300 ಕೋಟಿ ರುಪಾಯಿ ಆಸ್ತಿ ದಾನಮಾಡಿ ನಡೆದರು ಬ್ರಾಹ್ಮಣ ಮಹಾಸಭಾಧ್ಯಕ್ಷ ಬಿಎನ್ವಿ ಸುಬ್ರಹ್ಮಣ್ಯ..

ಡಿಜಿಟಲ್ ಕನ್ನಡ ಟೀಮ್

ಬಾಲ್ಯದಲ್ಲಿ ಹಾಸೊದ್ದಿದ್ದ ಬಡತನವನ್ನೇ ಸವಾಲಾಗಿ ಸ್ವೀಕರಿಸಿ ಜೀವನದುದ್ದಕ್ಕೂ ನಿಷ್ಠೆ, ಪ್ರಾಮಾಣಿಕತೆಯಿಂತ ದುಡಿದರು. ಗುರಿ ಮುಟ್ಟುವವರೆಗೂ ದುಡಿದರು. ನೂರಾರು ಕೋಟಿ ರುಪಾಯಿ ಬೆಲೆ ಬಾಳುವ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು. ಕೊನೆಗೊಂದು ದಿನ ಈ ಆಸ್ತಿ-ಪಾಸ್ತಿಯನ್ನೆಲ್ಲ ದಾನ ಮಾಡಿ, ಪರೋಪಕಾರಿ ಶಬ್ದವನ್ನಲಂಕರಿಸಿದರು.

ಇವರೇ ಶುಕ್ರವಾರ ರಾತ್ರಿ ಇಹಲೋಕ ಪ್ರಯಾಣ ಮುಗಿಸಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಬಿ.ಎನ್.ವಿ. ಸುಬ್ರಹ್ಮಣ್ಯ (74). ಜ್ಯೋತಿ ಸಮೂಹ ಶಿಕ್ಷಣ ಸಂಸ್ಥೆಗಳ ಮಾಲೀಕರಾಗಿದ್ದ ಇವರು ದಾನದಲ್ಲಿಯೂ ಶೂರರು. ಜೀವನದುದ್ದಕ್ಕೂ ಅದನ್ನೇ ಮಾಡಿಕೊಂಡು ಬಂದಿದ್ದ ಅವರು ಪತ್ನಿ ಸೀತಮ್ಮನವರ ಜೀವನಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಉಳಿಸಿ, ಸುಮಾರು 300 ಕೋಟಿ ರುಪಾಯಿ ಬೆಲೆ ಬಾಳುವ ಶಿಕ್ಷಣ ಸಂಸ್ಥೆಗಳನ್ನು ಶೃಂಗೇರಿ ಶಂಕರಮಠಕ್ಕೆ ಉಯಿಲು ಬರೆದು, ಇಹಲೋಕದ ವ್ಯಾಪಾರ ಮುಗಿಸಿದ್ದಾರೆ.

ಸುಬ್ರಹ್ಮಣ್ಯ ಅವರಿಗೆ ಅಂತಿಮ ನಮನ ಸಲ್ಲಿಸುತ್ತಿರುವ ಕೇಂದ್ರ ಸಚಿವ ಅನಂತ ಕುಮಾರ್ ಮತ್ತವರ ಪತ್ನಿ ತೇಜಸ್ವಿನಿ ಅನಂತ ಕುಮಾರ್, ಶಾಸಕ ರವಿ ಸುಬ್ರಹ್ಮಣ್ಯ
ಸುಬ್ರಹ್ಮಣ್ಯ ಅವರಿಗೆ ಅಂತಿಮ ನಮನ ಸಲ್ಲಿಸುತ್ತಿರುವ ಕೇಂದ್ರ ಸಚಿವ ಅನಂತ ಕುಮಾರ್ ಮತ್ತವರ ಪತ್ನಿ ತೇಜಸ್ವಿನಿ ಅನಂತ ಕುಮಾರ್, ಶಾಸಕ ರವಿ ಸುಬ್ರಹ್ಮಣ್ಯ

ಮೈಸೂರಿನ ಬೆಟ್ಟದಪುರದ ಕಡುಬಡ ಕುಟುಂಬದಲ್ಲಿ 1942 ಜನಿಸಿದ ಸುಬ್ರಹ್ಮಣ್ಯ ಐಟಿಐ ಮುಗಿಸಿ ಬೆಂಗಳೂರಲ್ಲಿ ತಿಂಗಳಿಗೆ 65 ರುಪಾಯಿ ಕೆಲಸಕ್ಕೆ ಸೇರಿಕೊಂಡವರು. ಯಾಕೋ, ಏನೋ ತಾವೇ ಒಂದು ಸಂಸ್ಥೆ ಕಟ್ಟಬೇಕೆನಿಸಿ ತಮ್ಮ ಮಗಳು ಜ್ಯೋತಿ ಹೆಸರಲ್ಲಿ ಶಂಕರಪುರದಲ್ಲಿ ಸ್ಟೀಲ್ ಇಂಡಸ್ಟ್ರೀ ಆರಂಭಿಸಿದರು. ಮುಟ್ಟಿದ್ದೆಲ್ಲ ಚಿನ್ನ. ಆದರೆ ಯಾಕೋ ಏನೋ ವಿಧಿ ಇವರ ಮೇಲೆ ಮುನಿಯಿತು. ಕಾಲೇಜಿಗೆ ಹೋಗುವ ಸಮಯದಲ್ಲೇ ಮಗಳು ಅಕಾಲಿಕ ಮರಣಕ್ಕೆ ತುತ್ತಾದಳು. ನೋವಿನ ಕಡಲಲ್ಲಿ ಮುಳುಗಿದರೂ, ವಿಚಲಿತರಾಗಲಿಲ್ಲ. ಬದಲಿಗೆ ಆಕೆಯ ಹೆಸರಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ, ಅಲ್ಲಿ ಕಲಿತ ಸಾವಿರಾರು ಮಕ್ಕಳಲ್ಲಿಯೇ ತಮ್ಮ ಮಗಳನ್ನು ಕಂಡರು. ಕನಕಪುರ ರಸ್ತೆಯ ಯಲಚೇನಹಳ್ಳಿ ಸಮೀಪ ಜ್ಯೋತಿ ಕೇಂದ್ರೀಯ ವಿದ್ಯಾಲಯ ನಂತರ ತಾತಗುಣಿ ಸಮೀಪ ಹತ್ತು ಎಕರೆ ಪ್ರದೇಶದಲ್ಲಿ ಜ್ಯೋತಿ ತಾಂತ್ರಿಕ ಕಾಲೇಜು ತೆರೆದರು. ಅಲ್ಲಿ ಕಲಿತ ಮಕ್ಕಳ ಭವಿಷ್ಯದಲ್ಲಿ ಜ್ಯೋತಿಯ ಆಸ್ತಿತ್ವ ಕಲ್ಪಿಸಿಕೊಂಡರು.

ಮಾನವತೆಯೇ ಮೈವೆತ್ತಂತ್ತಿದ್ದ ಸುಬ್ರಹ್ಮಣ್ಯ ಆರ್ಥಿಕ ದುರ್ಬಲ ಕುಟುಂಬಗಳ ಮಕ್ಕಳಿಗೆ ಸಹಾಯ ಮಾಡುತ್ತಾ ಬಂದವರು. ಯಾರಿಂದಲೂ ಡೊನೇಷನ್ ತೆಗೆದುಕೊಂಡವರಲ್ಲ. ಮೊದಲಿಂದಲೂ ಅದನ್ನು ವಿರೋಧಿಸುತ್ತಾ ಬಂದವರು. ಜತೆಗೆ ಬಡಮಕ್ಕಳಿಗೆ ಉಚಿತ ವ್ಯಾಸಂಗಕ್ಕೂ ವ್ಯವಸ್ಥೆ ಮಾಡಿದವರು. ಈ ದಾನಯಾನವೇ ಮುಂದೊಂದು ದಿನ ಅವರಿಗೆ ಸುಮಾರು 300 ಕೋಟಿ ರುಪಾಯಿ ಮೌಲ್ಯದ ಆಸ್ತಿಪಾಸ್ತಿಯನ್ನುಶಂಕರಮಠಕ್ಕೆ ದಾನಮಾಡಲು ಪ್ರೇರಣೆ ಆದದ್ದು.

ಸರಳ, ಸಜ್ಜನಿಕೆಯ ಸುಬ್ರಹ್ಮಣ್ಯ ಸಮುದಾಯ, ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದರು. ತಮ್ಮ ಮನೆಯಲ್ಲಿ ಮಕ್ಕಳನ್ನು ಇರಿಸಿಕೊಂಡು ವೇದ ಅಧ್ಯಯನಕ್ಕೆ ಅವಕಾಶ ಮಾಡಿಕೊಟ್ಟರು. ವೇದಾಧ್ಯಯನಕ್ಕೆ ಅನುಕೂಲವಾಗುವಂತೆ ಸ್ವಂತ ಖರ್ಚಿನಲ್ಲಿ ಋಗ್ವೇದವನ್ನು12 ಸಂಪುಟದಲ್ಲಿ ಕನ್ನಡಕ್ಕೆ ತಂದರು. ಕನಕಪುರದ ವಾಜರಹಳ್ಳಿಯಲ್ಲಿ ವೃದ್ಧಾಶ್ರಮ ಮಾಡಿದ್ದಾರೆ. ಗಾಂಧಿಬಜಾರ್ ಡಿವಿಜಿ ರಸ್ತೆಯ ಅಬಲಾಶ್ರದ ಹತ್ತಾರು ಹೆಣ್ಣು ಮಕ್ಕಳಿಗೆ ಸ್ವಂತ ಖರ್ಚಿನಲ್ಲಿ ಮದುವೆ ಮಾಡಿಸಿ ಉತ್ತಮ ಮನೆಗಳನ್ನು ಸೇರಿಸಿದ್ದಾರೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷರಾಗಿ ಐದು ಬಾರಿ ಆಯ್ಕೆಯಾಗಿದ್ದು, ಮಹಾಸಭಾದ ವನ್ನು ಮುನ್ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 2004 ರಲ್ಲಿ ಬೆಂಗಳೂರಿನಲ್ಲಿ ಬ್ರಾಹ್ಮಣ ಸಭಾದ ದಶಮಾನೋತ್ಸವ ಹಾಗೂ ಬ್ರಾಹ್ಮಣ ಸಮ್ಮೇಳನ ಯಶಸ್ವಿಯಾಗಿ ನಡೆಸಿದ ಕೀರ್ತಿ ಅವರದು. ಶೃಂಗೇರಿ ಮಠದ ಧರ್ಮ ಪ್ರವರ್ತಕ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನಾನಾ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ಪರೋಪಕಾರಿ ಸುಬ್ರಹ್ಮಣ್ಯ ಈಗ ನೆನಪು ಮಾತ್ರ.

30 COMMENTS

 1. When to-day’s generation is having the habit of making properties in crores and crores, the GREAT< SELFLESS MINDED SHRI BNV JI's donetion is very great, We our family pray the Lord to rest his sole in peace and bless strength to his fanily members to sustain his departing for ever, JAI SHRI RAM K.V.Venkatakrishna,Chamarajapuram, Mysuru

 2. Sriyuta BNV Subramanayam avaru indu ihaloka vyaapaara mugisidaroo, karnatakada janateya manadalli sadaa nenapaagi iruttaare. Avarobbaru yugapurusharu. Avaru viprarige, durabala janarige, bhaarateeya samskritige,samskrita bhaashege maadida seve annyaadrusha. Akhila karnataka samskrita parishat bandhugala paravaagi avarige namma koti namanagalu. Avara aatmake shaanti korutteve.

 3. TUMBA DODDA VYAKTI, NISVARTHA JEEVANA NADESI, GALISIDDELLAVANNU DAANA MAADI ONDU SARTHAKA BADUKANNU NADESI MUKTI HONDIDDARE. AVARA ATMAKKE CHIRASHANTI DORAKALI. 74 ANTHA VAYASSENU ALLA INTHAVARU INNU HECHUKALA IRABEKITTU. DAIVECHE, AVARA KUTUMBAKKE, I DUKHAVANNU BHARISIVA SHAKTIYANNU BHAGAVANTA NEEDALI.

 4. SAVIRAARU JANAGALA JEEVANVANNU KATTIKOTTU PUNYADA KELASAVANNU MAADIRUVA SRI SUBRAHMANYA CHIRASMARANEEYARU, PRAHTHASMARANEEYARU.

 5. Sir bahu dukkhavaagitide manage. Nanna tammana magalige free yaagi schoolinalli seat kotta mahatma avaru. Manage avara parichaya tumba haleyadu. Nijavaagiyu avaraddu devarantha hoo manassu. Avara aatmakke shanthi sigali alla avaru devaralli serirutaare eavelege. Seethammanavarige Mano dheirya as devare kodabeku.

 6. Sri BNV a poornayu has lead a life worthy of emulation and is a beacon for many youths n others. His selfless sacrifice has given him a stellar role ever cherishable and memorable. Let his soul rest in peace.

  G R Ravi Kumar, from Seattle, USA.

 7. BNV sir is one of the most humble, kind and above all, a great human being I’ve known. I remember him greeting us with a warm smile every time I visited the adjacent house with my parents for collecting my school uniforms. It is indeed a heartfelt loss. May his soul rest in peace.

 8. sri sri sri BNV sir has attained moksha while living.
  he is a supreme guru/philanthrophist of our times. this is a time where people/politicians are amassing wealth & looting the country , here we had a person who lived like a karma yogi all his life on a minute and minute basis. this person has attained moksha while living, which itself is a very rare achivement. the Govt & other educational bodies should now think of a powerful title which beffits sir BNV. the govt should confer a padmashree on him leavind aside his brahminical leniage— sir BNV is not dead since he will be living in our hearts & minds as long as we live.such people will never die…they have left their mortal coils to work on higher planes… I am too immature to speak on BNV sir but still my heart & mind wanted to contribute something on a man who contributed a lot to education,society & mankind, thank you

  from: sreenivas K.V.(prop)
  Lab Reagents & allied pdts,
  Bangalore-560019.

 9. Sri B N V Subranyam is a noble soul, who has been supporting the needy always. He has been a great inspiration for many persons, for his simplicity and humbleness. His love towards the children, whom he has nourished and cherished, through his educational institutions are plenty. His thoughts of selflessness needs to be practiced by all, to build a equal base for all to live peacefully. By the way of donating, his assets, for a better administration and management and growth, has shown his vision, for the growth of the institutions he has built and make a benchmark for providing education.
  We all miss him, a sad untimely departure. We pray the almighty to rest his soul in peace. we also pray to provide strength to his family members to overcome the grief and walk in the path and direction, he has set. sri Gurubhyo Namaha.

 10. ಬದುಕಿದ್ದಾಗ ಅಗತ್ಯಕ್ಕೆ ಮೀರಿ ಗಳಿಸಿದ್ದರೂ ಸಹಾ,ಕೊನೆಗೊಮ್ಮೆ ಅವೆಲ್ಲಾ ಅರ್ಥಹೀನ ಎಂಬುದನ್ನು ಮನದಟ್ಟು ಮಾಡಿಕೊಂಡು ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ನಿರ್ವಿಕಾರದಿಂದ ಮೋಕ್ಷಪಥಕ್ಕೆ ನೆಡೆವುದರ ಮೂಲಕ ‘ಅರ್ಥವೇ’ ಜೀವನದ ಪರಮೋದ್ಧೇಷ್ಯ ಎಂದು ತಿಳಿದವರಿಗೆ ಒಂದು ಪಾಠ ಹೇಳಿದ್ದಾರೆ … ಮಹಾನ್ ಚೇತನಕ್ಕೆ ನಮನ ..

 11. We see such persons in candle light and i heared that he helped very lot to the students from his education institutions. Really i bend my haed before bvs sir hatsoff and u r great sir.

 12. ಬಂದದೆಲ್ಲಾ ಶಿವನಿಂದ ಮತ್ತೆ ಶಿವನಿಗೇ ಸಮರ್ಪಣೆ , ಖಂಡಿತ ಕಲಿಯುಗದ ದೇವರು ಅವರುಗಳು.

 13. Really thumba great….egen Jana maglu madvege kotti kotti karchu madthare thuu avre janmake sir you are always great

Leave a Reply