ಸಿನಿಮೋತ್ಸವಲ್ಲಿ ಭಾನುವಾರ ಕಾದಿರುವ ಚಿತ್ರಗಳು, ಪಾಸ್ ಇಲ್ಲದವ್ರು ಟ್ರೈಲರ್ ಆದ್ರೂ ನೋಡಿರಿಲ್ಲಿ…

ಡಿಜಿಟಲ್ ಕನ್ನಡ ಟೀಮ್

ಈ ದಿನ ಬೆಂಗಳೂರಿನಲ್ಲಿ ಕನ್ನಡದ ಚಿತ್ರಗಳಾದ ಮೈತ್ರಿ ಸ್ಕ್ರೀನ್-4ರಲ್ಲಿ 2.20ಕ್ಕೆ, ಹಾಗೂ ನಾನು ಅವನಲ್ಲ ಅವಳು ಚಿತ್ರ 6.00ಕ್ಕೆ ಪ್ರದರ್ಶನಗೊಳ್ಳುತ್ತಿವೆ. ಸ್ಕ್ರೀನ್ 3ರಲ್ಲಿ ಸತ್ಯಜಿತ್ ರೇ ಅವರ ಪತೇರ್ ಪಾಂಚಾಲಿ 2.50ಕ್ಕೆ ಪ್ರದರ್ಶನಗೊಳ್ಳುತ್ತಿದೆ. ಮೈಸೂರಿನಲ್ಲಿ ಸ್ಕ್ರೀನ್-1ರಲ್ಲಿ 12.30ಕ್ಕೆ ಸಾಲದ ಮಗು ಮತ್ತು 7.45ಕ್ಕೆ ದೇವರ ನಾಡಲ್ಲಿ ಚಿತ್ರ ಪ್ರದರ್ಶನವಾಗಲಿವೆ. ಇವುಗಳ ಜತೆಗೆ ವಿಶ್ವದ ವಿವಿಧ ಬುಡಕಟ್ಟು ಜನಾಂಗ ಹಾಗೂ ಅಲ್ಲಿನ ಸಂಸ್ಕೃತಿಯನ್ನು ಪರಿಚಯಿಸುವ ಉತ್ತಮ ಚಿತ್ರಗಳು ಸಹ ಇದ್ದು ಅವುಗಳಲ್ಲಿ ಕೆಲ ಪ್ರಮುಖ ಸಿನಿಮಾಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿವೆ.

ದ ಅಸಾಸಿನ್ (ಸ್ಕ್ರೀನ್-5, ವರ್ಷ-2015, 105 ನಿಮಿಷ) (ಆರಂಭದ ಸಮಯ: 02.30) (ನಿರ್ದೇಶಕ: ಹಸಿಯೊ ಹಸಿನ್)

ತೈವಾನ್ ಮೂಲದ ಈ ಚಿತ್ರ 8ನೇ ಶತಮಾನದಲ್ಲಿ ಚೀನಾವನ್ನು ಆಳಿದ ತಂಗ್ ವಂಶದ ಕುರಿತು ನಿರ್ಮಿಸಲಾಗಿದೆ. ಈ ಅವಧಿಯಲ್ಲಿ ಭ್ರಷ್ಟರನ್ನು ಹತ್ಯೆ ಮಾಡಲು ನೇಮಕಗೊಂಡ ನೀ ಯಿನ್ನಿಯಾಂಗ್ ಎಂಬ ಹತ್ಯೆಗಾರ್ತಿ ನೇಮಕವಾಗುತ್ತಾಳೆ. ನಂತರ ಉತ್ತರ ಚೀನಾದ ಮಿಲಿಟರಿ ಅಧಿಕಾರಿ ಮತ್ತು ಸ್ವತಃ ಆಕೆಯ ಸಂಬಂಧಿಯನ್ನು ಕೊಲ್ಲುವ ಸಂದರ್ಭ ಎದುರಾಗುವುದರ ಬಗ್ಗೆ ಈ ಚಿತ್ರ ತಿಳಿಸಲಿದೆ. 2015ರ ಕ್ಯಾನೆ ಫಿಲ್ಮ್ ಫೆಸ್ಟಿವಲ್ ನಲ್ಲಿ, ನಿರ್ದೇಶಕ ಹಸಿಯೊ ಹಸಿನ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದಿದ್ದಾರೆ.

ದೀಪನ್ (ಸ್ಕ್ರೀನ್-5, ವರ್ಷ-2015, 115 ನಿಮಿಷ) (ಆರಂಭದ ಸಮಯ: 06.10) (ನಿರ್ದೇಶಕ: ಜಾಕಸ್ ಔಡಿಯಾರ್ಡ್)

ಫ್ರೆಂಚ್ ಭಾಷೆಯ ಸಿನಿಮಾ ಎಲ್ ಟಿ ಟಿ ಇ ಸಂಘಟನೆ ಶ್ರೀಲಂಕಾ ಸೇನೆ ವಿರುದ್ಧ ಸೋತ ನಂತರ, ಅದರ ಸದಸ್ಯನೊಬ್ಬ ನಿರಾಶ್ರಿತರ ಶಿಬಿರದಿಂದ ಫ್ರಾನ್ಸ್ ಗೆ ಪ್ರಯಾಣ ಬೆಳೆಸುತ್ತಾನೆ. ಈ ವೇಳೆ ದೀಪನ್ ಎಂಬ ಮೃತ ವ್ಯಕ್ತಿಯ ಪಾಸ್ ಪೋರ್ಟ್ ಬಳಸಿ ಕಾನೂನು ಬಾಹಿರವಾಗಿ ಪ್ಯಾರಿಸ್ ಗೆ ತೆರಳಿ ಅಲ್ಲಿ ಹೊಸ ಜೀವನವನ್ನು ಕಟ್ಟಿಕೊಳ್ಳುವ ಪ್ರಯತ್ನ ನಡೆಸುತ್ತಾನೆ. ಆ ನಂತರ ಆತ ಎದುರಿಸುವ ಸಮಸ್ಯೆಗಳನ್ನು ಈ ಚಿತ್ರ ತೆರೆಯ ಮೇಲೆ ನಮಗೆ ಪರಿಚಯಿಸಲಿದೆ. ಈ ಚಿತ್ರ 2015ರ ಕ್ಯಾನನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪಾಲ್ಮೆ ಡಿ ಒರ್ ಪ್ರಶಸ್ತಿ ಪಡೆದಿದೆ.

ತನ್ನಾ (ಸ್ಕ್ರೀನ್-7, ವರ್ಷ-2015, 100 ನಿಮಿಷ) (ಆರಂಭದ ಸಮಯ: 10.00) (ನಿರ್ದೇಶಕ: ಮಾರ್ಟಿನ್ ಬಟ್ಲರ್/ ಬೆಂಟ್ಲೆ ಡೀನ್)

ಆಸ್ಟ್ರೇಲಿಯಾದ ಬುಡಕಟ್ಟು ಜನಾಂಗದ ಜೀವನ ಶೈಲಿ ಹಾಗೂ ಅಲ್ಲಿನ ಸಂಸ್ಕೃತಿಯನ್ನು ಈ ಚಿತ್ರ ಬಿಂಬಿಸುತ್ತದೆ. ಯಾಕೆಲ್ ಎಂಬ ಹಳ್ಳಿಯಲ್ಲಿದ್ದ ಕಟ್ಟ ಕಡೇಯ ಬುಡಕಟ್ಟು ಜನರ ಕುರಿತು ಈ ಚಿತ್ರ ನಿರ್ಮಿಸಲಾಗಿದೆ. ಎರಡು ಬುಡಕಟ್ಟು ನಡುವಣ ದ್ವೇಷದ ನಡುವೆ, ಅರಳುವ ಪ್ರೇಮ ಕತೆ, ಆ ಪ್ರೇಮಿಗಳು ಎದುರಿಸುವ ಸಂಕಷ್ಟವನ್ನು ಕಥೆಯಲ್ಲಿ ಉತ್ತಮ ಶೈಲಿಯಲ್ಲಿ ರೂಪಿಸಲಾಗಿದೆ. ಈ ಚಿತ್ರ 72ನೇ ವೆನಿಸ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ವೀಕ್ಷಕರ ಆಯ್ಕೆ ಪ್ರಶಸ್ತಿಯನ್ನು ಪಡೆಯಿತು.

ಎಂಬ್ರೆಸ್ ಆಫ್ ಸರ್ಪೆಂಟ್ (ಸ್ಕ್ರೀನ್-10, ವರ್ಷ-2015, 125 ನಿಮಿಷ) (ಆರಂಭದ ಸಮಯ: 12.50) (ನಿರ್ದೇಶಕ: ಸಿರೊ ಗುಯೆರಾ)

ಕೊಲಂಬಿಯಾ ದೇಶದ ಬುಡಕಟ್ಟು ಜನರು ಹಾಗೂ ಅಲ್ಲಿನ ನಾಗರೀಕತೆಯ ಕುರಿತು ನಿರ್ಮಿಸಲಾಗಿರುವ ಚಿತ್ರವಾಗಿದ್ದು, ಕೊಲಂಬಿಯಾ ಅಮೇಜಾನ್ ಪ್ರದೇಶವನ್ನು ಚಿತ್ರವನ್ನು ತಾಂತ್ರಿಕ ವೈಭವತೆಯಿಂದ ಚಿತ್ರೀಕರಿಸಲಾಗಿದೆ. ಕೊಲಂಬಿಯಾದ ಸಂಸ್ಕೃತಿಯನ್ನು ಈ ಚಿತ್ರ ಅತ್ಯುತ್ತಮವಾಗಿ ಬಿಂಬಿಸಲಿದೆ. ಈ ಚಿತ್ರ 1909ರಿಂದ 1940ರವರೆಗೆ ಅಲ್ಲಿನ ಬುಡಕಟ್ಟು ಜನಾಂಗದ ಇಬ್ಬರೂ ಖ್ಯಾತ ನಾಯಕರ ಕುರಿತು ನಿರ್ಮಿಸಲಾಗಿದೆ. ಈ ಚಿತ್ರ 88ನೇ ಅಕಾಡೆಮಿ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ವಿದೇಶಿ ಚಿತ್ರ, 2015ರ ಕ್ಯಾನೆ ಫಿಲ್ಮ್ ಫೆಸ್ಟಿವಲ್ ನ ಡೈರೆಕ್ಟರ್ ಫೋರ್ಟ್ ನೈಟ್ ವಿಭಾಗದಲ್ಲಿ ಆರ್ಟ್ ಸಿನೆಮಾ ಅವಾರ್ಡ್ ಪಡೆದಿದೆ.

ಇತರೆ ಪ್ರಮುಖ ಚಿತ್ರಗಳು: ರಮ್ಸ್ (ಸ್ಕ್ರೀನ್-04, 93 ನಿಮಿಷ) (ಆರಂಭದ ಸಮಯ: 11.50), ಕಾರ್ನ್ ಐಸ್ ಲ್ಯಾಂಡ್ (ಸ್ಕ್ರೀನ್-07, 100 ನಿಮಿಷ) (ಆರಂಭದ ಸಮಯ: 03.00), ಹೌ ಟು ವಿನ್ ಅಟ್ ಚೆಕ್ಕರ್ಸ್ (ಸ್ಕ್ರೀನ್-07, 80 ನಿಮಿಷ) (ಆರಂಭದ ಸಮಯ: 08.40), ಉತೋಪಿಯಾ (ಸ್ಕ್ರೀನ್-08, 90 ನಿಮಿಷ) (ಆರಂಭದ ಸಮಯ: 18.00)

ಮೈಸೂರಿನಲ್ಲಿ ಪ್ರದರ್ಶನದ ಚಿತ್ರಗಳು: ಲೆನ್ಸ್ (ಸ್ಕ್ರೀನ್-01, 109 ನಿಮಿಷ) (ಆರಂಭದ ಸಮಯ: 03.00), ಕೋರ್ಟ್ (ಸ್ಕ್ರೀನ್-2, ವರ್ಷ-2015, 92 ನಿಮಿಷ) (ಆರಂಭದ ಸಮಯ: 05.30), ತಿಥಿ (ಸ್ಕ್ರೀನ್-2, ವರ್ಷ-2015, 123 ನಿಮಿಷ) (ಆರಂಭದ ಸಮಯ: 05.45), ಟ್ಯಾಕ್ಸಿ ತೆಹ್ರಾನ್ (ಸ್ಕ್ರೀನ್-2, ವರ್ಷ-2015, 82 ನಿಮಿಷ) (ಆರಂಭದ ಸಮಯ: 08.00), ಎನ್ ಕ್ಲೇವ್ (ಸ್ಕ್ರೀನ್-3, ವರ್ಷ-2015, 92 ನಿಮಿಷ) (ಆರಂಭದ ಸಮಯ: 06.00)

Leave a Reply