ಸುಬ್ರಮಣಿಯನ್ ಸ್ವಾಮಿ ಹೊಸ ಅಸ್ತ್ರ, ಕೇಜ್ರಿವಾಲರನ್ನು ವಿಚಾರಣೆಗೆ ಒಳಪಡಿಸುವುದಕ್ಕೆ ಅನುಮತಿ ಕೋರಿ ಎಲ್ ಜಿ ಗೆ ಪತ್ರ

ಡಿಜಿಟಲ್ ಕನ್ನಡ ಟೀಮ್

 ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರನ್ನು ವಿಚಾರಣೆಗೆ ಒಳಪಡಿಸುವುದಕ್ಕೆ ಅನುಮತಿ ನೀಡುವಂತೆ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಅವರು ಲೆಫ್ಟಿನೆಂಟ್ ಜನರಲ್ ಗೆ ಪತ್ರ ಬರೆದಿದ್ದಾರೆ.

ಈ ಹಿಂದೆ 49 ದಿನಗಳ ಅಧಿಕಾರದಲ್ಲಿದ್ದಾಗ ಕೇಜ್ರಿವಾಲರ ಆಪ್ ಸರ್ಕಾರವು ಎಸ್ ಕೆ ಎನ್ ಎಂಬ ಕಂಪನಿಗೆ ಅಕ್ರಮವಾಗಿ ಸಹಾಯ ಮಾಡಿ, ಅದಕ್ಕೆ ಪ್ರತಿಯಾಗಿ ಪಾರ್ಟಿ ಫಂಡ್ ಪಡೆದುಕೊಂಡಿದೆ ಎಂಬುದು ಸ್ವಾಮಿ ಆರೋಪ.

ಎಸ್ ಕೆ ಎನ್ ಅಸೋಸಿಯೇಟ್ಸ್ ಅಧೀನದಲ್ಲಿರುವ ನಾಲ್ಕು ಕಂಪನಿಗಳು ತಲಾ 50 ಲಕ್ಷ ರು ಲೆಕ್ಕದಲ್ಲಿ 2 ಕೋಟಿ ರುಪಾಯಿಗಳನ್ನು ಆಪ್ ಪಕ್ಷಕ್ಕೆ ಒಂದೇ ದಿನದಲ್ಲಿ ಕೊಟ್ಟಿವೆ. ಈ ಹಣಕಾಸು ಕೊಡುಗೆ ಸಂದಾಯವಾಗಿದ್ದು ಆಪ್ ಸರ್ಕಾರವು ಎಸ್ ಕೆ ಎನ್ ಅಸೋಸಿಯೇಟ್ಸ್ ಗೆ ವಾತಾನುಕೂಲ, ವಿದ್ಯುದುಪಕರಣ, ಎಲ್ ಪಿ ಜಿ, ಸಿ ಎನ್ ಜಿ ಸಂಬಂಧದ ಗುತ್ತಿಗೆಗಳನ್ನು ಅನುಮೋದಿಸಿದ ದಿನವೇ. ಹೆಸರಿಗಷ್ಟೇ ಇರುವ, ತಮ್ಮ ಖಾತೆಯಲ್ಲಿ ವಹಿವಾಟು- ಲಾಭಗಳನ್ನು ಗಣನೀಯವಾಗಿ ತೋರಿಸದ ಈ ಕಂಪನಿಗಳಿಗೆ 2014 ಏಪ್ರಿಲ್ 5ರ ರಾತ್ರೋರಾತ್ರಿ ಅಷ್ಟು ಹಣವನ್ನು ಆಪ್ ಗೆ ದಾನ ನೀಡಲು ಸಾಧ್ಯವಾಗಿದ್ದು ಹೇಗೆ ಅಂತ ಸ್ವಾಮಿ ಪ್ರಶ್ನಿಸಿದ್ದಾರೆ. ಅಲ್ಲದೇ, ಎಸ್ ಕೆ ಎನ್ ಅಸೋಸಿಯೇಟ್ಸ್ ವ್ಯಾಟ್ ಪಾವತಿ ತಪ್ಪಿಸಿರುವ ಕಂಪನಿಗಳಲ್ಲೊಂದು ಎಂದೂ ಹೇಳಿದ್ದಾರೆ.

1 COMMENT

  1. You are single handedly fighting against corrupt people in high positions irrespective of their political party affiliations. I whole heatedly support you and wish you success in all your endeavours.

Leave a Reply