ವಿನಾಯಕ ಕೋಡ್ಸರ
ಚಂದನವನದಲ್ಲಿ ಗೆಲುವು ಅಂದ್ರೆ ಹಾಗೆ. ಯಾವುದೋ ಒಂದಂಶದಿಂದ ಯಾರೂ ಗೆದ್ದಿಲ್ಲ. ನನ್ನಿಂದ್ಲೆ ಎಲ್ಲ ಗೆದ್ದಿದ್ದು ಅಂದುಕೊಂಡವರು ಯಾರೂ ಜಾಸ್ತಿ ದಿನ ಬಾಳಲಿಲ್ಲ. ಇಲ್ಲಿನ ಸೋಲು-ಗೆಲುವಿನ ಲೆಕ್ಕಾಚಾರವೇ ಬೇರೆ ಥರದ್ದು. ನಾಯಕ-ನಾಯಕಿ ಕಾಂಬಿನೇಷನ್ನಲ್ಲಿ ಕೆಲವು ಸಲ ಸಿನಿಮಾ ಗೆಲ್ಲುತ್ತೆ. ಇನ್ನು ಕೆಲವು ಸಲ ನಾಯಕ-ನಿರ್ದೇಶಕರ ಜೋಡಿ ವರ್ಕೌಟ್ಆಗಿಬಿಡುತ್ತೆ. ಮತ್ತೆ ಹಲವು ಸಲ ಎಲ್ಲವೂ ಗೆಲುವಿನ ಸೂತ್ರಗಳಾಗುತ್ತೆ.
ಸೋತರೆ ನಿರ್ದೇಶಕ ಕಾರಣ, ನಿರ್ಮಾಪಕ ಹೈರಾಣ ಅಂತ ಗಾಂಧಿನಗರದಲ್ಲೊಂದು ಜೋಕ್ ಇದೆ! ಹೋಗ್ಲಿ ಬಿಡಿ ವಿಷ್ಯ ಅದಲ್ಲ. ನಾವಿಲ್ಲಿ ಗೆಲುವಿನ ಬಗ್ಗೆ ಮಾತಾಡ್ತಾ ಇದೀವಿ. ಸದ್ಯಕ್ಕಂತು ಗಾಂಧಿನಗರಕ್ಕೆ ಯಶ್ ಗೆಲುವಿನ ಲೆಕ್ಕಾಚಾರ ಹಾಕೋದೆ ಕೆಲಸವಾಗಿದೆ. ಸ್ಯಾಂಡಲ್ವುಡ್ನಲ್ಲಿ ಯಶ್ಯಶಸ್ವಿ ನಟ, ನಂಬರ್ ಒನ್ ನಟ ಎಲ್ಲವೂ ಹೌದು. ಆದ್ರೆ ‘ಮಾಸ್ಟರ್ಪೀಸ್’ ಹಿಂದಿನ ‘ಮಿ. ರಾಮಾಚಾರಿ’ಯಷ್ಟು ನಿರೀಕ್ಷೆಯ ಮಟ್ಟ ಮುಟ್ಟದ್ದು, ‘ಕಿಲ್ಲಿಂಗ್ ವೀರಪ್ಪನ್’ ನಂತರ ಶಿವಣ್ಣನವರ ಸಿನಿಮಾಗಳು ಬ್ಯಾಕ್ಟು ಬ್ಯಾಕ್ ಬರ್ತಾ ಇರೋದೆಲ್ಲ ಹೊಸದೊಂದು ಬಗೆಯ ಲೆಕ್ಕಾಚಾರಕ್ಕೆ ನಾಂದಿ ಹಾಡಿದೆ.
ಕಿರುತೆರೆ ನಟನಾಗಿ ಚಂದನವನದಲ್ಲಿ ಹಲವು ವರ್ಷ ಚಪ್ಪಲಿ ಸವೆಸಿ ನಂತರ ಇಷ್ಟೊಂದು ದೊಡ್ಡ ಮಟ್ಟಕ್ಕೆ ಬಂದವರು ಯಶ್ ಅನ್ನೋದು ಗೊತ್ತೆ ಇದೆ. ಪ್ಲಸ್, ಇದ್ದಕ್ಕಿದ್ದಂತೆ ಧುತ್ತನೆ ರಾಕಿಂಗ್ಸ್ಟಾರ್ಎನ್ನಿಸಿಕೊಳ್ಳಲಿಲ್ಲ. ‘ಜಂಬದ ಹುಡುಗಿ’ಯಲ್ಲಿ ಸಹ ನಟನಾಗಿ, ನಂತ್ರ ‘ಮೊಗ್ಗಿನ ಮನಸ್ಸು’ವಿನಲ್ಲಿ ನಾಯಕರಲ್ಲಿ ಓರ್ವನಾಗಿ ಬೆಳ್ಳಿ ಪರದೆಗೆ ಕಾಲಿಟ್ಟವರು ಯಶ್.
ನಿಮಗೆ ನೆನಪಿರಬಹುದು. ಕೆಲವು ಸಲ ಕ್ಯೂಟ್ ಕಪಲ್ಗಳು ಜನರ ಮನಸ್ಸು ಗೆದ್ದು ಬಿಡ್ತಾರೆ. ರಾಜ್ಕುಮಾರ್-ಭಾರತಿ, ವಿಷ್ಣುವರ್ಧನ್-ಆರತಿ, ಶ್ರೀನಾಥ್-ಮಂಜುಳಾ, ಅಂಬರೀಶ್-ಅಂಬಿಕಾ, ಅನಂತನಾಗ್-ಲಕ್ಷ್ಮಿ, ರವಿಚಂದ್ರನ್-ಜೂಹಿ ಚಾವ್ಲಾ, ಶಿವರಾಜ್ ಕುಮಾರ್-ಸುಧಾರಾಣಿ ಹೀಗೆ ಒಂದಷ್ಟು ಜೋಡಿ ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದು ಬಿಡುತ್ತೆ. ಹಾಗೇನೆ ಯಶ್-ರಾಧಿಕಾ ಪಂಡಿತ್ ಜೋಡಿ ಕೂಡ ಆವತ್ತೆ ಮೊದಲನೆ ಸಿನಿಮಾದಲ್ಲಿ ಮೋಡಿ ಮಾಡಿಬಿಡ್ತು.
‘ಡ್ರಾಮಾ’ ಸಿನಿಮಾದಲ್ಲೂ ಈ ಜೋಡಿಯನ್ನು ಜನ ಇಷ್ಟಪಟ್ಟರು. ಹಾಗೇನೆ ಮೊನ್ನೆ ‘ಮಿ.ರಾಮಾಚಾರಿ’ಯಲ್ಲಿ ಕೂಡ ಯಶ್-ರಾಧಿಕಾ ಪಂಡಿತ್ ಹೊಸ ಹವಾ ಎಬ್ಬಿಸಿದ್ರು. ಈ ಜೋಡಿಯನ್ನು ಸ್ಯಾಂಡಲ್ವುಡ್ನ ‘ಕ್ಯೂಟ್ ಕಪಲ್’ ಅಂತಾನೂ ಕರೀತಾರೆ.
ಹಾಗಿದ್ರೆ ಇದೊಂದೇ ಯಶ್ ಯಶಸ್ಸಿಗೆ ಕಾರಣವಾಯ್ತ ಅಂದ್ರೆ? ಯಶ್ ಜೊತೆ ರಾಧಿಕಾ ಪಂಡಿತ್ ಇಲ್ಲದ ಸಿನಿಮಾಗಳು ಹಿಟ್ ಆಗಿವೆ. ಹಾಗಿದ್ರೆ ಜಯಣ್ಣ-ಭೋಗಣ್ಣ-ಯಶ್ ಕಾಂಬಿನೇಷನ್ ವರ್ಕೌಟ್ಆಯ್ತಾ ಅಂದ್ರೆ? ‘ಡ್ರಾಮಾ’, ‘ಗೂಗ್ಲಿ’, ‘ಗಜಕೇಸರಿ’, ‘ಜಾನು’, ‘ಮಿ.ರಾಮಾಚಾರಿ’ ಚಿತ್ರಗಳು ಈ ಕಾಂಬಿನೇಷನ್ನಲ್ಲಿ ಬಂದಿವೆ. ಇದ್ರಲ್ಲಿ ನಾಲ್ಕು ಸೂಪರ್ಡೂಪರ್ ಹಿಟ್. ಒಂದೇ ನಿರ್ಮಾಪಕರು ಒಬ್ಬ ನಾಯಕನಿಗೆ ೫ ಸಿನಿಮಾ ಮಾಡಿದ್ದು, ಅದ್ರಲ್ಲಿ ೪ ಗೆದ್ದಿದ್ದು ಎಲ್ಲವು ಇವತ್ತಿನ ಟ್ರೆಂಡ್ಗೆ ದಾಖಲೆ.
ಈ ನಿರ್ಮಾಪಕರ ಹೊರತಾಗಿ ಯಶ್ರ ‘ರಾಜಾಹುಲಿ’ ಗೆದ್ದಿದೆ. ಮೊದಲ ಸಲ ಸೂಪರ್ಹಿಟ್. ‘ಕಿರಾತಕ’ ಸಕ್ಸಸ್. ಮೊದಲ ಸಿನಿಮಾ ‘ಮೊಗ್ಗಿನ ಮನಸ್ಸು’ವಿನಲ್ಲಿಯೇ ಪ್ರಶಸ್ತಿ ಗೆದ್ರು. ಹಾಗಿದ್ರೆ ಇಷ್ಟೆಲ್ಲ ಸಿನಿಮಾದ ರೂವಾರಿ ಯಶ್ ಮಾತ್ರನಾ ಅಂದ್ರೆ? ಅಲ್ಲಿಯೂ ಸೋಲುಗಳು ಸಿಗುತ್ತವೆ.
ಈ ಎಲ್ಲ ಜಾನರ್ನಿಂದ ಹೊರಬಂದು ಯಶ್ ‘ಮಾಸ್ಟರ್ಪೀಸ್’ ಮಾಡಿದ್ರು. ಅದರಲ್ಲಿ ಅವರನ್ನು ಚೂರು ಹೆಚ್ಚೇ ನಾಯಕ ಅಂತ ಬಿಂಬಿಸುವ ಯತ್ನ ಇದೆ. ಸಿನಿಮಾ ಒಂದು ಹಂತಕ್ಕೆ ಹೆಸರು ಮಾಡಿದ್ರೂ, ಹಾಗಂತ ಅದೇನು ‘ರಾಜಾಹುಲಿ’ಯಷ್ಟು, ‘ಡ್ರಾಮಾ’ದಷ್ಟು, ‘ಮಿ.ರಾಮಾಚಾರಿ’ಯಷ್ಟು ದೊಡ್ಡ ಮಟ್ಟದ ಹೆಸರು ಮಾಡಲಿಲ್ಲ.
ಯಶ್ ಒಳಗೊಬ್ಬ ಅದ್ಭುತ ನಟನಿದ್ದಾನೆ ಅನ್ನೋದು ಸುಳ್ಳಲ್ಲ. ಹಾಗಂತ ಅದ್ಬುತ ನಟರಾದವರ ಚಿತ್ರಗಳೆಲ್ಲ ಗೆದ್ದಿದೆ ಅಂತಾನೂ ಅಲ್ಲ! ಈ ಗಾಂಧಿನಗರವೇ ಹೀಗೆ. ಯಾವ ಗೆಲುವು ಯಾರಿಂದ ಅಂತ ಲೆಕ್ಕಾಚಾರ ಹಾಕೋದು ತಪ್ಪು. ಲೆಕ್ಕಾಚಾರ ಹಾಕಿಯೇ ಕೆಲವ್ರು ಹಾದಿ ತಪ್ಪಿ ಬಿಡುತ್ತಾರೆ.
ಕೊನೆಯದಾಗಿ, ಒಂದು ‘ಮುಂಗಾರು ಮಳೆ’ ಗಣೇಶ್ಗೂ, ಪೂಜಾಗಾಂಧಿಗೂ ದೊಡ್ಡ ಮಟ್ಟದ ಬ್ರೇಕ್ ಕೊಡ್ತು. ‘ಚಂದನವನ’ದಲ್ಲಿ ಹೊಸ ಟ್ರೆಂಡ್ನ್ನೆ ಹುಟ್ಟು ಹಾಕ್ತು. ಹಾಗಂತ ಅದ್ರ ನಂತರದ ಸಿನಿಮಾದಲ್ಲಿ ಗಣೇಶಾಗ್ಲಿ, ಪೂಜಾ ಗಾಂಧಿಯಾಗ್ಲಿ ಮತ್ತೆ ಆ ಎತ್ತರಕ್ಕೆ ಹೋಗ್ಲಿಲ್ಲ! ಹಾಗೆ ನೋಡಿದ್ರೆ ಗೆಲುವನ್ನು ತಕ್ಕಮಟ್ಟಿಗೆ ಜೀರ್ಣಿಸಿಕೊಂಡವರು ನಿರ್ದೇಶಕ ಯೋಗರಾಜ್ ಭಟ್ಟರು ಮಾತ್ರ.
ಇಷ್ಟಾದ ಮೇಲೂ ನಿಮ್ಮ ಅನುಮಾನ ಹಾಗೆ ಉಳಿದ್ರೆ, ಯಶ್ ಯಶಸ್ಸಿಗೆ ಕಾರಣ ಯಾರು ಎಂಬುದು ನಿಮ್ಮ ನಿಲುವಿಗೆ ಬಿಟ್ಟಿದ್ದು!
“ಇಷ್ಟಾದ ಮೇಲೂ ನಿಮ್ಮ ಅನುಮಾನ ಹಾಗೆ ಉಳಿದ್ರೆ, ಯಶ್ ಯಶಸ್ಸಿಗೆ ಕಾರಣ ಯಾರು ಎಂಬುದು ನಿಮ್ಮ ನಿಲುವಿಗೆ ಬಿಟ್ಟಿದ್ದು”
ಈ ಕರ್ಮಕ್ಕೆ ತಲೆ ಬುಡವಿಲ್ಲದ ಈ ಅಂಕಣವನ್ನು ಮೇಲಿಂದ ಓದ್ಕೊಂಡು ಬರಬೇಕಾ?