ಭಾರತದ ಪತ್ರಕರ್ತರು ನಿರಾತಂಕವಾಗಿದ್ದಾರಾ? ಈ ವರದಿ ಓದಿ..

 

 

ಡಿಜಿಟಲ್ ಕನ್ನಡ ಟೀಮ್

2015ರಲ್ಲಿ ಜಾಗತಿಕ ಮಟ್ಟದಲ್ಲಿ ಹತ್ಯೆಗೆ ಒಳಗಾದ ಪತ್ರಕರ್ತರ ಸಂಖ್ಯೆ 110. ಭಾರತದ ಪತ್ರಕರ್ತರಿಗೇನು, ಆರಾಮಾಗಿದ್ದಾರೆ ಅಂತ ಸಾರ್ವತ್ರೀಕರಣ ಮಾಡುವಂತಿಲ್ಲ. ಏಕೆಂದರೆ ಪತ್ರಕರ್ತರಿಗೆ ಅಪಾಯಕಾರಿ ಎಂದು ಪರಿಗಣಿಸಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.

ಕಳೆದ ವರ್ಷ ಭಾರತದಲ್ಲಿ 9 ಮಂದಿ ವರದಿಗಾರರು ಕೊಲೆಯಾಗಿದ್ದು ಇಲ್ಲಿಯವರೆಗೂ ಈ ಕೊಲೆಗಳಿಗೆ ಕಾರಣಗಳು ತಿಳಿದಿಲ್ಲ ಎಂಬುದು ಮತ್ತಷ್ಟು ಆತಂಕದ ಸಂಗತಿ. ಏಷ್ಯಾದಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ರಾಷ್ಟ್ರಗಳಿಗಿಂತ ಭಾರತ ಅತಿ ಡೆಡ್ಲಿಯಸ್ಟ್ ರಾಷ್ಟ್ರ ಎಂಬ ಅಘಾತಕಾರಿ ಅಂಶವನ್ನು ರಿಫೋರ್ಟರ್ಸ್ ವಿತ್ ಔಟ್ ಬಾರ್ಡರ್ಸ್ (ಆರ್.ಎಸ್.ಎಫ್) ತನ್ನ ವಾರ್ಷಿಕ ವರದಿಯಲ್ಲಿ ಹೊರಹಾಕಿದೆ.

ಸದಾ ಯದ್ಧ ಮತ್ತು ಉಗ್ರರ ದಾಳಿಗಳಿಗೆ ಹೆಸರಾಗಿರುವ ಇರಾಕ್ (11), ಸಿರಿಯಾ (10), ಪತ್ರಕರ್ತರ ಕೊಲೆಯಾಗಿದೆ. ಈ ಸಂಖ್ಯೆ ಭಾರತಕ್ಕಿಂತ ಮುಂದಿದೆ. ನಂತರ ಸ್ಥಾನದಲ್ಲಿ ಪ್ರಾನ್ಸ್ (8) ಯಮೆನ್ (8), ಮೆಕ್ಸಿಕೊ (8), ದಕ್ಷಿಣ ಸೂಡನ್ (7), ಫಿಲಿಫೈನ್ಸ್(7), ಹೊಂಡುರಾಸ್ (7) ಪತ್ರಕರ್ತರು ಸೇರಿ ಒಟ್ಟು 110 ಪತ್ರಕರ್ತರು ಕರ್ತವ್ಯಕ್ಕೆ ಸಂಭಂದಿಸಿ ಅಥವಾ ಅಸ್ಪಷ್ಟ ಕಾರಣಗಳಿಗೆ ಕೊಲೆಗಿಡಾಗಿದ್ದಾರೆ. 2005 ರಿಂದ ಇಲ್ಲಿಯವರೆಗೆ 787 ಪತ್ರಕರ್ತರು ಕೊಲೆಯಾಗಿರುವ ಬಗ್ಗೆ ಆರ್ ಎಸ್ ಎಫ್ ತಿಳಿಸಿದೆ. ಭಾರತದ ಪತ್ರಕರ್ತರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ರಾಜಕೀಯ ವ್ಯಕ್ತಿಗಳ ಬಗ್ಗೆ ನಿರ್ಭಿತಿಯಿಂದ ವರದಿ ಮಾಡಿರುವುದೇ ಹೆಚ್ಚಿನ ಪ್ರಕರಣಗಳಲ್ಲಿ ಸಾವಿಗೆ ಕಾರಣವಾಗಿದೆ ಎನ್ನುತ್ತದೆ ವರದಿ.

Leave a Reply