ಸುದ್ದಿಸಂತೆ: ತ.ನಾಡು ವಿದ್ಯಾರ್ಥಿನಿಯರ ಸಾವಿಗೆ ಕಾಲೇಜೇ ಕಾರಣ, ಅರುಣಾಚಲ ಬಿಕ್ಕಟ್ಟು, ಸಿಂಧುಗೆ ಬಂಗಾರ

ಶೂಟರ್ ಸಿಂಧು

ತಮಿಳುನಾಡು ವಿದ್ಯಾರ್ಥಿನಿಯರ ಆತ್ಮಹತ್ಯೆ, ಕಾಲೇಜು ಅವ್ಯವಸ್ಥೆಯೇ ಬಲಿತೆಗೆದುಕೊಂಡಿದ್ದು ಸ್ಪಷ್ಟ

ತಮಿಳುನಾಡಿನ ಮೂವರು ವಿದ್ಯಾರ್ಥಿನಿಯರು ಸಾವಿಗೆ ಶರಣಾಗಿರುವುದಕ್ಕೆ ಕಾಲೇಜಿನ ಅವ್ಯವಸ್ಥೆಯೇ ಕಾರಣ ಎಂಬುದೀಗ ಸ್ಪಷ್ಟವಾಗಿದೆ. ಅಂತೆಯೇ, ಪೋಷಕರು ಆತ್ಮಹತ್ಯೆಯಲ್ಲ ಸಾವು ಎಂಬ ಶಂಕೆ ವ್ಯಕ್ತಪಡಿಸಿರುವುದರಿಂದ ಇನ್ನೊಮ್ಮೆ ಶವಪರೀಕ್ಷೆಗೆ ನ್ಯಾಯಾಲಯ ಆದೇಶಿಸಿದೆ.

ಆತ್ಮಹತ್ಯೆ ಪತ್ರದಲ್ಲಿ ವಿದ್ಯಾರ್ಥಿನಿಯರು ತೋಡಿಕೊಂಡಿದ್ದಗೋಳೆಲ್ಲ ಸತ್ಯವಾಗಿತ್ತು ಅಂತ ಅಲ್ಲಿನ ಕಾಲೇಜು ವಾತಾವರಣ ಸಾಕ್ಷಿ ಹೇಳುತ್ತಿದೆ. ಕಾಲೇಜಿನಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳು ಒಂದೇ ಶೌಚಾಲಯ ಬಳಸುತ್ತಿದ್ದರು. ಆ ಶೌಚಾಲಯಕ್ಕೆ ಬಾಗಿಲುಗಳೆ ಇಲ್ಲದಿರುವುದು ಅಲ್ಲಿನ ಅವ್ಯವಸ್ಥೆಯನ್ನ ತೋರಿಸುತ್ತದೆ. ಇದಿಷ್ಟೇ ಅಲ್ಲದೆ ಕಾಲೇಜು ಕೊಠಡಿಗಳು, ಹಾಸ್ಟೆಲ್ ಕೊಠಡಿಗಳು, ಶೌಚಾಲಯವನ್ನು ತೊಳೆಯುವುದಕ್ಕೆ, ಕಾಲೇಜಿನ ಗೋಡೆಗಳಿಗೆ ಪೈಯಿಂಟ್ ಮಾಡಲು ನಮ್ಮನ್ನು ಬಳಸಿಕೊಳ್ಳುತ್ತಿದ್ದರು ಎಂದು ವಿದ್ಯಾರ್ಥಿಗಳು ಮಾಧ್ಯಮದವರ ಮುಂದೆ ತಮ್ಮ ಆಳಲನ್ನು ತೊಡಿಕೊಂಡರು. ಲಕ್ಷ ಲಕ್ಷ ಶುಲ್ಕ ವಸೂಲಿ ಮಾಡುವ ಶಿಕ್ಷಣ ಸಂಸ್ಥೆಗಳು ಕನಿಷ್ಟ ಸೌಲಭ್ಯಗಳನ್ನು ನೀಡದೆ ಇರುವುದು ದುರಾದೃಷ್ಟಕರ ವಿಷಯ. ಆದರೂ ಇಂತಹ ಹೀನಾಯ ಪರಿಸರದಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿರುವುದು ಖೇದದ ಸಂಗತಿ.

ತಮಿಳುನಾಡು ವೈದ್ಯ ವಿದ್ಯಾರ್ಥಿನಿಯರ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ನನ್ನ ಮಗಳ ಸಾವು ಆತ್ಮಹತ್ಯೆಯಲ್ಲ, ಇದು ಕೊಲೆ ಎಂದು ಮೃತ ವಿದ್ಯಾರ್ಥಿನಿ ಮೊನಿಷಾ ತಂದೆ ಸಂಶಯ ವ್ಯಕ್ತಪಡಿಸಿದ್ದು ಮದ್ರಾಸ್ ಹೈಕೋರ್ಟ್ ಮತ್ತೊಮ್ಮೆ ಶವಪರೀಕ್ಷೆ ನಡೆಸಿ ವರದಿ ನೀಡುವಂತೆ ಬುಧವಾರ ಆದೇಶಿದೆ.

ತಮಿಳುನಾಡಿನ ವಿಲ್ಲುಪುರಂ ಎಸ್ ವಿ ಎಸ್ ವೈದ್ಯಕೀಯ ಕಾಲೇಜಿನ ಅವ್ಯವಸ್ಥೆ ಮತ್ತು ಕಿರುಕುಳಕ್ಕೆ ಬೇಸತ್ತು ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಪತ್ರ ಬರೆದು ಮೂವರು ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಶರಣಾಗಿದ್ದರು.

ಅರುಣಾಚಲದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಸ್ಪಷ್ಟನೆ ಕೇಳಿದ ಸುಪ್ರೀಂಕೋರ್ಟ್

ಅರುಣಾಚಲ ಪ್ರದೇಶದ ಮೇಲೆ ಹೇರಿರುವ ರಾಷ್ಟ್ರಪತಿ ಆಳ್ವಿಕೆಗೆ ಸ್ಪಷ್ಟ ಕಾರಣ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ 2 ದಿನಗಳ ಕಾಲಾವಕಾಶ ನೀಡಿ, ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಮುಂಡೂದಿದೆ. ರಾಜಕೀಯ ಅಸ್ಥಿರತೆಯ ಕಾರಣ ನೀಡಿ ಕೇಂದ್ರ ರಾಷ್ಟಪತಿ ಅವರಿಗೆ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಶಿಫಾರಸ್ಸು ಮಾಡಿತ್ತು. ಇದರನ್ವಯ ಬುಧವಾರವಷ್ಟೇ ಅರುಣಾಚಲ ಪ್ರದೇಶದಲ್ಲಿ ಅಧಿಕೃತವಾಗಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿತ್ತು. ಇದನ್ನು ಪ್ರಶ್ನಿಸಿ ಇಲ್ಲಿನ ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಭಾರತದಲ್ಲಿ ಭ್ರಷ್ಟಾಚಾರ ಕುಸಿದಿದೆ ಅಂತು ವರದಿ

ಭಾರತದಲ್ಲಿ ಭ್ರಷ್ಟಾಚಾರದ ಪ್ರಮಾಣ ಕುಸಿತ ಕಂಡಿದೆ ಎಂಬ ಆಶಾದಾಯಕ ವರದಿಯೊಂದನ್ನು ಬರ್ಲಿನ್ ಮೂಲದ ಟ್ರಾನ್ಸ್ ಫರೆನ್ಸಿ ಇಂಟರ್ ನ್ಯಾಷನಲ್ ಸಂಸ್ಥೆ ಬಿಡುಗಡೆ ಗೊಳಿಸಿದೆ. ಸಂಸ್ಥೆ ತನ್ನ ಭ್ರಷ್ಟಾಚಾರ ಮಾಪನಾ ಸೂಚ್ಯಂಕದಲ್ಲಿ ವಿಶ್ವದ 168 ದೇಶಗಳಲ್ಲಿ ಸಮೀಕ್ಷೆ ನಡೆಸಿ ಪಟ್ಟಿಯನ್ನ ಬಿಡುಗಡೆ ಗೊಳಿಸಿದ್ದು ಭಾರತ 76 ಸ್ಥಾನ ಪಡೆದುಕೊಂಡಿದೆ. ಇದು ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರಕ್ಕೆ ಸಿಕ್ಕಿ  ಪ್ರಮಾಣ ಪತ್ರ ಎನ್ನಬಹುದು. ಇದೇ ಸಂಸ್ಥೆ ಕಳೆದ ವರ್ಷದ ಸೂಚ್ಯಂಕದಲ್ಲಿ ವಿಶ್ವದ 100 ರಾಷ್ಟಗಳಲ್ಲಿ ಸಮೀಕ್ಷೆ ನಡೆಸಿ ಭಾರತಕ್ಕೆ 38 ನೆ ಸ್ಥಾನ ನೀಡಿತ್ತು. ಈ ವರಿದಿಯನ್ನು ಈ ವರ್ಷಕ್ಕೆ ಹೋಲಿಸಿದರೆ ಸಾಕಷ್ಟು ಭ್ರಷ್ಟಾಚಾರ ನಿಯಂತ್ರಣವಾಗಿದೆ ಎಂದಿದೆ.

ತ್ರಿವರ್ಣ ಹಾರಿಸಿದ ಕೋಹ್ಲಿಯ ಪಾಕ್ ಅಭಿಮಾನಿ ಬಂಧನ

ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೋಹ್ಲಿಯ ಅಭಿಮಾನಿಯೊಬ್ಬ ಪಾಕಿಸ್ಥಾನದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ತನ್ನ ಮನೆಯ ಮೇಲೆ ಹಾರಿಸಿದ್ದಕ್ಕೆ ಅಲ್ಲಿನ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆಸಿಸ್ ವಿರುದ್ಧ ಮಂಗಳವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಕೋಹ್ಲಿ ಅಜೇಯ 90 ರನ್ ಗಳ ಆಟವನ್ನು ಮೆಚ್ಚಿ ಉಮರ್ ಡ್ರಾಜ್ ಎಂಬಾತ ಲಾಹೋರ್ ನಿಂದ ಸಮಾರು 200 ಕಿ.ಮೀ ದೂರದ ಪಂಜಾಬ್ ಪ್ರಾಂತ್ಯದಲ್ಲಿ ತನ್ನ ಆಭಿಮಾನವನ್ನು ಪ್ರರ್ದಶಿಸಿದ್ದಕ್ಕೆ ಬಂಧನವಾಗಿದ್ದಾನೆ. ಆತನಿಂದ ಭಾರತದ ತ್ರಿವರ್ಣ ಧ್ವಜವನ್ನು ವಶಕ್ಕೆ ಪಡೆದಿದ್ದಾರೆ.

ಸಿಂಧುಗೆ ಶೂಟಿಂಗ್ ಬಂಗಾರ

ಭಾರತದ ಅಗ್ರ ಪಿಸ್ತೂಲ್ ಶೂಟರ್ ಹೀನಾ ಸಿಂಧೂ ಏಷ್ಯಾ ಒಲಿಂಪಿಕ್ ಅರ್ಹತಾ ಸುತ್ತಿನ ಮಹಿಳಾ ವಿಭಾಗದ 10 ಮೀಟರ್ ಏರ್ ಪಿಸ್ತೂಲ್ ಫೈನಲ್ ನಲ್ಲಿ ಬಂಗಾರ ಪದಕ ಪಡೆದು ಒಲಿಂಪಿಕ್ ಸ್ಪರ್ಧೆಯ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ ಎಂಟು ಮಹಿಳಾ ಶೂಟರ್ ಗಳು ಸ್ಪರ್ಧೆಯಲ್ಲಿದ್ದರು. ಭಾರತದ ಹೀನಾ ಸಿಂಧೂ 199.4 ಆಂಕಗಳಿಂದ ಅಗ್ರ ಸ್ಥಾನ ಪಡೆದು ಬಂಗಾರದ ಪದಕ ಪಡೆದುಕೊಂಡರೆ ಚೀನಾದ ತೈಪ್ಸ್ ತೇನ್ ಚೀಯ ಚೇನ್ (198.1) ಮತ್ತು ಕೊರಿಯಾದ ಜೀಮ್ ಯುನ್ ಮಿ (177.9) ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದು ಬೆಳ್ಳಿ, ಕಂಚು ಪದಕಗಳಿಗೆ ತೃಪ್ತಿ ಪಟ್ಟುಕೊಂಡರು.

Leave a Reply