿಜೆಪಿ ಬೆಂಬಲಿಗರು ಹಾಗೂ ನರೇಂದ್ರ ಮೋದಿಯವರ ಕಟ್ಟರ್ ಬೆಂಬಲಿಗರ ಸಾಮಾಜಿಕ ತಾಣಗಳನ್ನೆಲ್ಲ ಅಲಂಕರಿಸಿತ್ತು ಇದು.

ಇದು ಮೂಲ ಚಿತ್ರ ಇರಲಿಕ್ಕಿಲ್ಲ ಎಂಬ ಅನುಮಾನಗಳು ಆಗಾಗ ವ್ಯಕ್ತವಾಗುತ್ತಿದ್ದರೂ ಆ ಬಗ್ಗೆ ಇದಮಿತ್ಥಂ ಅಂತ ಹೇಳುವವರಿರಲಿಲ್ಲ. ಅಹಮದಾಬಾದಿನ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಪ್ರಧಾನಿ ಕಾರ್ಯಾಲಯಕ್ಕೆ ಮಾಹಿತಿ ಹಕ್ಕು ಕಾಯ್ದೆ ಅಡಿ ಈ ಮಾಹಿತಿ ಕೇಳಿದ್ದರು. ಅಲ್ಲಿಂದ ಬಂದಿರುವ ಉತ್ತರ ಹೀಗಿದೆ- ‘ನೀವು ಕೇಳಿರುವ ಮಾಹಿತಿ ನಮ್ಮ ಕಡತಗಳಿಗೆ ಸಂಬಂಧಿಸಿದ್ದಲ್ಲ. ಆದರೂ ಇದು ಫೋಟೊಶಾಪ್ ಮಾಡಿರುವ ಚಿತ್ರವಾಗಿದ್ದು ಪ್ರಧಾನಿ ನರೇಂದ್ರ ಮೋದಿಯವರದ್ದಲ್ಲ’ ಎಂದು ಉತ್ತರಿಸಿದೆ.

Leave a Reply