ಬಿಲ್ ಗೇಟ್ಸ್ ಬಿಬಿಸಿ ಸಂದರ್ಶನ, ನೀವು ಓದಿಕೊಳ್ಳಬೇಕಾದ 3 ಆಸಕ್ತಿಕರ ಆಯಾಮ

ಡಿಜಿಟಲ್ ಕನ್ನಡ ಟೀಮ್

ಯಶಸ್ವಿ ಪುರುಷರು ಯಾವಾಗ, ಏನೇ ಮಾತನಾಡಿದರೂ ಅಲ್ಲಿಂದ ಆಯ್ದುಕೊಳ್ಳಬೇಕಿರುವ ಅಂಶಗಳು ಇದ್ದೇ ಇರುತ್ತವೆ. ಇತ್ತೀಚೆಗೆ ಮೈಕ್ರೊಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ತಮ್ಮ ಹಳೆದಿನಗಳನ್ನುನೆನಪಿಸಿಕೊಳ್ಳುತ್ತ ಬಿಬಿಸಿ ರೆಡಿಯೋಕ್ಕೆ ಸಂದರ್ಶನ ನೀಡಿದರು. ಅದರಲ್ಲಿ ಕೆಲವು ಆಸಕ್ತಿಕರ ಆಯಾಮಗಳನ್ನು ಹರವಿಟ್ಟರು.

  • ಮೈಕ್ರೊಸಾಫ್ಟ್ ಆರಂಭದ ದಿನಗಳಲ್ಲಿ ವಾರಾಂತ್ಯದಲ್ಲೂ ಬಿಡುವು ತೆಗೆದುಕೊಳ್ಳದೇ ದುಡಿಯುತ್ತಿದ್ದೆ. ರಜೆ ತೆಗೆದುಕೊಳ್ಳುವುದರಲ್ಲಿ ನಂಬಿಕೆಯೇ ಇರಲಿಲ್ಲ. ಕೆಲಸದಲ್ಲಿ ನಾನು ಪಾಲಿಸುತ್ತಿದ್ದ ಕಾಠಿಣ್ಯವನ್ನು ಕೆಲಸಗಾರರ ಮೇಲೂ ಹೇರದೇ ಇರೋದೇ ಸವಾಲಾಗಿತ್ತು. ಆದರೆ, ಆಗಿದ್ದ ಸೀಮಿತ ಉದ್ಯೋಗಿಗಳ ಪೈಕಿ ಎಲ್ಲರ ಕಾರಿನ ನಂಬರ್ ಪ್ಲೇಟ್ ನನ್ನ ತಲೆಯಲ್ಲಿತ್ತು. ಪಾರ್ಕಿಂಗ್ ಅಂಗಳ ನೋಡಿಯೇ ಯಾರು ಎಷ್ಟು ಹೊತ್ತಿಗೆ ಬಂದರು, ಇನ್ಯಾರು ಹೊರಹೋದರು ಎಂಬುದನ್ನು ಲೆಕ್ಕ ಹಾಕ್ತಿದ್ದೆ. ಕಂಪನಿ ದೊಡ್ಡದಾಗುತ್ತ ಹೋದಂತೆ ಅಷ್ಟೆಲ್ಲ ನಿಗಾ ವಹಿಸುವುದನ್ನು ಬಿಟ್ಟೆ.
  • ಹೈಸ್ಕೂಲ್ ದಿನಗಳಲ್ಲೇ ಸಹವರ್ತಿ  ಪೌಲ್ ಜತೆ ಸೇರಿಕೊಂಡು ಶಾಲೆಯ ಕಂಪ್ಯೂಟರ್ ಶಿಸ್ತುಪಟ್ಟಿಗೆ ಲಗ್ಗೆ ಹಾಕಿದ್ದೆವು. ಇದರಿಂದ ನಾನು ಯಾವಾಗಲೂ ಚೆಂದದ ಹುಡುಗಿಯರ ಪಕ್ಕದಲ್ಲೇ ಕುಳಿತುಕೊಳ್ಳುವಂತೆ ಶೆಡ್ಯೂಲ್ ಬದಲಿಸುವಂತಾಯಿತು. ಆದರೆ ಆ ದಿನಗಳಲ್ಲಿ ಹುಡುಗಿಯರೇ ಮಾತನಾಡಿಸಿದರೂ ನಾನು ಅವರೊಂದಿಗೆ ಸಂವಹನ ನಡೆಸುವ ಕಲೆ ಕಲಿತಿರಲಿಲ್ಲ. ಪೌಲ್ ನನಗಿಂತ ಹಿರಿಯನಾದ್ದರಿಂದ ಎರಡು ವರ್ಷ ಮೊದಲೇ ಶಾಲೆ ಮುಗಿಸಿ ಹೋಗಿಬಿಟ್ಟ. ನಂತರ ಹಾರ್ವರ್ಡ್ ಗೆ ಹೋದಾಗ ಸ್ವಲ್ಪ ಮಟ್ಟಿಗೆ ಸಂವಹನ ನಡೆಸುವುದು ಸಾಧ್ಯವಾಯಿತು.
  • ಪರ್ಸನಲ್ ಕಂಪ್ಯೂಟಿಂಗ್ ವಿಷಯಕ್ಕೆ ಬಂದಾಗ ಇತಿಹಾಸದಲ್ಲಿ ಪ್ರತ್ಯೇಕವಾಗಿಯೇ ನಿಲ್ಲುವಾತ ಸ್ಟೀವ್ ಜಾಬ್ಸ್. ಆತನ ಜತೆ ಕೆಲಸ ಮಾಡುತ್ತ ಆ್ಯಪಲ್ಸ್-2 ಯೋಜನೆಗೆ ತಂತ್ರಾಂಶ ಬರೆದೆ. ಆತ ಕೆಲವೊಮ್ಮೆ ಬಹಳ ಕಾಠಿಣ್ಯದಿಂದ, ಇನ್ನು ಕೆಲವೊಮ್ಮೆ ಬಹಳ ಪ್ರೋತ್ಸಾಹದಾಯಕವಾಗಿ ವರ್ತಿಸುತ್ತಿದ್ದ. ವ್ಯಕ್ತಿಗಳಿಂದ ಕೆಲಸ ತೆಗೆಯುವ ಕಲೆ ಅವನಿಗೆ ಗೊತ್ತಿತ್ತು.

Leave a Reply